ಜೂ.26ಕ್ಕೆ ‘ರಕ್ಷಕ -2’ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೆ
The film 'Rakshasa-2' to be released across the state on June 26th
ಲೋಕದರ್ಶನ ವರದಿ
ಬೆಂಗಳೂರು 20: ಸರ್ವೇಶ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ‘ರಕ್ಷಕ-2’ ಕನ್ನಡ ಚಲನಚಿತ್ರವು ಇದೆ ಜೂ.26ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹಿಂದೆ ಶತದಿನೋತ್ಸವ ಕಂಡ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರದ ನಿರ್ದೇಶಕರಾದ ಡಾ. ಆರ್ ವಿಜಯ್ ಕುಮಾರ್ ನಟಿಸಿ ನಿರ್ದೇಶನ ಮಾಡಿರುವ ಮೂರನೇ ಚಿತ್ರವಿದು. ಈ ಚಿತ್ರದಲ್ಲಿ ಲವ್ಹ್- ಆಕ್ಷನ್-ಫ್ಯಾಮಿಲಿ ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ ಜೊತೆಗೆ ಚಿತ್ರದಲ್ಲಿ ಮೂರು ಹಾಡುಗಳಿವೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಚಿತ್ರವಾಗಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಆರ್.ವಿಜಯಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಪ್ರಮುಖ ಪಾತ್ರದಲ್ಲಿ ಚಿತ್ರದ ನಿರ್ದೇಶಕ ಡಾ. ಆರ್ ವಿಜಯ್ ಕುಮಾರ್ ಅವರು ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ , ಖ್ಯಾತ ಹಾಸ್ಯ ನಟ ಲಯಕೋಕಿಲ ಹೆಡ್ ಕಾನ್ಸ್ಟೇಬಲ್ ಆಗಿ ಅಭಿನಯಿಸಿದ್ದು ನಾಯಕ ನಟರಾಗಿ ರಾಜವಂಶಿ, ನಾಯಕಿಯಾಗಿ ರಾಧಿಕಾ ,ಮುಖ್ಯ ಪಾತ್ರದಲ್ಲಿ ಮಧುಶ್ರೀ ಖಳನಾಯಕನಾಗಿ ಹಿರಿಯ ನಟ ಸುರೇಂದ್ರ ಕುಮಾರ್, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್, ರೋಹಿಣಿ ಮೊದಲಾದವರು ಅಭಿನಯಿಸಿದ್ದಾರೆ.
ಛಾಯಾಗ್ರಹಣ ವಿಜಯ್ ಮಧಾಳೇ ಮತ್ತು ಆಕಾಶ, ಸಂಕಲನ ವಿಜಯ್ ಮಧಾಳೇ, ಸಾಹಸ ವೈಲೆಂಟ್ ವೇಲು, ಪ್ರಸಾಧನ ಜೀವನ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಕಥೆ-ಚಿತ್ರಕಥೆ- ಸಂಭಾಷಣೆ-ಸಂಗೀತದ ಜೊತೆಗೆ ನಿರ್ದೇಶನವನ್ನು ಡಾ. ಆರ್ ವಿಜಯಕುಮಾರ್ ಮಾಡಿದ್ದಾರೆ. ನಿರ್ಮಾಪಕ ವಿ.ಶಿವ್ ಸರ್ವೇಶ್ ಅವರು ಚಿತ್ರವನ್ನು ನಿರ್ಮಿಸಿದ್ದು ವಿಎಸ್ ಕೆ ಸಿನೆ ಕ್ರಿಯೇಷನ್ಸ್ ವಿಶಾಲ ಕರ್ನಾಟಕಕ್ಕೆ ಹಂಚಿಕೆದಾರರಾಗಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 