ಮಿತಿಮೀರಿದ ದಲ್ಲಾಳಿ ಹಾಗೂ ಕಂಪನಿಗಳ ಹಾವಳಿಗೆ ಕಂಗಾಲಾದ ಅನ್ನದಾತ ಮಧ್ಯವರ್ತಿಗಳ ಲಾಭಕ್ಕೆ ರೈತನ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ
The farmers' stomachs are filled with cold clothes for the profit of the middlemen who are fed by ex
ಶಿರಹಟ್ಟಿ 13 : ಗೋವಿನ ಜೋಳದ ಬೆಂಬಲ ಬೆಲೆಯಲ್ಲಿ ಸರ್ಕಾರ ಮಲತಾಯಿ ಧೋರಣಿ ತೋರಿಸುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತ ಹೊಟ್ಟೆಗೆ ತಣ್ಣಿರು ಬಟ್ಟೆ ಕಟ್ಟಿಕೊಳ್ಳುವ ಪರೀಸ್ಥಿತಿ ನಿರ್ಮಾಣವಾಗುತ್ತಿದ್ದು, ಸರ್ಕಾರ ಖುದ್ದಾಗಿ ಮುತುವರ್ಜಿ ವಹಿಸಿ ಕೇವಲ 4ರಿಂದ 5ದಿನಗಳಲ್ಲಿ ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಖರೀದಿಸಲು ಕೇಂದ್ರವನ್ನು ಸ್ಥಾಪಿಸಬೇಕು ಇಲ್ಲವಾದರೆ ತಹಶೀಲ್ದಾರ ಕಛೇರಿಗೆ ಬೀಗ ಜಡಿದು ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರೈತ ಹೋರಾಟಗಾರರಾದ ರವಿಕಾಂತ ಅಂಗಡಿ ಹೇಳಿದರು. ಗುರುವಾರ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಗೋವಿನಜೋಳ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೇರೆಯದಿರುವ ಹಿನ್ನಲೆಯಲ್ಲಿ ಸಮಗ್ರ ರೈತ ಹೋರಾಟ ಸಮೀತಿ ವತಿಯಿಂದ ಹಮ್ಮಿಕೊಂಡ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಸ್ವಾಮಿ ಕೃಷಿ ಸಚಿವರೆ, ಐಷಾರಾಮಿ ಜೀವನ ಬಿಟ್ಟು ರೈತನ ಕಷ್ಟ ಒಮ್ಮೆ ನೋಡಿ, ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಶೇಕಡಾ 80 ಪ್ರತಿಶತ ರೈತರು ಮೆಕ್ಕೆಜೋಳವನ್ನು ಬೇಳೆದು ಕಂಗಾಲದಂತಹ ನಿದರ್ಶನ ನಿಮ್ಮಮುಂದಿದೆ. ಹಾಗಾಗಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರದಿಂದಲೇ ಖರೀದಿ ಕೇಂದ್ರವನ್ನು ಸ್ಥಾಪಿಸಿ ಖನಿಷ್ಟ 2400 ರಿಂದ 3000 ರೂಗಳನ್ನು ಬೆಂಬಲಿಸಿದರೆ ರೈತರು ಬದುಕುವದಕ್ಕೆ ಸಾಧ್ಯ. ಇಲ್ಲವಾದರೆ ರೈತ ಆತ್ಮಹತ್ಯಯಾದರೆ ನೇರವಾಗಿ ಸರ್ಕಾರ ಹಾಗೂ ಕೃಷಿ ಇಲಾಖೆಯ ಸಚಿವರು ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದರು. ರೈತ ಮುಖಂಡ ಸಂತೋಷ ಕುರಿ ಮಾತನಾಡಿ, ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಪ್ರತಿ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ ಸುಮಾರು 3000 ಸಾವಿರ ಬೆಲೆಯನ್ನು ನಿಗದಿ ಪಡಿಸಬೇಕು. ಒಂದು ಬೆಳೆಯನ್ನು ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾದರೆ ಅದರ ಹಿಂದೆ ಏನೆಲ್ಲ ಕಷ್ಟ ಇದೆ ಎಂಬುದು ರಾಜಕಾರಣಿಗಳಿಗೆ ಗೊತ್ತಿರದ ಸಂಗತಿ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಜೊತೆ ಚಲ್ಲಾಟವಾಡುವುದನ್ನು ಬಿಟ್ಟು ಖರೀದಿ ಕೇಂದ್ರವನ್ನು ಪ್ರಾರಂಭಿಸದೇ ಹೋದರೆ ನಾವು ಉಗ್ರವಾದ ಹೋರಾಟ ಮಾಡುವುದು ನಮಗೆ ಅನಿವಾರ್ಯ ಎಂದರು. ಇನ್ನೋರ್ವ ರೈತ ಮುಖಂಡರಾದ ತಿಪ್ಪಣ್ಣ ಕೊಂಚಿಗೇರಿ ಮಾತನಾಡಿ, ಗೋವಿನ ಜೋಳ ಬಿತ್ತನೆಯ ಸಮಯ ಬಂದಾಗ ಮೊದಲನೆಯದಾಗಿ ಸರ್ಕಾರ ಸಮರ್ಕವಾಗಿ ಗೊಬ್ಬರ ಪೂರೈಸದೇ ಇರುವುದರಿಂದ ತಾಲೂಕಿನ ರೈತರೆಲ್ಲ ಬೇರೆ ಕಡೆಡಗಳಲ್ಲಿ ಹೆಚ್ಚಿನ ಬೆಲೆತೆತ್ತು ಗೊಬ್ಬರವನ್ನು ಖರೀದಿ ಮಾಡಿದ್ದಾರೆ. ಮಳೆ ಹೆಚ್ಚಾದ ಕಾರಣ ಯೂರಿಯ ಗೊಬ್ಬರದ ಮೊರೆ ಹೋದರೆ ಸರ್ಕಾರ ಅದನ್ನು ಪೂರೈಸದೆ ಕೈ ಚಲ್ಲಿದ್ದು, ಅದಕ್ಕೂ ಹೆಚ್ಚಿನ ಬೆಲೆತೆತ್ತು ರೈತ ಸಮೂಹ ಖರೀದಿ ಮಾಡಿದ್ದಾರೆ. ನಮ್ಮ ಶಿರಹಟ್ಟಿ ತಾಲೂಕಿನಲ್ಲಿ ಹೆಸರು ಬೆಳೆಗೆ ಮಾತ್ರ ಪರಿಹಾರ ಘೋಸಿಸಿದ್ದು, ಬೇರೆ ಬೇರೆ ತಾಲೂಕುಗಳಲ್ಲಿ ಗೋವಿನ ಜೋಳಕ್ಕೂ ಪರಿಹಾರ ವಿತರಣೆಯಾಗಿದೆ. ನಮ್ಮ ತಾಲೂಕಿಗೂ ಅಲ್ಪ ಪ್ರಮಾಣವಾದರೂ ಪರಿಹಾರ ನೀಡಿದ್ದರೆ ರೈತ ಬದುಕಲು ಸಾಧ್ಯವಾಗುತ್ತಿತ್ತು. ಈಗಾಗಲೇ ಬಂದಿರುವಂತಹ ಹೆಸರು ಬೆಳೆಯನ್ನೇ ಖರೀದಿ ಮಾಡದ ಸರ್ಕಾರ ನಾಳೆಯ ದಿನ ಅದನ್ನು ಡ್ಯಾಮೆಜ್ ಅಂತ ಪರಿಗಣಿಸಿ ಮೂಲೆಗೆ ಬಿಸಾಕುತ್ತದೆ. ಇನ್ನೂ ಮೆಕ್ಕೆ ಜೋಳದ ಗತಿ ಏನು ಎಂಬುದು ರೈತ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳೊ ಬಲು ನಾವೆಲ್ಲ ಸೇರಿ ಉಗ್ರ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಕೇಳೊಣ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಸಂದೀಪ ಕಪ್ಪತ್ತನವರ, ಮಂಜುನಾಥ ಲಕ್ಷ್ಮೇಶ್ವರ, ಪರಶುರಾಮ ಡೊಂಕಬಳ್ಳಿ, ಫಕ್ಕಿರೇಶ ಕರಿಗಾರ, ಯಲ್ಲಪ್ಪ ಇಂಗಳಗಿ, ಗೂಳಪ್ಪ ಕರಿಗಾರ, ಸುರೇಶ ಹವಳದ ಸೇರಿದಂತೆ ತಾಲೂಕಿನ ನೂರಾರು ರೈತರು ಉಪಸ್ಥಿತರಿದ್ದರು. ಪೊಟೊ ಕ್ಯಾಪ್ಷನ್:ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನಿಗಧಿಪಡಿಸಿ, ಬೇಗನೆ ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಉಪ ತಹಶೀಲ್ದಾರ ಎಫ್ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.ಪೊಟೊ ಲಗತ್ತಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 