ಬತ್ತುತ್ತಿರುವ ಕೃಷ್ಣೆಯ ಒಡಲು: ನೀರಿಗೆ ಹಾಹಾಕಾರ
ಚಿಕ್ಕೋಡಿ 15: ಉತ್ತರ ಕರ್ನಾಟಕದ ಜೀವನದಿ ಕೃಷ್ಣ ಒಡಲು ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಸುಡು ಬಿಸಿಲಿನಿಂದಾಗಿ ನದಿಯಲ್ಲಿನ ನೀರಿನ ಮಟ್ಟ ಕುಸಿದಿದೆ. ಇದರಿಂದಾಗಿ ನದಿ ನೀರನ್ನೇ ನೆಚ್ಚಿಕೊಂಡಿರುವ ಸಾವಿರಾರು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಶುರುವಾಗಲಿದೆ.
ಕೃಷ್ಣಯಲ್ಲಿನ ನೀರು ಖಾಲಿಯಾದರೂ ಜನಪ್ರತಿನಿಧಿಗಳು ಮಹಾರಾಷ್ಟ್ರದಿಂದ ನೀರು ಹರಿಸಲು ಮುಂದಾಗದೆ ಇರುವು ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಜಮಖಂಡಿ ತಾಲೂಕಿನಲ್ಲಿ ರಣಬಿಸಿಲು ಕೇಕೆ ಹಾಕುತ್ತಿದೆ. ಹೆಚ್ಚಿನ ತಾಪ ಮಾನದಿಂದಾಗಿ ಜಲಮೂಲಗಳು ಬತ್ತುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನೀರು ಇಲ್ಲದೆ ನೆಲಕಚ್ಚುತ್ತಿವೆ.
ಹಿಪ್ಪರಗಿ ಬ್ಯಾರೇಜಿನ 22ನೇ ಗೇಟ್ಗೆ ಹಾನಿಯಾಗಿರುವುದರಿಂದ 1 ಟಿಎಂಸಿಗಿಂತ ನೀರು ವ್ಯರ್ಥವಾಗಿ ಹರಿದು ಪೋಲಾಗಿದೆ. ಮಾಂಜರಿ, ಬಾವನ ಸೌದತ್ತಿ ಗ್ರಾಮಗಳ ಬಳಿ ಕೃಷ್ಣಾ ನದಿ ಸೂರ್ಯನ ತಾಪಕ್ಕೆಖಾಲಿಯಾಗುತ್ತಿದೆ. ಕೃಷಿ ಅವಲಂಬಿಸಿದ ಅನ್ನದಾತ ತ ಚಿಂತೆಯಲ್ಲಿದ್ದಾನೆ. ಚಿಂತೆಯಲ್ಲಿ
ಕೃಷ್ಣಾ ನದಿ ನೀರು ನೆಚ್ಚಿಕೊಂಡ ಬಹಳಷ್ಟು ರೈತರು ವಾಣಿಜ್ಯ ಬೆಳೆಯಾಗಿರುವ ಕಬ್ಬು ಬೆಳೆದಿದ್ದಾರೆ. ನದಿ ಬತ್ತುತ್ತಿರುವುದರಿಂದ ಕಬ್ಬು, ಮುಸುಕಿನ ಜೋಳ, ಹೈಬ್ರಿಡ್ ಜೋಳ ನೆಲ ಕಚ್ಚುತ್ತಿವೆ. ರೈತರು ಬೆಳೆಗಳ ರಕ್ಷಣೆಗೆ ಹೆಣಗಾಡುತ್ತಿದ್ದಾರೆ.
ಮಹಾರಾಷ್ಟ್ರ ಸರಕಾರಕ್ಕೆ ಒತ್ತಾಯ
ಕೃಷ್ಣಾ ನದಿ ಖಾಲಿಯಾಗಿರುವುದರಿಂದ ಕೊಯ್ತಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಸಲು ಕೃಷ್ಣಾ ನದಿ ತೀರದ ಜನರು ಒತ್ತಾಯಿಸುತ್ತಿದ್ದಾರೆ. ನದಿ ಖಾಲಿಯಾದರೂ ಯಾವೊಬ್ಬ ಜನಪ್ರತಿನಿಧಿಗಳು ನೀರು ಬಿಡುಗಡೆಗೆ ಮುಂದಾಗದೆ ಇರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಪಕ್ಷವಾದರೂ ಅಧಿಕಾರಿಗಳು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಕೃಷ್ಣಗೆ ನೀರು ಹರಿಸಲು ಮುಂದಾಗಬೇಕಾಗಿದೆ. ಕೃಷ್ಣಾ ನದಿ ನೀರು ನೆಚ್ಚಿಕೊಂಡು ಸರ್ಕಾರ ಬಹುಗ್ರಾಮಗಳ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಬಹುತೇಕ ಯೋಜನೆಗಳು ಸ್ಥಗಿತವಾಗುವ ಆತಂಕ ಎದುರಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಹೇಗೆ ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.