ವಿಶ್ವಾದ್ಯಂತ ‘ಪುಷ್ಪ 2’ ರೀಲೀಸ್‌ಗೆ ದಿನಗಣನೆ ಆರಂಭ
ಪುಷ್ಪ 2’ ಸಿನಿಮಾ
ಭಾರಿ ನೀರೀಕ್ಷೆ ಹುಟ್ಟುಹಾಕಿರುವ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಡಿಸೆಂಬರ್ 5ರಂದು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ‘ಪುಷ್ಪ’ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್‌ನ ಬೆಳವಣಿಗೆ ನೋಡಿದ್ದ ಪ್ರೇಕ್ಷಕರಿಗೆ ‘ಪುಷ್ಪ 2’ ಚಿತ್ರದಲ್ಲಿ ಪುಷ್ಪರಾಜ್‌ನ ಆಳ್ವಿಕೆ ಕಾಣಿಸಲಿದೆ. ಈ ನಡುವೆ, ‘ಪುಷ್ಪ 3’ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಹೌದು ಆ ಬಗ್ಗೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಸುಳಿವು ನೀಡಿ ಕುತೂಹಲ ಮೂಡಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಪಾಲಿಗೆ ‘ಪುಷ್ಪ 2’ ಸಿನಿಮಾ ಸಖತ್ ಸ್ಪೆಷಲ್ ಆಗಿದೆ. ‘ಪುಷ್ಪ’ ಸಿನಿಮಾದಿಂದ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಸಿಕ್ಕಿತ್ತು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಸಿಕ್ಕವು. ಈಗ ‘ಪುಷ್ಪ 2’ ಸಿನಿಮಾ ಬರುತ್ತಿದೆ. ಡಿಸೆಂಬರ್ 5ರಂದು ‘ಪುಷ್ಪ 2’ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಮುಕ್ತಾಯ ಆಗಿದೆ. ಚಿತ್ರೀಕರಣ ಮುಗಿಯಿತು ಎಂಬ ವಿಷಯವನ್ನು ಹಂಚಿಕೊಳ್ಳುವಾಗ ರಶ್ಮಿಕಾ ಮಂದಣ್ಣ ಅವರು ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಹೇಳಿದ್ದಾರೆ. ‘ಪುಷ್ಪ 3’ ಸಿನಿಮಾ ಕೂಡ ಬರಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ.
ಕಳೆದ 5 ವರ್ಷಗಳಿಂದ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಅವರಿಗೆ ಈ ಟೀಮ್ ಜೊತೆ ಉತ್ತಮವಾದ ಬಾಂಧವ್ಯ ಬೆಳೆದಿತ್ತು. ಈಗ ಶೂಟಿಂಗ್ ಮುಗಿದಿರುವುದರಿಂದ ಅವರಿಗೆ ಬೇಸರ ಆಗಿದೆ. ಹಾಗಿದ್ದರೂ ಕೂಡ ಕೆಲಸಗಳು ಇನ್ನೂ ಇವೆ ಎಂದು ಅವರು ಹೇಳಿದ್ದಾರೆ. ಈ ಮಾತಿನ ಜೊತೆಗೆ ‘ಪುಷ್ಪ 3’ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ‘ಖಂಡಿತವಾಗಿಯೂ ಇನ್ನೂ ಸಾಕಷ್ಟು ಕೆಲಸಗಳು ಉಳಿದುಕೊಂಡಿವೆ. ಪ್ರಾಯಶಃ ಪಾರ್ಟ್ 3 ಕೂಡ ಇದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಮೂರನೇ ಪಾರ್ಟ್ ಬಗ್ಗೆ ಅಲ್ಲು ಅರ್ಜುನ್ ಅವರು ಸದ್ಯಕ್ಕೆ ಏನೂ ಹೇಳಿಲ್ಲ. ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಏನು ಹೇಳುತ್ತದೆ ಎಂಬ ಕೌತುಕ ಕೂಡ ಅಭಿಮಾನಿಗಳಿಗೆ ಇದೆ.
‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ‘ಪುಷ್ಪ 2’ ಸಿನಿಮಾದ ಮೇಲೆ ನೀರೀಕ್ಷೆ ಜಾಸ್ತಿ ಆಯಿತು. ಹಾಗಾಗಿ ದೊಡ್ಡ ಬಜೆಟ್‌ನಲ್ಲಿ ಸೀಕ್ವೆಲ್ ನಿರ್ಮಾಣ ಮಾಡಲಾಯಿತು. ಈ ಕಥೆಯನ್ನು ಇನ್ನಷ್ಟು ಮುಂದುವರಿಸಬಹುದು ಎಂದಾದರೆ ಖಂಡಿತವಾಗಿ ಪಾರ್ಟ್ 3 ಬರುತ್ತದೆ. ಈಗ ನಿರ್ದೇಶಕ ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾದ ಕಥೆಯನ್ನು ಹೇಗೆ ಕೊನೆಯಾಗಿಸಿದ್ದಾರೆ ಎಂಬುದು ತಿಳಿದರೆ ಮುಂದಿನ ದಾರಿ ಸ್ಪಷ್ಟವಾಗುತ್ತದೆ. ಅದನ್ನು ತಿಳಿಯಲು ಡಿಸೆಂಬರ್ 5ಕ್ಕಾಗಿ ಕಾಯಬೇಕು. ಈಗಾಗಲೇ ರೀಲೀಸ್ ಆಗಿರುವ ‘ಪುಷ್ಪ 2’ ಚಿತ್ರದ ಹಾಡು, ಟ್ರೇಲರ್ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿದೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 