ಕನ್ನಡ ಭಾಷೆಗೆ ಕವಿಗಳು, ಸಾಹಿತಿಗಳ ಅಪಾರ ಕೊಡುಗೆ: ಪಾಟೀಲ


ಹುನಗುಂದ 03: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರಾಗಿದೆ. ಕನ್ನಡ ಭಾಷೆಗೆ ಕವಿಗಳು, ಸಾಹಿತಿಗಳ ಅಪಾರ ಕೊಡುಗೆ ನೀಡಿದ್ದಾರೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.                                                                ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ 66ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

 ಕರ್ನಾಟಕ ರಾಜ್ಯ ಉದಯವಾದ ಪುಣ್ಯ ದಿನವಾಗಿದ್ದು, ಕನ್ನಡ ಭಾಷೆಯನ್ನು ಮಾತನಾಡುವರನ್ನು ಒಂದೆಡೆಯಲ್ಲಿ ಸೇರಿಸುವ ದೃಷ್ಠಿಯಿಂದ ಭಾಷಾವಾರು ಪ್ರಾಂತಗಳನ್ನು ಸೇರಿಸಿ ಮೊದಲು ಮೈಸೂರ ರಾಜ್ಯ ನಿರ್ಮಿಸಿದರು. ಮುಂದೆ ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು, ಅಲ್ಲಿಂದ ನೆಲ, ಜಲಕ್ಕಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು. ಬೆಂಗಳೂರನಂತ ಮಹಾನಗರದಲ್ಲಿ ಕನ್ನಡ ಭಾಷಿಗರಿಗಿಂತ ಅನ್ಯ ಭಾಷೆಗರು ಹೆಚ್ಚಾಗಿದ್ದಾರೆ. ಅನ್ಯ ಭಾಷೆಗಳನ್ನು ಪ್ರೀತಿಸಿ ಗೌರವಿಸಿ ಆದರೆ ಕನ್ನಡ ಭಾಷೆಯನ್ನು ಗೌರವಿಸುವ ಜೊತೆಗೆ ಅದರ ಬೆಳವಣಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.ಕವಿಗಳ, ಸಾಹಿತಿಗಳ ಬರಹಗಳಿಂದ ಇಂದು ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದರು.                                                                       

ಕನ್ನಡ ಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಮಾಡಿ ಶಾಸಕರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ ಯುವ ಪೀಳಿಗೆಯಲ್ಲಿ ಪುಸ್ತಕ ಓದಿನ ಮಹತ್ವವನ್ನು ಹೆಚ್ಚಿಸುವ ಸಲುವಾಗಿ ಸಾಹಿತಿ ಸಿದ್ದಲಿಂಗಪ್ಪ ಬೀಳಗಿ ಅವರು ಪ್ರಥಮ ದರ್ಜೆಯ ಕಾಲೇಜಿಗೆ ಪುಸ್ತಕ ನೀಡಿ ವಿದ್ಯಾರ್ಥಿಗಳ ಭವಿಷ್ಯದ ಓದಿಗೆ ಅನುಕೂಲ ಮಾಡಿಕೊಟ್ಟರು.  

 ಪ್ರಾಚಾರ್ಯ ಡಾ. ಶರಣು ಪಾಟೀಲ, ಬಿಇಒ ಮಹಾದೇವ ಬೆಳ್ಳೆಣ್ಣವರ, ಸಾಹಿತಿ ಸಿದ್ದಲಿಂಗಪ್ಪ ಬೀಳಗಿ, ಸಿಪಿಐ ಹೊಸಕೇರ​‍್ಪ ಕೋಳೂರ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಮಂಜು ಕೊಡಗಾನೂರ, ಮಲ್ಲಿಕಾರ್ಜುನ ಹಳಪೇಟಿ, ತಿಮ್ಮಣ್ಣ ದಾದ್ಮಿ, ಪ್ರೋ.ಗಾಯತ್ರಿ ದಾದ್ಮಿ, ದೈಹಿಕ ನಿರ್ದೇಶಕ ಬಿ.ವೈ.ಆಲೂರ, ಖಾಜವಾಲಿ ಈಚನಾಳ ಸೇರಿದಂತೆ ಅನೇಕರು ಇದ್ದರು.