ಲೋಕದರ್ಶನವರದಿ
ರಾಣೇಬೆನ್ನೂರು: ದೇಶದ ಸಂವಿಧಾನವು ಅತ್ಯಂತ ಸುಭದ್ರವಾಗಿದೆ. ಭಾರತದ ಸಂವಿಧಾನದಂತೆ ಇತರೆ ಯಾವುದೇ ರಾಷ್ಟ್ರಗಳಲ್ಲಿ ಬಲಿಷ್ಠವಾಗಿರುವುದನ್ನು ಕಾಣಲು ಸಾಧ್ಯವಾಗಲಾರದು ಎಂದು ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಉಪನ್ಯಾಸಕಿ ಸುಜಾತಾ ಹುಲ್ಲೂರ ಹೇಳಿದರು.
ಅವರು ಮಂಗಳವಾರ ಕಾಲೇಜು ಭವನದಲ್ಲಿ ಆಯೋಜಿಸಿದ್ದ, ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಾಮಾಜಿಕ, ರಾಜಕೀಯ, ಆಥರ್ಿಕ ಸಮಾನತೆ ಭಾರತದ ಪ್ರಮುಖ ಅಂಶಗಳಾಗಿವೆ ಎಂದು ವಿವರಿಸಿ ಮಾತನಾಡಿದ ಹುಲ್ಲೂರ ಅವರು ಪ್ರಜಾಪ್ರಭುತ್ವದಲ್ಲಿ ಹಕ್ಕು ಪಡೆಯುವುದು ಎಷ್ಟು ಮುಖ್ಯವೋ ಅಷ್ಠೇ ಮುಖ್ಯ ತಾವು ಸಹ ಹಕ್ಕನ್ನು ಹೇಗೆ ಚಲಾಯಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಎಂ.ವಿ. ಯಲಿಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಎಸ್.ಬಿ. ಗುಜರ್ೇರ ಭೂಗೋಳ ಶಾಸ್ರ್ತ ಮುಖ್ಯಸ್ಥ ಎಂ.ಎನ್. ಸೂರಣಗಿ, ಹಿರಿಯ ಉಪನ್ಯಾಸಕಿ ಅನುರಾಧ ಎಸ್.,ನಿರ್ಮಲಾ ಬಡಗೇರ, ಉಪನ್ಯಾಸಕ ಎಸ್.ಎಲ್. ಕರ್ಲವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.