ಲೋಕದರ್ಶನ ವರದಿ
ಯರಗಟ್ಟಿ : ಇಲ್ಲಿನ ಶ್ರೀ ಭಕ್ತ ಕನಕದಾಸ ಜಯಂತೋತ್ಸವ ಸಮೀತಿ ಸದಸ್ಯರು 532 ನೇ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು. ಶ್ರೀ ಬೀರಸಿದ್ದಲಿಂಗೇಶ್ವರ ದೇವಸ್ಥಾನದಿಂದ ಎತ್ತಿನ ಚಕ್ಕಡಿ ಮೇಲೆ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಭಾವಚಿತ್ರದೊಂದಿಗೆ ಮಹಿಳೆಯರ ಆರುತಿ, ಕರಡಿ ಮಜಲು, ಶಿವಭಜನೆ ಹೀಗೆ ವಿವಿಧ ವಾಧ್ಯ ಮೇಳಗಳೊಂದಿಗೆ ಹೊರಟ ಮೆರವಣಿಗೆ ಒಂಟಿ ಗಲ್ಲಿ, ಕರಿಗೊಣ್ಣವರ ಓಣಿ, ಅಗಸಿ ಓಣಿ, ಮಿಕಲಿ ಓಣಿ, ಮಹಾಂತೇಶ ನಗರ, ಸಂಗೋಳ್ಳಿ ರಾಯಣ್ಣ ವೃತ್ತ, ಎಮ್.ಜಿ.ರಸ್ತೆ ಮೂಲಕ ಸಂಚರಿಸಿತು. ನಂತರ ಮಹಾಪ್ರಸಾದ ಜರುಗಿತು. ರಾತ್ರಿ ರಾಮದುರ್ಗ ತಾಲೂಕ ಹನಮಸಾಗರ ಶ್ರೀ ವಿಠ್ಠಲ ದೇವರ ಗಾಯನ ಸಂಘ ಕಲಾವಿದೆ ಕಮಲಾಕ್ಷಿ ತಂಡ ಹಾಗೂ ಗೋಕಾಕ ತಾಲೂಕಿನ ರಾಜಾಪೂರ ಶ್ರೀ ಚೂನ್ನಮ್ಮದೇವಿ ಗಾಯನ ಸಂಘದ ಮಾಲಾಶ್ರೀ ತಂಡದಿಂದ ಹರದೇಶಿ ನಾಗೇಶಿ ಎಂಬ ಡೋಳ್ಳಿನ ಪದಗಳ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಶಿವಾನಂದ ಕರಿಗೊಣ್ಣವರ, ಹನಮಂತ ಗೋರಾಬಾಳ, ಮುದಕಪ್ಪ ತಡಸಲೂರ, ಲಗಮಪ್ಪ ಖಿಲಾರಿ, ಶ್ರೀಕಾಂತ ಖಿಲಾರಿ, ಹನಮಂತ ಹಾರೂಗೊಪ್ಪ, ಬಸು ದಿಡಗಣ್ಣವರ, ಮಡ್ಡೆಪ್ಪ ಕರಿಗಾರ, ಈರಣ್ಣ ಖಿಲಾರಿ, ಬೀರಪ್ಪ ಬೆಳವಲ, ಬೀರಪ್ಪ ತಡಸಲೂರ, ಬೀರಪ್ಪ ಕರಿಗೊಣ್ಣವರ, ಗೋಪಾಲ ಖಿಲಾರಿ, ಪಡೆಪ್ಪ ಅಡಕಲಗುಂಡಿ ಮುಂತಾದವರಿದ್ದರು.