ತ್ರಿವರ್ಣ ಧ್ವಜ ದೇಶಾಭಿಮಾನದ ಪ್ರತೀಕ: ಡಾ. ಮೃತ್ಯುಂಜಯ ಎಂ.ಎಂ.

ತ್ರಿವರ್ಣ ಧ್ವಜ ದೇಶಾಭಿಮಾನದ ಪ್ರತೀಕ: ಡಾ. ಮೃತ್ಯುಂಜಯ ಎಂ.ಎಂ.  The Tricolour is a symbol of patriotism: Dr. Mrutyunjaya M.M.

ರಾಣೆಬೆನ್ನೂರು 22: ತ್ರಿವರ್ಣ ಧ್ವಜ ಕೇವಲ ಒಂದು ಬಟ್ಟೆಯಲ್ಲ, ಅದು ಭಾರತೀಯರ ಸಂಸ್ಕೃತಿ, ಪರಂಪರೆ ಹಾಗೂ ದೇಶಾಭಿಮಾನದ ಪ್ರತೀಕವಾಗಿರುವ ರಾಷ್ಟ್ರೀಯ ಗೌರವದ ಸಂಕೇತವಾಗಿದೆ. ಪ್ರತಿಯೊಬ್ಬರೂ ತ್ರಿವರ್ಣ ಧ್ವಜದ ಬಗ್ಗೆ ಸದಾ ಗೌರವ ಮತ್ತು ಅಭಿಮಾನ ಹೊಂದಿ, ತಮ್ಮ ಮನಗಳಲ್ಲಿ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಬಿ.ಜೆ.ಎಸ್‌.ಎಸ್‌. ಕಾಲೇಜಿನ ಪ್ರಾಚಾರ್ಯ ಡಾ. ಮೃತ್ಯುಂಜಯ ಎಂ.ಎಂ. ಕರೆ ನೀಡಿದರು.  ನಗರದ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ತರಬೇತಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.  

ಭಾರತದ ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಜನರು ತಮ್ಮ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಮನೆ, ಮಠಗಳನ್ನು ತೊರೆದು ಹೋರಾಡಿದ್ದು ಮಾತ್ರವಲ್ಲದೆ, ತಮ್ಮ ಪ್ರಾಣವನ್ನೇ ಅರ​‍್ಿಸಿದ್ದಾರೆ. ಅವರ ತ್ಯಾಗದ ಫಲವಾಗಿ ಇಂದು ನಾವು ಯಾವುದೇ ಆತಂಕವಿಲ್ಲದೆ ಸ್ವತಂತ್ರ ಹಾಗೂ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದೇವೆ. ಈ ಇತಿಹಾಸವನ್ನು ಮುಂದಿನ ಪೀಳಿಗೆಯವರು ಅರಿತುಕೊಳ್ಳಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ. ಪರಶುರಾಮ್ ಪವಾರ್ ಅವರು ಭಾರತೀಯರ ಪವಿತ್ರ ಸ್ವಾತಂತ್ರ್ಯ ಹಾಗೂ ತ್ಯಾಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಮುಖ್ಯ ಅತಿಥಿಗಳಾಗಿ ಎ. ಶಂಕರ ನಾಯಕ್, ಉಪನ್ಯಾಸಕರಾದ ಎಚ್‌.ಎಸ್‌. ಹುಚ್ಚಗೊಂಡರ್, ಅಶೋಕ್ ಬಣಕಾರ್, ದೇವಿಕಾ ಚೌಟಿ, ಮುತ್ತುರಾಜ ಸಿದ್ದಣ್ಣನವರ್ ಸೇರಿದಂತೆ ಹಲವರು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಸುನೀತಾ ಪಾಟೀಲ್ ಅವರು ಪ್ರಾರ್ಥನೆ ನೆರವೇರಿಸಿದರು. ನಂದೀಶ್ ಕೊಪ್ಪದ ಸ್ವಾಗತಿಸಿದರು. ವಸುಂಧರಾ ನಿರೂಪಿಸಿದರು. ಸಿ.ಬಿ. ಚೈತ್ರಾ ವಂದಿಸಿದರು.