ಕಲಾ ಅಧ್ಯಯನ ನಾಗರಿಕತೆಯ ರಹದಾರಿ: ಮೂಗನೂರಮಠ
The Study of Art is the Pathway to Civilization: Mooganuramatha
ಲೋಕದರ್ಶನ ವರದಿ
ಬಾಗಲಕೋಟೆ 17 : ಕಲಾ ಅಧ್ಯಯನವು ಕೇವಲ ಒಂದು ವಿಷಯವಾಗಿರದೇ ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿಯಾಗಿದ್ದು ಕೀಳರಿಮೆಯಿಂದ ಹೊರಬಂದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪರಿಚಯ ಕಾರ್ಯಕ್ರಮವನ್ನು ಸರಸ್ವತಿ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು. ಬಿಎ ಕೇವಲ ಒಂದು ಸಾಮಾನ್ಯ ಆಯ್ಕೆಯಲ್ಲ ಮಹತ್ವಾಕಾಂಕ್ಷೆಗಳನ್ನು ವಿಶ್ಲೇಷಿಸಿ ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ಮಾಡುತ್ತದೆ. ಪರಿಪೂರ್ಣ ವ್ಯಕ್ತಿಯಾಗಲು, ಜವಾಬ್ದಾರಿಯನ್ನು ರೂಪಿಸಿಕೊಳ್ಳಲು ಶಿಸ್ತುಬದ್ಧ ಅಧ್ಯಯನ ಮಾಡಿ.
ಬಸವೇಶ್ವರ ಕಲಾ ಮಹಾವಿದ್ಯಾಲಯವು ಸ್ವತಂತ್ರ ಪೂರ್ವದಿಂದ ಇಂದಿನವರೆಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಸವಾಂರ್ಗೀಣ ಅಭಿವೃದ್ಧಿ ಮಹಾವಿದ್ಯಾಲಯದ ಗುರಿಯಾಗಿದೆ ಎಂದರು. ಕಲಾ ವಿದ್ಯಾರ್ಥಿಗಳಿಂದ ಸಮಾಜವು ಸದೃಡ ನಾಗರಿಕರನ್ನು ಭಯಸುತ್ತದೆ ಅದಕ್ಕೆ ಪೂರಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಿ. ಆರೋಗ್ಯವೇ ಸೌಂದರ್ಯದ ಗುಟ್ಟಾಗಿದ್ದು ಆಟದ ಮೈದಾನದಲ್ಲಿ ಮತ್ತು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಿರಿ ಇದರಿಂದ ಗಟ್ಟಿಮುಟ್ಟಾದ ಭವಿಷ್ಯದ ನಿರ್ಮಾಣವಾಗುತ್ತದೆ. ಪಠ್ಯದ ಜೊತೆಗೆ ಯೋಚನಾ ಸಾಮರ್ಥ್ಯ ಹೆಚ್ಚಿಸುವ, ವಿಷಯ ವಿಶ್ಲೇಷಣೆ ಸಾಮರ್ಥ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಶಿಸ್ತು ಬೆಳೆಸಲು, ಕಾನೂನು ಬಾಹಿರ ಚಟುವಟಿಕೆ ಮುಕ್ತ ಸುರಕ್ಷಿತ ಕ್ಯಾಂಪಸ್ ವ್ಯವಸ್ಥೆಯನ್ನು ಒದಗಿಸುವ ಕೆಲಸವನ್ನು ಮಹಾವಿದ್ಯಾಲಯ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 