ನಗರದ ಅಭಿವೃದ್ಧಿಯ ಮಾದರಿ ನೀಲಿನಕ್ಷೆ ವಿಕ್ಷೀಸಿದ ಶಾಸಕ ಗುಡಗುಂಟಿ

ಜಮಖಂಡಿ 29: ನಗರದ ತಾಲೂಕು ಆಡಳಿತದ ಸಹಯೋಗದಿಂದ ಹುಬ್ಬಳ್ಳಿಯ ಕೆ.ಎಲ್‌.ಇ ಸಂಸ್ಥೆಯ ವತಿಯಿಂದ ನಗರದ ಸಮಗ್ರ ಅಭಿವೃದ್ಧಿಯ ಮಾದರಿ ತಯಾರಿಸಿದ ನೀಲಿನಕ್ಷೆಗಳ ಸಮೇತ ಮಾಹಿತಿಯನ್ನು ಆಲಿಸಿದ ಶಾಸಕ ಜಗದೀಶ ಗುಡಗುಂಟಿ. 

ನಗರದ ತಾಲೂಕು ಆಡಳಿತದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆ.ಎಲ್‌.ಇಯು ಆರಿ​‍್ಕಟೆಕ್ 36 ವಿದ್ಯಾರ್ಥಿಗಳು ಕಳೆದ 6 ತಿಂಗಳಿಂದ ನಗರವನ್ನು ಸಂಚರಿಸಿ, ಪರೀಶೀಲಣೆ ನಡೆಸಿ, ಜನರ ತೊಂದರೆಗಳನ್ನು ಆಲಿಸಿ ನಗರದಲ್ಲಿನ ಹಸಿರು ಮತ್ತು ನೀರಿನ ಮೂಲಗಳ ಬಗ್ಗೆ, ಕಟ್ಟಡಗಳ ವಯಸ್ಸಿನ ಆಧಾರದ ಮೇಲೆ ವಿಂಗಡಣೆ, ಕಟ್ಟಡಗಳ ಉಪಯೋಗದ ಮೇಲೆ ವಿಂಗಡಣೆ, ಕಟ್ಟಡಗಳ ಸ್ಥಿತಿಗಳ ಬಗ್ಗೆ, ರಸ್ತೆ, ಒಳಚರಂಡಿ, ಅಭಿವೃದ್ದಿ ನಿಟ್ಟಿನಲ್ಲಿ ಒಟ್ಟು 21 ನೀಲಿನಕ್ಷೆ ಸಹಿತ ಮುಂದಿನ 25ವರ್ಷಗಳ ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ ರಚಿಸಿ ಅನೇಕ ತಂತ್ರಜ್ಞಾನ ಬಳಸಿಕೊಂಡು ಎಲ್ಲಾ ನಿಟ್ಟಿನಲ್ಲಿ ಅಭಿವೃದ್ದಿಯ ಚಿತ್ರಣವನ್ನ ನೀಡಿದ್ದಾರೆ ಎಂದರು. 

ವಿದ್ಯಾರ್ಥಿಗಳು ಇದನ್ನು ಕೇವಲ ಚಟುವಟಿಕೆ ಎಂದು ಭಾವಿಸದೆ ತಾವೇ ಅಭಿವೃದ್ದಿ ನಿಟ್ಟಿನಲ್ಲಿ ಏನು ಮಾಡಬಹುದಿತ್ತು ಎಂದು ಪೂರ್ತಿ ಪರಿಶ್ರಮದಿಂದ ಕೆಲಸ ಮಾಡಿ ನಗರದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ನಿರ್ವಹಿಸಿರುವ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ತಹಶೀಲ್ದಾರ ಸದಾಶೀವ ಮಕ್ಕೋಜಿ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಪುರ್ನವಸತಿ ಕೇಂದ್ರದ ಎಸ್‌ಎಲ್‌ಒ, ಅಜಯ ಕಡಪಟ್ಟಿ, ನಾಗಪ್ಪ ಸನದಿ, ಗಣೇಶ ಸಿರಗಣ್ಣವರ, ಎಲ್ಲ ವಿಭಾಗದ ಅಧಿಕಾರಿಗಳು ಸಹಿತ ಕೆ.ಎಲ್‌.ಇ ಸಂಸ್ಥೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು ಇದ್ದರು.