ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

ನರಗುಂದ 15:  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ  ಶಾಲಾ ಆವರಣದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆಯನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ನೀಡಿದರು. ನಂತರ ಮಾತನಾಡಿದ ಅವರು, ಕಂದಾಯ ಇಲಾಖೆಯ ಸೇವೆಗಳು ಮನೆ ಬಾಗಿಲಿಗೆ ತಲುಪಿಸುವುದು ಕಾರ್ಯಕ್ರಮ ಮೂಲ ಉದ್ದೇಶವಾಗಿದೆ. ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ, ಆಧಾರ ಕಾರ್ಡ ಲಿಂಕ್ ಮಾಡಬೇಕು, ಬ್ಯಾಂಕ ಖಾತೆಗೆ ಆಧಾರ ಲಿಂಕ್, ಪಿಎಂ ಜನಧನ ಯೋಜನೆಯಡಿ ಸಹಾಯಧನ ಪಡೆಯಲು ಈ ಕೇವೈಸಿ ಮಾಡಿಸಬೇಕು. ಇದರಿಂದ ಸರ್ಕಾರ  ಸಹಾಯಧನ, ಪರಿಹಾರ ನೇರವಾಗಿ ನೀಡಲು ಸಹಾಯ ಆಗುತ್ತದೆ ಎಂದರು.ಉಪವಿಭಾಗಾಧಿಕಾರಿ ಅನ್ನಪೂರ್ಣ ಪ್ರಾಸ್ತಾವಿಕ ಮಾತನಾಡಿ, ಸಾರ್ವಜನಿಕರನ್ನು ಕಚೇರಿಗೆ ವಿನಾಕಾರಣ ಅಳೆದಾಡಿದುವುದನ್ನು ತಪ್ಪಿಸುವುದು. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪಹಣಿ ತಿದ್ದುಪಡಿ, ಪಿಂಚಣಿ ಆದೇಶ ಸೇರಿದಂತೆ ಇತರೆ ಸೌಲಭ್ಯಗಳನ್ನು ಸ್ಥಳದಲ್ಲಿಯೇ ವಿತರಿಸುವದು ಕಾರ್ಯಕ್ರಮದ ಆಶಯವಾಗಿದೆ. ಸದರಿ ಕಾರ್ಯಕ್ರಮದಲ್ಲಿ ವೈಯಕ್ತಿಕ, ಸಮುದಾಯಿಕ ಸೌಲಭ್ಯಗಳ ಕುರಿತು ಅಹವಾಲು ಸಲ್ಲಿಸಿದ್ದಲ್ಲಿ ಆದ್ಯತೇ ಮೇರೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿದಲಾಗುವದು. 

ಸಕರ್ಾರದ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಗತ್ಯದ ಪ್ರಸ್ತಾವನೆ ಸಲ್ಲಿಸಲಾಗುವದು ಎಂದರು.ಹದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗದಿಗೆಪ್ಪ ಮಂತ್ರಿ ಮಾತನಾಡಿ, ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಬಗ್ಗೆ ತಿಳಿಸುತ್ತಾ ಅವುಗಳನ್ನು ಅನುಷ್ಠಾನಗೊಳಿಸಲು ಕೋರಿದರು. ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಜಿಲ್ಲಾಧಿಕಾರಿಗಳಿಂದ ಸಕರ್ಾರದ ಸೌಲಭ್ಯ ಪಡೆಯೋಣ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಕೇತಿಕವಾಗಿ ತೋಟಗಾರಿಕೆ ಇಲಾಖೆ ಸಹಾಯದಲ್ಲಿ ಮಿನಿ ಟ್ರ್ಯಕ್ಟರ್ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾದ ಪತ್ರ ವಿತರಣೆ, ದನದ ಕೊಟ್ಟಿಗೆ ನಿಮರ್ಾಣದ ಆದೇಶ ಪ್ರತಿ, ವಸತಿ ಯೋಜನೆಯಡಿ ಮನೆ ಮಂಜೂರು ಆದೇಶ ಪ್ರತಿ, ವಿಕಲ ಚೇತನರಿಗೆ ಯು ಡಿ ಐ ಡಿ ಕಾರ್ಡ, ಆಯುಸ್ಮಾನ ಆರೋಗ್ಯ ಕರ್ನಾಟಕ  ಕಾರ್ಡ್  ವಿತರಣೆ ಮಾಡಲಾಯಿತು.ಕಾಯ್ರ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಧ್ಯಕ್ಷೆ ಗೀತಾ ಚಲವಾದಿ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ತಮ್ಮನಗೌಡರ, ಗ್ರಾಚಿ ಪಂ ಸದಸ್ಯರು, ಜಂಟಿ ಕೃಷಿ ನಿರ್ದೇಶಕ  ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆ ಉಪನದರ್ೆಶಕರಾದ ಶಶಿಕಾಂತ ಕೊಟೆಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ, ಬಿಸಿಎಂ ಜಿಲ್ಲಾ ಅಧಿಕಾರಿ ಮೆಹಬೂಬ್, ಡಿಡಎಲ್ಆರ್ ರವಿಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಡಿ ಹಿರೇಮನಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು. ತಹಶೀಲ್ದಾರ ಎ ಡಿ ಅಮಾರವಾಡಗಿ ಅತಿಥಿಗಳನ್ನು ಸ್ವಾಗತಿಸಿದರು. *ಜಿ.ಪಂ. ಸಿಇಓ ಜೊತೆಗೆ ಡಿಸಿ ಗ್ರಾಮ ಪ್ರದಕ್ಷಿಣೆ:* ವೇದಿಕೆ ಕಾರ್ಯಕ್ರಮ ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ ಜೊತೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಹದಲಿ ಗ್ರಾಮದಲ್ಲಿ ಪ್ರದಕ್ಷಿಣೆ ಮಾಡಿದರು. ಗ್ರಾಮದ ರಸ್ತೆ ಪರಿಶೀಲನ, ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಲಸಿಕೆ ನೀಡಿಕೆಗೆ ಚಾಲನೆ, ಆರೋಗ್ಯ ಮೇಳ ಉದ್ಘಾಟನೆ, ಅತಿವೃಷ್ಟಿಯಿಂದಾದ ಮನೆಹಾನಿ ವೀಕ್ಷಣೆ ಪರಿಹಾರದ ಭರವಸೆ, ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ ಪರಿಶೀಲನೆ, ವಿವಿಧ ಕಾಮಗಾರಿಗಳಿಗೆ ಚಾಲನೆ, ಎಸ್ ಸಿ ಕಾಲೊನಿ ಬೇಟಿ ಕುಂದು ಕೊರತೆಗಳ ಚಾಲನೆ, ಬೆಣ್ಣೆ ಹಳ್ಳದಿಂದ ಗ್ರಾಮದ ಬಾಧಿತ ಪ್ರದೇಶಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಉಪಭಾಗಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ್ ಅಮರವಾಡಗಿ ಸಾತ್ ನೀಡಿದರು