ಅರ್ಧ ಶತಮಾನ ಕಂಡ ಬಂಗ್ಲಾದೇಶ ವಿಮೋಚನಾ ಯುದ್ದ : ಗಂಡು ಗುಂಡಿಗೆಯ - ಇಂದಿರಾ ಗಾಂಧಿ


ಜೆ.ಕೆ.ಜಮಾದಾರ 

ಆಧುನಿಕ ಪ್ರಪಂಚದ ಯುದ್ಧಗಳ ಇತಿಹಾಸದಲ್ಲಿ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹಾಗೂ ಇಸ್ರೇಲದ ಪ್ರಧಾನಿ ಶ್ರೀಮತಿ ಗೋಲ್ಡಾಮೇರ ಅ"ಸ್ಮರಣೀಯರು. ಶ್ರೀಮತಿ ಗಾಂಧಿ ಡಿಸೆಂಬರ್ 3 ರಿಂದ 16ರವರೆಗೆ ನಡೆಸಿದ ಯುದ್ಧದಲ್ಲಿ ಇತಿಹಾಸ ಸ್ಟೃಸಿದರಲ್ಲದೇ ಭೂಗೋಳ ಬದಲಿಸಿದ ಶ್ರೇಯಸ್ಸಿಗೆ ಪಾತ್ರರಾಗಿ ಭಾರತದ ದುರ್ಗೆಯಾದರೆ ಗೋಲ್ಡಾಮೇರ ಆರು ದಿನಗಳ ಯುದ್ದದಲ್ಲಿ ತಮ್ಮ ಸುತ್ತಲಿನ ಆರು ದೇಶಗಳನ್ನು ಸೋಲಿಸಿ ದಾಖಲೆ ಬರೆದರು. ಈ ಇಬ್ಬರು ಮ"ಳೆಯರ ಸಾಧನೆ ಅದ್ಭುತ, ಅನನ್ಯ, ಅಸಾದೃಶ್ಯ ಅಸಾಧಾರಣ. 

ಬಂಗ್ಲಾದೇಶ ಉದಯವಾಗಿ ಅರ್ಧ ಶತಮಾನವಾಗುತ್ತಿರುವ ಪರ್ವ ಪಸಂಗದಲ್ಲಿ ಬಂಗ್ಲಾ "ಮೋಚನಾ ಯುದ್ಧದ ಸ್ಮರಣೆ ಮಾಡಬೇಕಾಗಿದೆ. 50 ವರ್ಷಗಳ "ಂದೆ ಟಿ."್ಹ. ಇರಲಿಲ್ಲ. ಕೇವಲ ಆಕಾಶವಾಣಿ ಹಾಗೂ ಬಿಬಿಸಿ ಅವಲಂಭಿಸಿಯೇ ಯುದ್ಧದ ತಿಳುವಳಿಕೆ ಮಾಡಿಕೊಳ್ಳಬೇಕಾಗಿದ್ದಿತು. ಅಂದು ರೇಡಿಯೋದಲ್ಲಿ ಕ್ರಿಕೆಟ್ ಹಾಗೂ ಹಾಕಿ ಕಮೆಂಟ್ರಿಯಂತೆ ಯುದ್ಧದ ಘಟನೆಗಳನ್ನು ಕೇಳುತ್ತ ಬೆಳೆದವರು ನಾವು. 

ಈ ಯುದ್ಧಕ್ಕೆ ಮೊದಲು ಇಂದು ನಾವು ಬಾಂಗ್ಲಾದೇಶ ಎಂದು ಕರೆಯುವ ಪ್ರದೇಶ ಪಾಕಿಸ್ತಾನದ ಭಾಗವಾಗಿದ್ದಿತು. ಅದನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗುತ್ತಿದ್ದಿತು. 

ಇಂದಿನ ಪಾಕಿಸ್ತಾನ ಹಾಗೂ ಅಂದಿನ ಪೂರ್ವ ಪಾಕಿಸ್ತಾನ ಜನಸಂಖ್ಯೆ ದ್ಟೃುಂದ ಸಮವಾಗಿದ್ದವು. 1970ರಲ್ಲಿ ನಡೆದ ಚುನಾವಣೆಯಲ್ಲಿ ಬಂಗಾಲದ ಶೇಖ ಮುಜಿಬುರ ರಹಮಾನರ ನೇತೃತ್ವದ ಅವಾ"ುಲೀಗ ಸ್ಪಷ್ಟ ಬಹುಮತ ಪಡೆುತು. ಆದರೆ "ುಲಿಟೆರಿಯ ಮೇಲೆ "ಡಿತ ಹೊಂದಿದ್ದ ಪಾಕಿಸ್ತಾನ ಶೇಖ ಮುಜಿಬುರ ರಹಮಾನರನ್ನು ಪ್ರಧಾನಿಯನ್ನಾಗಿ ಸ್ವೀಕರಿಸಲು ನಿರಾಕರಿಸಿ ಬಂಗ್ಲಾದೇಶದ ಮೇಲೆ ಇತಿಹಾಸ ಕೇಳರಿಯದ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಮಾಡಲಾರಂಭಿಸಿತು. 10 ದಶಲಕ್ಷ ಬಂಗಾಲಿಗಳು ಜೀವ ಉಳಿಸಿಕೊಳ್ಳಲು ಭಾರತಕ್ಕೆ ವಲಸೆ ಬಂದರು. ಈ ನಿರಾಶ್ರಿತರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ 1971ರ ಮಾರ್ಚ 26 ರಿಂದ ಬಂಗ್ಲಾದೇಶ ಉದಯದವರೆಗೆ ಅಂದರೆ ಡಿಸೆಂಬರ್ 16ರವರೆಗೆ ಭಾರತದ ಹೆಗಲಿಗೇರಿದ್ದಿತು. 

ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ ಅವರು ಅಬ್ದುಲ್ ಮೋಟಾಲೆಬ್ ಮಲಿಕರನ್ನು ಪೂರ್ವ ಪಾಕಿಸ್ತಾನದ ಗರ್ವರ್ನರರಾಗಿ ನೇ"ುಸಿದ್ದರಲ್ಲದೇ ಲೆಪ್ಟನಂಟ್ ಜನರಲ್ ಎ.ಎ.ಕೆ. ನಿಯಾಜಿ ಅವರನ್ನು ಪೂರ್ವವಲಯದ ಕಮಾಂಡರರನ್ನಾಗಿ ನಿಯುಕ್ತಿಗೊಳಿಸಿದ್ದರು. 

ಅಂದು ಭಾರತದಲ್ಲಿ ಶ್ರೀ ವರಾಹಗಿರಿ ವೆಂಕಟಗಿರಿ ರಾಷ್ಟಪತಿಗಳು ಶ್ರೀಮತಿ.ಇಂದಿರಾಗಾಂಧಿ ಪ್ರಧಾನಿ. 

ಜನರಲ್ ಶ್ಯಾಮ ಮನೇಕಶಾ ಭಾರತದ ಸೇನೆಯ ದಂಡನಾಯಕರು. ಲೆಪ್ಟನಂಟ್ ಜನರಲ್ ಜಗಜಿತಸಿಂಗ್ ಅರೋರಾ ಪೂರ್ವವಲಯದ ಕಮಾಂಡರ ನೌಕಾಪಡೆಯ ಪೂರ್ವವಲಯದ ಕಮಾಂಡರ ನೀಲಕಂಠ ಕೃಷ್ಣನ್ ಅರ್ಜುನಸಿಂಗ್ ವೈಮಾನಿಕ ನಡೆಯ ಮುಖ್ಯಸ್ಥರಾದರೆ ಪೂರ್ವವಲಯಕ್ಕೆ ಹರಿಚಂದ ದಿವಾನ ಮುಖ್ಯಸ್ಥರಾಗಿದ್ದರು. 

ಪಾಕಿಸ್ತಾನ ನಡೆಸಿದ ನರಮೇದ ಕಾಲಕ್ಕೆ ಡಾಕಾ ಕೇಂದ್ರ ಸ್ಥಳವಾಗಿದ್ದಿತು. ಡಾಕಾ "ಶ್ವ"ದ್ಯಾಲಯದ ಬುದ್ದಿ ಜೀ"ಗಳನ್ನು ಚಿಂತ್ರ"ಂಸೆ ನೀಡಿ ಕೊಲ್ಲಲಾುತು. ಕೊಂದವರನ್ನೆಲ್ಲ "ಂದುಗಳೆಂದು ಸಾರಿದ ಪಾಕಿಸ್ತಾನ ಅವರ ಮ"ಳೆಯರ ಮೇಲೆ ಅತ್ಯಾಚಾರ ನಡೆಸಿತು ಬಂಗ್ಲಾದೇಶದಲ್ಲಿದ್ದ ಉರ್ದು ಭಾಕ ಬಿಹಾರಿ ಮುಸ್ಲಿಮರು ಪಾಕಿಸ್ತಾನ ಸೈನ್ಯದ ಪರವಾಗಿದ್ದರು.  

ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಅತ್ಯಂತ ಚಾಣಾಕ್ಷತನದಿಂದ ರಾಜತಾಂತ್ರಿಕ ನೈಪುಣ್ಯತೆುಂದ ಪ್ರಪಂಚದ ಸಂಚಾರ ಮಾಡಿದರು. ರಶಿಯಾದ ಜೊತೆ ಮೈತ್ರಿ ಹಾಗೂ ಸಹಕಾರ ಒಪ್ಪಂದ ಮಾಡಿಕೊಂಡರು. ಅಮೇರಿಕಾದ ಅಧ್ಯಕ್ಷ ರಿಚರ್ಡ್‌ ನಿಕ್ಸನ್ ಅವರ ಜೊತೆ ಮಾತುಕತೆ ಕಾಲಕ್ಕೆ "ಭಾರತ ಅಭಿವೃದ್ಧಿ ಶೀಲ ದೇಶವಾಗಿರಬಹುದು ಅದಕ್ಕೆ ತನ್ನ ಆತ್ಮಗೌರವ ಸ್ವಾಭಿಮಾನ ಕಾಪಾಡಿಕೊಳ್ಳಲು ಬರುತ್ತದೆಂದು" ದಿಟ್ಟುತನದ ಉತ್ತರ ನೀಡಿದರು.  

ಅಮೇರಿಕೆಯ "ದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರಗೆ ಸಹ ತಾವು ದಿಟ್ಟ ಉತ್ತರ ನೀಡಿದರು. ಮುಸ್ಲಿಂ ದೇಶಗಳು ತಟಸ್ಥವಾಗಿರುವಂತೆ ನೋಡಿಕೊಂಡರು. ನಿಕ್ಸನ್ ಆಡಳಿತ ಪಾಕಿಸ್ತಾನದ ಪರವಾಗಿರುವುದು ಸ್ಪಷ್ಟವಾಗಿದ್ದಿತು. ಅದಕ್ಕಾಗಿ ಅಗತ್ಯವಾದ ಎಲ್ಲಿ ಸಿದ್ಧತೆ ಮಾಡಿಕೊಂಡ ಇಂದಿರಾಗಾಂಧಿ ಚೀನ ಯುದ್ದ ಪ್ರವೇಶಿಸದಂತೆ ಮಾಡಿದರು. ಸೇನಾನಾಯಕರ ಎಲ್ಲ ಸಲಹೆಗಳನ್ನು ಅನುಸರಿಸಿ ಸ್ಪಷ್ಟ ಸಿದ್ದತೆ ಹಾಗೂ ಎಚ್ಚರಿಕೆುಂದ ಅನಿವಾರ್ಯವಾಗಿ ಬಂಗ್ಲಾದೇಶ "ಮೋಚನಾ ಹೋರಾಟಕ್ಕೆ ಧುಮುಕಿದರು. 

1947ರಲ್ಲಿ ದೇಶ ಸ್ವಾತಂತ್ರ್ಯಗಳಿಸಿದಾಗ ಜನಸಂಖ್ಯೆ ಆಧರಿಸಿ ಮುಸ್ಮಿಮ ಬಹುಸಂಖ್ಯಾತ ಪ್ರದೇಶಗಳನ್ನು ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳಾದವು. ಎರಡೂ ಭೌಗೋಲಿಕ ಪ್ರದೇಶಗಳಲ್ಲಿ ಸಾಂಸ್ಕೃತಿಕ ಒಮ್ಮತ"ರಲಿಲ್ಲ. ಜೊತೆಗೆ ಪೂರ್ವ ಪಾಕಿಸ್ತಾನವೆಂದು ಕರೆಯಲ್ಪಟ್ಟ ಇಂದಿನ ಬಾಂಗ್ಲಾದೇಶವಾಸಿಗಳನ್ನು ಕೀಲಾಗಿ ಕಾಣಲಾಗುತ್ತಿದ್ದಿತು. ಒಂದು ರೀತಿ ಸಾಂಸ್ಕೃತಿಕ ಸಂಘರ್ಷ ನಡೆಯುತ್ತಿದ್ದಿತು. 1971 ಮಾರ್ಚ 25ರ ಚುನಾವಣೆಯಲ್ಲಿ ಬಂಗ್ಲಾದೇಶದ ಅವಾ"ುಲೀಗ ಸ್ಪಷ್ಟ ಬಹುಮತ ಪಡೆದಿದ್ದರೂ ಅಧಿಕಾರ ಹಸ್ತಾಂತರವಾಗಲಿಲ್ಲ. ಜೊತೆಗೆ "ಆಪರೇಶನ್ ಸರ್ಚಲೈಟ್" ನಡೆಸಿ ನರಮೇದ ಪ್ರಾರಂಭಿಸಲಾುತು. ಇದಕ್ಕೆ ಮೊದಲು 1970ರಲ್ಲಿ ಬಂಗ್ಲಾದೇಶ ಪ್ರದೇಶಕ್ಕೆ 1970 ನವೆಂಬರ್ 12ರಂದು ಚಂಡಮಾರುತ ಅಪ್ಪಳಿಸಿ 3 ರಿಂದ 5 ಲಕ್ಷ ಜನರು ಸಾ"ಗೀಡಾಗಿದ್ದರು. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದಿತು. ಅಂದು ಪಾಕಿಸ್ತಾನ ಸರಕಾರ ಸಂಕಷ್ಟದಲ್ಲಿರುವವರ ನೆರ"ಗೆ ಧಾ"ಸಿರಲಿಲ್ಲ ಈ ಬಗ್ಗೆ ಜನರಲ್ಲಿ ಆಕ್ರೋಶ ಹೆಪ್ಪುಗಟ್ಟಿದ್ದಿತು. ಚುನಾವಣೆಯಲ್ಲಿ ಅವಾ"ುಲೀಗ ಜಯಶಾಲಿಯಾದರೂ. ಅದಕ್ಕೆ ದೊರೆಯಬೇಕಾದ ಅಧಿಕಾರ ಗದ್ದುಗೆ ಸಿಗಲಿಲ್ಲ. ಈ "ನ್ನೆಲೆಯಲ್ಲಿ 1971ರ ಮಾರ್ಚ 25ರಂದು ಬಂಗ್ಲಾದೇಶ ಸೌರ್ವಭೌಮ ಸ್ವತಂತ್ರ ದೇಶವೆಂದು ಘೋಸಲಾುತು. ತನ್ನ ದೇಶದ ಸ್ವಾತಂತ್ರ್ಯ ರಕ್ಷಣೆಗಾಗಿ ಪಾಕಿಸ್ತಾನ ಸೈನ್ಯ ಪಡೆ "ರುದ್ಧ ಹೋರಾಡಲು ಮುಕ್ತವಾ"ನಿ ಸಂಘಟಿಸಲಾುತು. ಇದಕ್ಕೆ ಭಾರತ ಎಲ್ಲ ರೀತಿಯ ನೆರವು ನೀಡಿತು ತರಬೇತಿ ಸಹ ನೀಡಿತು. ಇದು "ಗೆರಿಲ್ಲಾ" ಯುದ್ಧವನ್ನು ಆರಂಭಿಸಿತು. 

ಪಾಕಿಸ್ತಾನ ಡಿಸೆಂಬರ್ 3, 1971ರಂದು ಭಾರತದ ಗಡಿ ಪ್ರದೇಶದ ವೈಮಾನಿಕ ನೆಲೆಗಳ ಮೇಲೆ ದಾಳಿ ನಡೆಸಿತು. ಮೊದಲ ಬಾಂಬ "ಭುಜ್" ವೈಮಾನಿಕ ನೆಲೆಯ ಮೇಲೆ ಹಾಕಲಾುತು. ಇಸ್ರೇಲಿ ಮಾದರಿಯ ದಾಳಿ ನಡೆಸಿ ಭಾರತದ "ಏರಪೊರ್ಸ್‌" ನೆಲಕಚ್ಚುವಂತೆ ನ್ಕ್ರೀಯ ಮಾಡಲು ಪಾಕ ಪ್ರಯತ್ನಿಸಿತು. ಆದರೆ ಎಚ್ಚತ್ತ ಭಾರತದ ವೈಮಾನಿಕ ಪಡೆಗಳು ಮರುಕ್ಷಣವೇ ಪಾಕಿಸ್ತಾನದ ಮೇಲೆ ದಾಳಿ ಮಾಡಿದವು. 

ಬಂಗ್ಲಾ "ಲೋಚನೆಗಾಗಿ ಭಾರತದ ಸೇನೆಯೊಂದಿಗೆ ನೌಕಾ ಹಾಗೂ ವೈಮಾನಿಕ ದಾಳಿ ನಡೆಸಲಾುತು. ಪೂರ್ವ ಪಾಕಿಸ್ತಾನದ ಗವರ್ನರ ಬಂಗ್ಲೆಯ ಕಂಪೌಂಡನಲ್ಲಿ ಬಾಂಬ ಹಾಕಲಾಗುವುದೆಂದು ರೇಡಿಯೋ ಮೂಲಕ ಎಚ್ಚರಿಕೆ ನೀಡಿ ಭಾರತ "ಮಾನಗಳು ಬಾಂಬ ದಾಳಿ ನಡೆಸಿದಾಗ ಸೋಲನ್ನು ಒಪ್ಪಿಕೊಂಡ ಪಾಕಿಸ್ತಾನ ಡಿಸೆಂಬರ್ 16ರಂದು ಶರಣಾಗತಿಗೆ ಒಪ್ಪಿತು. ಲೆಪ್ಟಿನಂಟ ಜನರಲ್ ಅ"ುರ ಅಬ್ದುಲ್ಲಾಖಾನ ನಿಯಾಜಿ ಶರಣಾಗತಿ ಒಪ್ಪಂದಕ್ಕೆ ಸ" ಹಾಕಿದರು ಇವರೊಂದಿಗೆ ಪಾಕಿಸ್ತಾನದ 93 ಸಾ"ರ ಸೈನಿಕರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾದರು. ಇದು ಆಧುನಿಕ ಯುದ್ಧ ಇತಿಹಾಸದಲ್ಲಿಯೇ ಅತ್ಯಧಿಕ ದೊಡ್ಡ ಶರಣಾಗತಿಯಾಗಿದೆ. ಭಾರತದ ಪರವಾಗಿ ಲೆಪ್ಟನೆಂಟ್ ಜನರಲ್ ಜಗಜಿತಸಿಂಗ್ ಅರೋರಾ ಈ ಶರಣಾಗತಿ ಪಡೆದರು. 1972ರಲ್ಲಿ ಆದ ಸಿಮ್ಲಾ ಒಪ್ಪಂದದ ಪ್ರಕಾರ ಪಾಕಿಸ್ತಾನ ಬಂಗ್ಲಾದೇಶವನ್ನು ಮಾನ್ಯ ಮಾಡಿತು. ಮುಂದೆ 5 ತಿಂಗಳಲ್ಲಿ ಯುದ್ಧ ಕೈದಿಗಳನ್ನೆಲ್ಲ ಭಾರತ ಬಿಡುಗಡೆ ಮಾಡಲಾುತು. ಭಾರತ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡುವಲ್ಲಿ ಬಹಳ ಉದಾರವಾಗಿ ನಡೆದುಕೊಂಡಿತೆಂದು ಟೀಕಿಸಿದರೂ ಸಹ ಗೆದ್ದವರು ಯಾವಾಗಲೂ ಉದಾರವಾಗಿರಬೇಕೆಂಬ ತತ್ವ ಸಾರಿಸಿದ ಇಂದಿರಾಗಾಂಧಿ ಪ್ರಪಂಚದಲ್ಲಿ ಭಾರತ ಖ್ಯಾತಿ "ಜೃಂಭಿಸುವಂತೆ ಮಾಡಿದರು. 

ಜೆ.ಕೆ.ಜಮಾದಾರ