ಜುಲೈ 1 ರಿಂದ ಮಹಾಲಿಂಗಪುರ ಪಟ್ಟಣದಲ್ಲಿ ಬೃಹತ್ ಮೊತ್ತಗಳ ತೆರುಬಂಡಿ ವೈಭವ
Teru Bandi Utsava
ಮಹಾಲಿಂಗಪುರ 30: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಬಸವೇಶ್ವರ ಜಾತ್ರಾ ಕಮಿಟಿ ವತಿಯಿಂದ ಬೃಹತ್ ಮೊತ್ತಗಳ ತೆರುಬಂಡಿ ಉತ್ಸವ ಜುಲೈ 01 ಹಾಗೂ 02 ರಂದು ಪಟ್ಟಣದಲ್ಲಿ ಜರುಗಲಿದೆ ಎಂದು ಕಮಿಟಿ ಅಧ್ಯಕ್ಷರಾದ ಯಲ್ಲನ್ನಗೌಡ ಪಾಟೀಲ್ ತಿಳಿಸಿದ್ದಾರೆ.
ಪ್ರಥಮ ಬಹುಮಾನ ರಾಯಲ್ ಎನ್ ಫೀಲ್ಡ್, ದ್ವಿತೀಯ ಹೊಂಡಾ ಶೈನ್, ತೃತೀಯ ಬಹುಮಾನ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಚತುರ್ಥ ಬಹುಮಾನ ಹೀರೋ ಎಚ್ ಎಫ್ ಹೀಗೆ ದ್ವಿ ಚಕ್ರ ವಾಹನಗಳ ಪ್ರಶಸ್ತಿ ಫಲಕಗಳನ್ನು ಅಗ್ರ ಶ್ರೇಣಿ ಪಡೆದ ಎತ್ತುಗಳ ಮಾಲೀಕರು ಪಡೆಯುವರು.
ಮತ್ತು ನಂತರ 5 ನೇ ಶ್ರೇಣಿಯಿಂದ ಅಂದರೆ 40 ಸಾವಿರ ನಗದು ಹಣದಿಂದ ಆರಂಭವಾದ ಬಹುಮಾನಗಳ ಶ್ರೇಣಿ ಕೊನೆಯ 25 ನೇ ಬಹುಮಾನ ರೂಪದಲ್ಲಿ 5 ಸಾವಿರ ಹಣ ಹಾಗೂ ಪಾರಿತೋಷಕಗಳನ್ನು ಪಡೆಯಲಿವೆ.
ಮಹಾಲಿಂಗಪುರದ ಸಾಧುಗುಡಿ ಭಗೀರಥ ಸರ್ಕಲ್ ಹತ್ತಿರದ ಗಟ್ಟಿ ನೆಲದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತಿಮವಾಗಿ ಟೂರ್ನಿಯಲ್ಲಿ ಭಾಗವಹಿಸುವ ಎತ್ತುಗಳ ಲಾಟ್ ಎಪಿಎಂಸಿ ಟೆಂಡರ್ ಹಾಲ್ ನಲ್ಲಿ ಎತ್ತಲಾಗುವುದು.ಜರ್ಸಿ ಎತ್ತುಗಳಿಗೆ ಪ್ರವೇಶವಿಲ್ಲ. ಸ್ಪರ್ಧೆಯ ಕಾಲಾವಕಾಶ 2 ನಿಮಿಷಗಳು ಮಾತ್ರ.ಎತ್ತುಗಳಿಗೆ ಚಾರ್ಜರ್ ಹಚ್ಚುವಂತಿಲ್ಲ.ಏನೇ ತಂಟೆ ತಕರಾರುಗಳಿಗೆ ಕಮಿಟಿ ನಿರ್ಧಾರವೇ ಅಂತಿಮವಾಗಿರುತ್ತದೆ. ಎಲ್ಲರ ಸಹಕಾರ ಪಂದ್ಯಾವಳಿಯ ಶೋಭೆಯನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಕೃಷ್ಣಗೌಡ ಪಾಟೀಲ್ - 9901343522, ನಾರಾಯಣಗೌಡ - 9731097077, ಶಿವಪ್ಪ ಗಿರಡ್ಡಿ - 9036739529, ಮಹಾಲಿಂಗಪ್ಪ ಪಾಟೀಲ್ - 9738775747 ಮತ್ತು ವಿಠ್ಠಲ. ಗು. ಪಾಟೀಲ್ - 9886610061 ಈ ಮೋಬೈಲ್ ಸಂಖ್ಯೆಗಳಿಗೆ ಸಂಪರ್ಕ ಹೊಂದಲು ಕೋರಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 