ದೇವಾಲಯಗಳು ಭಕ್ತಿ ಕೇಂದ್ರಗಳ ಜತೆಗೆ ಶಕ್ತಿ ಕೇಂದ್ರಗಳಾಗಲಿ: ಮನೋಹರಜಿ ಮಠ
Temples should become centers of energy alongside centers of devotion: Manoharji Math
ಲೋಕದರ್ಶನ ವರದಿ
ಬೆಳಗಾವಿ, ಸೆ.20: ದೇವಾಲಯಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿದ್ದು, ಸಂಸ್ಕಾರ ಹಾಗೂ ದೈವತ್ವವನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಕರ್ನಾಟಕ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರಜಿ ಮಠ ಹೇಳಿದರು.
ಬೆಳಗಾವಿಯ ಬಸವ ಕಾಲನಿಯ ಬಸವಣ್ಣ ದೇವಸ್ಥಾನದಲ್ಲಿ ನಡೆದ ಬೆಳಗಾವಿ ನಗರ ದೇವಾಲಯಗಳ ಸಂವರ್ಧನಾ ಸಮಿತಿ ಸಂಯೋಜಕರು ಹಾಗೂ ಅರ್ಚಕರ ಎರಡನೇ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯಗಳು ಭಕ್ತಿ ಕೇಂದ್ರಗಳ ಜತೆಗೆ ಶಕ್ತಿ ಕೇಂದ್ರಗಳಾಗಬೇಕು. ಮೂಢನಂಬಿಕೆಗಳನ್ನು ದೂರಗೊಳಿಸಿ, ಮೂಲ ನಂಬಿಕೆಗಳನ್ನು ಬೆಳೆಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.
ದೇವಾಲಯಗಳು ನಿತ್ಯ ಮೌನ, ಧ್ಯಾನ, ಪ್ರಾರ್ಥನೆ, ಭಜನೆ ಹಾಗೂ ಆಧ್ಯಾತ್ಮಿಕ ಸ್ತದಿಿ್ಪೂಹ್ಕಿದೀೂು ಕೇಂದ್ರಗಳಾಗಬೇಕು. ಎಲ್ಲರನ್ನು ಒಗ್ಗೂಡಿಸಿ ಪ್ರೀತಿ, ಪ್ರೇಮ ಹಾಗೂ ಧರ್ಮವನ್ನು ಬೆಳೆಸುವ ಕುಟೀರಗಳಾಗಬೇಕು ಎಂದು ಹೇಳಿದರು.
ಸಮಾಜದಲ್ಲಿನ ಅಸೂಯೆ, ನಿರಾಸೆಗಳನ್ನು ದೂರ ಮಾಡಿ ಆಶಾಭಾವನೆ ಮೂಡಿಸುವ ಜತೆಗೆ, ‘ಎಲ್ಲರೂ ನಮ್ಮವರು’ ಎಂಬ ಭಾವನೆ ಬೆಳೆಸುವ ನಿಟ್ಟಿನಲ್ಲಿ ದೇವಾಲಯಗಳಲ್ಲಿ ಸಾಮಾಜಿಕ ಪರಿವರ್ತನೆಯ ಹತ್ತು ಹಲವು ಚಟುವಟಿಕೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.
ದೇವಾಲಯಗಳ ಸಮಿತಿ ಕಾರ್ಯಚಟುವಟಿಕೆಗಳು ಹಾಗೂ ಅರ್ಚಕರಿಗೆ ದೇವಾಲಯಗಳ ಆಚರಣೆ, ಪೂಜೆ ಮತ್ತು ಪುನಸ್ಕಾರಗಳ ಕುರಿತು ಅರಿವು ಮೂಡಿಸಲು ವಿಶೇಷ ಕಾರ್ಯಾಗಾರ ಆಯೋಜಿಸಲಾಗುವುದು. ಈ ಕಾರ್ಯಾಗಾರಕ್ಕೆ ಅಕ್ಟೋಬರ್ ಅಂತ್ಯದಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ ಹಿರೇಮಠ ವಹಿಸಿದ್ದರು. ಶ್ರೀಕಾಂತ ಕದಂ ಹಾಗೂ ಕಲ್ಲಪ್ಪ ಗಾಣಿಗೇರ ಸೇರಿದಂತೆ ವಿವಿಧ ಬಡಾವಣೆಗಳ ದೇವಾಲಯಗಳ ಸಂವರ್ಧನಾ ಸಮಿತಿ ಸದಸ್ಯರು, ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದರು. ?ೀಶ್ ಮಾಳವಾಡೆ ಸ್ವಾಗತಿಸಿದರು. ಸುರೇಶ್ ಉರಬಿನಹಟ್ಟಿ ನಿರೂಪಿಸಿದರು. ಮಹೇಶ್ ಮಾವಿನಕಟ್ಟಿ ವಂದಿಸಿದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 