ಸತ್ಪ್ರಜೆಗಳನ್ನು ತಯಾರಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ: ಗುರುರಾಜ ಐನಾಪುರ
Teachers bear the significant responsibility of molding good citizens: Gururaj Ainapura
ಲೋಕದರ್ಶನ ವರದಿ
ಮಹಾಲಿಂಗಪುರ 07 : ಭವ್ಯ ಭಾರತದ ಸತ್ಪ್ರಜೆಗಳನ್ನು ತಯಾರಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕರ್ನಾಟಕ ಬ್ಯಾಂಕ್ ಮಹಾಲಿಂಗಪುರ ಶಾಖೆಯ ಹಿರಿಯ ಶಾಖಾ ಮ್ಯಾನೇಜರ್ ಗುರುರಾಜ ಐನಾಪುರ ಹೇಳಿದರು.
ನಗರದ ಶ್ರೀ ಬಸವಾನಂದ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಸ್ ಕೆ ಗಿಂಡೆ, ಮತ್ತು ಸಿದ್ದಾರೂಢ ಮುಗಳಖೋಡ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಕರು ಸಮಾಜದ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮಾನವೀತೆಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಮಹಾಲಿಂಗಪುರ ಶಾಖಾ ಸಿಬ್ಬಂದಿಗಳಾದ ಮಹಾಂತೇಶ ಶೆಟ್ಟರ್ , ಈರ್ಪ ಮಮದಾಪೂರ, ಲಕ್ಷ್ಮೀ ಕೆ ವಿ, ಉಮೇಶ್ ಕೇಸಲ್ಕರ್, ರೇವಪ್ಪ ಬಬಲೇಶ್ವರ, ಉಮೇಶ್ ಸವದಿ, ಶನ್ಮತಾ ಉಳ್ಳಾಗಡ್ಡಿ, ವಾದಿರಾಜ್ ಕುಲಕರ್ಣಿ, ಮಂಗಳಾ, ರಾಮು ಕೆಳಗಡೆ , ರಮೇಜಾ, ಯಲ್ಲಪ್ಪ ಹಟ್ಟಿ, ಬಿ ಡಿ ಸೊರಗಾವಿ,ಕಲ್ಲಪ್ಪ ಚಿಂಚಲಿ, ಪ್ರಭು ಬೆಳಗಲಿ, ಮಹಾದೇವ ಅಂಗಡಿ ಸೇರಿ ಶಿಕ್ಷಕ ವೃಂದ ಸೇರಿ ಹಲವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 