ಶಿಕ್ಷಕರ ಸೇವೆ ಅಮೂಲ್ಯ: ಅಲ್ಲಾಭಕ್ಷ ಉಕ್ಕಲಿ

ಶಿಕ್ಷಕರ ಸೇವೆ ಅಮೂಲ್ಯ: ಅಲ್ಲಾಭಕ್ಷ ಉಕ್ಕಲಿ  Teachers' service is invaluable: Allabhaksh Ukkali


ಇಂಡಿ, ಸೆ.5: ಇಂಡಿಯ ಆರ್‌.ಎಂ. ಶಹಾ ಪಬ್ಲಿಕ್ ಶಾಲೆ ಹಾಗೂ ಎಫ್‌.ಕೆ. ದೋಶಿ ಸೈನ್ಸ್‌ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಸಂಯೋಜಕ ಅಲ್ಲಾಭಕ್ಷ ಉಕ್ಕಲಿ, ಶಿಕ್ಷಕರು ಕೇವಲ ಪಠ್ಯವಿಷಯಗಳನ್ನು ಬೋಧಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು.  

ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕರು ನಿಸ್ವಾರ್ಥವಾಗಿ ಸಂತೋಷ ಕಾಣುತ್ತಾರೆ. ಶಿಕ್ಷಕರ ವೃತ್ತಿ ಸಮಾಜದ ಅತ್ಯಂತ ಗೌರವಯುತ ಸೇವೆಯಾಗಿದೆ ಎಂದರು.  

ಸಂಸ್ಥೆಯ ಅಧ್ಯಕ್ಷ ಡಿ.ಆರ್‌. ಶಹಾ ಅವರು ಡಾ. ರಾಧಾಕೃಷ್ಣನ್ ಅವರ ಜೀವನ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಶಿಕ್ಷಕರು ನಿರಂತರವಾಗಿ ಜ್ಞಾನವನ್ನು ನವೀಕರಿಸಿಕೊಂಡು, ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಹೊಸ ವಿಷಯಗಳನ್ನು ಕಲಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕು ಎಂದು ಸಲಹೆ ನೀಡಿದರು.  

ಶಾಲೆಯ ಪ್ರಾಂಶುಪಾಲ ಪ್ರಕಾಶ್ ಬಿ. ಪಾಟೀಲ್, ಶೈಕ್ಷಣಿಕ ಮಾರ್ಗದರ್ಶಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.