ಶಿಕ್ಷಕರ ದಿನಾಚರಣೆ: ತಂದೆಯ ಸೇವಾ ಪರಂಪರೆ ಮುಂದುವರಿಸಿದ ಪುತ್ರರು
Teachers' Day: Sons carry forward their father's legacy of service
ಮುಂಡರಗಿ, ಸೆ.5: ಶಿಕ್ಷಕರು ಕೇವಲ ಅಕ್ಷರ ಜ್ಞಾನವನ್ನು ಬೋಧಿಸುವವರಲ್ಲ. ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವವರು, ಉತ್ತಮ ಸಂಸ್ಕಾರ ಬೆಳೆಸುವವರು ಹಾಗೂ ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಹೇಳಲಾಗುತ್ತದೆ. ಅಂತಹ ಮಹಾನ್ ಶಿಕ್ಷಕರ ಸೇವೆಯನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ತಂದೆಯ ಆದರ್ಶಗಳನ್ನು ಕೇವಲ ನೆನಪಿಸಿಕೊಳ್ಳದೆ ಸಮಾಜಸೇವೆಯ ಮೂಲಕ ಮುಂದುವರಿಸುತ್ತಿರುವ ಕುಟುಂಬವೊಂದು ಮುಂಡರಗಿಯಲ್ಲಿ ಗಮನ ಸೆಳೆಯುತ್ತಿದೆ.
ತಾಲೂಕಿನ ಕಕ್ಕೂರು ಗ್ರಾಮದ ದಿವಂಗತ ಶಿಕ್ಷಕ ಶ್ರೀ ಜಿ.ವಿ. ಪಾಟೀಲ ಅವರ ಸ್ಮರಣಾರ್ಥ, ಅವರ ಪುತ್ರರಾದ ವೀರಭದ್ರಗೌಡ (ಮುತ್ತು), ಜಗನ್ನಾಥಗೌಡ ಹಾಗೂ ವಿಶ್ವನಾಥಗೌಡ ಅವರ ನೇತೃತ್ವದಲ್ಲಿ ಮುಂಡರಗಿಯ ಪಾಟೀಲ ಆಪ್ಟಿಕಲ್ಸ್ ವತಿಯಿಂದ ಈ ವರ್ಷವೂ ವಿಶೇಷ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.5ರಿಂದ ಸೆ.20ರವರೆಗೆ ಪಾಟೀಲ ಆಪ್ಟಿಕಲ್ಸ್ನಲ್ಲಿ ಸಾರ್ವಜನಿಕರಿಗೆ ವಿವಿಧ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರ ಭಾಗವಾಗಿ ಸಾರ್ವಜನಿಕರ ಕಣ್ಣಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಂಪ್ಯೂಟರ್ ಆಧಾರಿತ ಉಚಿತ ನೇತ್ರ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಯಾವುದೇ ಶುಲ್ಕವಿಲ್ಲದೆ ಈ ಸೌಲಭ್ಯ ಪಡೆಯಬಹುದಾಗಿದೆ.
ಇದರೊಂದಿಗೆ ಗ್ರಾಹಕರ ಅನುಕೂಲಕ್ಕಾಗಿ ಕೇವಲ ?799ಕ್ಕೆ ಒಂದು ಫ್ರೇಮ್ ಖರೀದಿಸಿದರೆ ಮತ್ತೊಂದು ಫ್ರೇಮ್ ಉಚಿತ ನೀಡುವ ಕೊಡುಗೆಯನ್ನು ಘೋಷಿಸಲಾಗಿದೆ. ಆಯ್ದ ಬ್ರಾಂಡೆಡ್ ಲೆನ್ಸ್ಗಳ ಮೇಲೆ ಶೇ.20ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿದೆ.
ದಿವಂಗತ ಜಿ.ವಿ. ಪಾಟೀಲ ಅವರು ಶಿಕ್ಷಕರಾಗಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಅನೇಕ ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡಿದ್ದರು. ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯನ್ನು ಬೆಳೆಸುವಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಸಮಾಜದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಅವರು ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಸಮಾಜ ನಿರ್ಮಾಣದ ಜವಾಬ್ದಾರಿಯೆಂದು ಭಾವಿಸಿದ್ದರು.
“ತಂದೆಯವರು ನೀಡಿದ ಶಿಕ್ಷಣ, ಸಂಸ್ಕಾರ ಮತ್ತು ಸೇವೆಯ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂಬ ಆಶಯದೊಂದಿಗೆ ಅವರ ಪುತ್ರರು ಪ್ರತಿವರ್ಷ ಈ ಸೇವಾ ಅಭಿಯಾನ ನಡೆಸುತ್ತಿದ್ದಾರೆ.
ಒಬ್ಬ ಶಿಕ್ಷಕರಾಗಿ ಜಿ.ವಿ. ಪಾಟೀಲ ಅವರು ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡಿದ್ದರೆ, ಅವರ ಪುತ್ರರು ಇಂದು ನೇತ್ರ ಸೇವೆಯ ಮೂಲಕ ಸಾರ್ವಜನಿಕರ ಕಣ್ಣಿನ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ. ಈ ಮೂಲಕ ತಂದೆಯ ಸೇವಾ ಪರಂಪರೆ ಮತ್ತೊಂದು ರೂಪದಲ್ಲಿ ಮುಂದುವರಿದಂತಾಗಿದೆ.
ಯಾರನ್ನಾದರೂ ಸ್ಮರಿಸುವುದೆಂದರೆ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡುವುದು ಅಥವಾ ಹೆಸರನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ; ಅವರು ಬದುಕಿನಲ್ಲಿ ಪಾಲಿಸಿಕೊಂಡು ಬಂದ ಮೌಲ್ಯಗಳನ್ನು ಸಮಾಜದಲ್ಲಿ ಮುಂದುವರಿಸುವುದೇ ನಿಜವಾದ ಗೌರವ. ಜಿ.ವಿ. ಪಾಟೀಲ ಅವರ ಪುತ್ರರು ಕೈಗೊಂಡಿರುವ ಈ ಸೇವಾ ಕಾರ್ಯ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.
ಮುಂಡರಗಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸೆ.5ರಿಂದ 20ರವರೆಗೆ ನಡೆಯುವ ಈ ವಿಶೇಷ ಸೇವಾ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಪಾಟೀಲ ಆಪ್ಟಿಕಲ್ಸ್ ವತಿಯಿಂದ ಮನವಿ ಮಾಡಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 