ಪ್ರಾರ್ಥನಾ ಸಮಯದಲ್ಲಿ ಹೃದಯಾಘಾತ: ಶಿಕ್ಷಕ ಸಾವು
Teacher dies of heart attack during prayer
ಜಮಖಂಡಿ 27: ನಗರದ ತುಂಗಳ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂದಿನಂತೆ ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಿಗ್ಗೆಯ ಪ್ರಾರ್ಥನಾ ಸಮಯದಲ್ಲಿ ಗುರುಪಾದ ಕಾಶಿರಾಯ ಹಿಪ್ಪರಗಿ ಶಿಕ್ಷಕ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ನಾವಲಗಿ ಗ್ರಾಮದ ಗುರುಪಾದ ಕಾಶಿರಾಯ ಹಿಪ್ಪರಗಿ (48) ಎಂಬ ಕನ್ನಡ ಭಾಷಾ ಶಿಕ್ಷಕ ನಾವಲಗಿಯಲ್ಲಿ ಹಲವಾರು ವರ್ಷ ಮತ್ತು ಕಳೆದ 13 ವರ್ಷದಿಂದ ತುಂಗಳ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳಿಗೆ ದಾರೀದೀಪವಾಗಿದ್ದಾರೆ. ಇವರು ಶಾಲಾ ಸಮಯದ ಮುಂಜಾನೆ ಪ್ರಾರ್ಥನಾ ಸಮಯದಲ್ಲಿ ಏಕಾಏಕಿ ಹೃದಯಾಘಾತ ಸಂಬವಿಸಿದೆ. ಶೀಘ್ರವೇ ಚಿಕಿತ್ಸೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ 10 ಗಂಟೆಗೆ ನಿಧನರಾಗಿದ್ದರೆ.
ಗ್ರಾಮದಲ್ಲಿ ಶಿಕ್ಷಕನ ಅಗಲಿಕೆಗೆ ಜಮಖಂಡಿ ಮತ್ತು ನಾವಲಗಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದರು. ತುಂಗಳ ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಿಕ್ಷಕನ ಅಗಲಿಕೆಗೆ ಕಣ್ಣಿರು ಸುರಿಸುತ್ತಿರುವುದು ದೃಶ್ಯ ಕಂಡುಬಂದಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 