ಶಿಕ್ಷಕಿ ಪ್ರೇಮಾ ನಾಯ್ಕಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

Teacher Prema Nayak wins state-level best teacher award

ಲೋಕದರ್ಶನ ವರದಿ 

ಶಿಕ್ಷಕಿ ಪ್ರೇಮಾ ನಾಯ್ಕಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ 


ಸಿಂದಗಿ 18: ಪಟ್ಟಣದ  ಬಸವ ನಗರದ ಜ್ಞಾನಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರು ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. 

      ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆಯಿಂದ ಏಪ್ರಿಲ್ 26ರಂದು ಆಯೋಜಿಸಲಾಗಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಜ್ಞಾನಭಾರತಿ ಶಾಲೆಯ ಆದರ್ಶ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

 ಶಿಕ್ಷಕಿ ಪ್ರೇಮಾ.ಎನ್ ನಾಯ್ಕ  ಅವರು ಕಳೆದ ಸುಮಾರು ಎರಡು ದಶಕಗಳಿಂದ ಜ್ಞಾನಭಾರತಿ ಶಾಲೆಯ  ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ರೂಪಿಸುವಲ್ಲಿ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರ ಪಾತ್ರ ದೊಡ್ಡದಿದೆ. ಅವರನ್ನು ಗುರುತಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಭಾಜನರಾಗಿದ್ದಾರೆ.    

       ಈ ಸಾಧನೆಗೆ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ, ಶಾಲೆಯ ಸಹದ್ಯೋಗಿಗಳು, ಆಡಳಿತ ಮಂಡಳಿ, ವಿದ್ಯಾರ್ಥಿಗಳು,  ಅಪಾರ ಪಾಲಕರು  ಅಭಿಮಾನಿಗಳು  ಶುಭ ಕೋರಿದ್ದಾರೆ. ಹಲವು  ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಶಿವು ಬಡಾನೂರ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಉಪನ್ಯಾಸಕರಾದ ಸಿದ್ದಲಿಂಗ ಕಿಣಗಿ, ಮಾಹಾಂತೇಶ ನೂಲನವರ, ಕವಿ ಮೌಲಾಲಿ ಆಲಗೂರ .ಶಿಕ್ಷಕ ಕವಿ ಕೆ .ಜಿ.ಹತ್ತಳ್ಳಿ . ರಾಗರಂಜನಿ ಸಂಚಾಲಕ ಡಾ .ಪ್ರಕಾಶ, ಶಿಕ್ಷಕಿ ಶಿಲ್ಪಾ.   ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸೇರಿದಂತೆ  ಹಲವರು ಹಾರೈಸಿದ್ದಾರೆ.