ತಾಲೂಕು ಮಟ್ಟದ ಬೃಹತ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶ

ಬ್ಯಾಡಗಿ, 07: ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳು ನಿಜವಾದ ಜಾತ್ಯತೀತ ಯೋಜನೆ. ಎಲ್ಲಾ ಧರ್ಮದ ಜನರು ಈ ಯೋಜನೆಗಳ ಫಲಾನುಭವಿಗಳು. ಇಂತಹ ಗ್ಯಾರಂಟಿಗಳಿಂದ ರಾಜ್ಯದ ಜನರ ಬದುಕು ಹಸನಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಬುಧವಾರ ಅವರು ಸ್ಥಳೀಯ ಸಿದ್ದೇಶ್ವರ ಕಲ್ಯಾಣ ಮಂಟಪದ  ಸಭಾಭವನದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ  ಸರಕಾರ ಅನುಷ್ಠಾನ ಮಾಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಬ್ಯಾಡಗಿ ತಾಲೂಕು ಮಟ್ಟದ ಬೃಹತ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಚುನಾವಣೆಗೆ ಮೊದಲು ಓಟಿಗೋಸ್ಕರ ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳ್ತಾರೆ ಅಂತಾ  ಬಿಜೆಪಿಯವರು ಹೇಳ್ತಾ ಇದ್ರು. ಅಧಿಕಾರಕ್ಕೆ ಬಂದ ಬಳಿಕ ಯಾವಾಗ ಮಾಡ್ತೀರಿ ಅಂತ ಪ್ರಶ್ನೆ ಮಾಡಲು ತೊಡಗಿದರು.  

ನುಡಿದಂತೆ ನಡೆದ ನಮ್ಮ ಸರಕಾರ ದೇಶದ ಇತಿಹಾಸದಲ್ಲೇ , ಜನರಿಗೆ ನೇರವಾಗಿ ಮುಟ್ಟುವ ದೊಡ್ಡ ಕಾರ್ಯಕ್ರಮ ಅನುಷ್ಠಾನಕ್ಕೆ ತಂದ ಸಾಧನೆ ಕಾಂಗ್ರೆಸ್ ಸರಕಾರದ್ದು ಎಂದರು.ಉಪಸಭಾಪತಿ ರುದ್ರ​‍್ಪ ಲಮಾಣಿ ಮಾತನಾಡಿ ರಾಜ್ಯದ  ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಿದ್ದರಾಮಯ್ಯ ಸರಕಾರವು ಇಡೀ ದೇಶಕ್ಕೆ ಮಾದರಿ ಯಾಗಿದೆ. ಯೋಜನೆಗಳು ಸುಳ್ಳು, ಪೊಳ್ಳು ಎಂದು ಹೇಳುತ್ತಿದ್ದವರೂ ಈಗ ಈ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಐದು ವರ್ಷಗಳ ಕಾಲವೂ ಈ ಗ್ಯಾರಂಟಿ ಯೋಜನೆಗಳು ಗ್ಯಾರಂಟಿ ಆಗಿರುತ್ತವೆ ಎಂದರು.ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾತನಾಡಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳಿಂದ ರಾಜ್ಯದ ಚಿತ್ರಣವೇ ಬದಲಾಗಿದೆ. ಪ್ರತಿ ಕುಟುಂಬದ ಆರ್ಥಿಕ ಸ್ಥಿತಿ ಎತ್ತರಿಸಲ್ಪಟ್ಟಿದೆ ಈ ಯೋಜನೆಗಳು ಚುನಾವಣಾ ಉದ್ದೇಶದಿಂದ ಮಾಡಿದ ಯೋಜನೆಗಳಲ್ಲ. ರಾಜ್ಯದ ಪ್ರತಿ ಕುಟುಂಬದ ಪರಿಸ್ಥಿತಿ ಅರಿತು ಮಾಡಿದ ಯೋಜನೆ.  

ಈ ಯೋಜನೆಯಿಂದ ಪ್ರತಿ ಫಲಾನುಭವಿ ಕುಟುಂಬವೂ ಮೂರು ಸಾವಿರದಿಂದ ಆರು ಸಾವಿರದವರೆಗೆ ಆದಾಯ ಪಡೆಯುವಂತಾಗಿದೆ ಎಂದರು. ರಾಜ್ಯ ಗ್ಯಾರಂಟಿ ಯೋಜನೆಯ ನಿಗಮದ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲಮಾತನಾಡಿ ಭಾಷಣಗಳಿಂದ ಬದುಕು ಬದಲಾಗುವುದಿಲ್ಲ. ಅದಕ್ಕೆ ಸಮರ​‍್ಕವಾದ ಯೋಜನೆಗಳು ಬೇಕು. ಅದನ್ನು ನಮ್ಮ ಸರಕಾರ ಮಾಡಿ ಜನರ ಬೆಂಬಲಕ್ಕೆ ನಿಂತಿದೆ. ಜನರನ್ನು ಬೆಂಬಲಿಸುವ ಸರಕಾರವನ್ನು ಜನರೂ ಬೆಂಬಲಿಸಬೇಕು. ಇಂಥಹ ಯೋಜನೆಗಳಿಗಾಗಿ ಸರಕಾರ ಯಾಕೆ ಹಣ ಖರ್ಚು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.ವೇದಿಕೆಯಲ್ಲಿಜಿಲ್ಲಾಧಿಕಾರಿ  ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯತಿ ಮುಖ್ಯಾಧಿಕಾರಿ ಅಕ್ಷಯ ಶ್ರೀಧರ್, ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಆಲದಾರ್ತಿ ,  ಧುರೀಣರಾದ ದಾನಪ್ಪ  ಚೂರಿ, ಶಂಬಣ್ಣ ಪಾಟೀಲ್,  ಬೀರ​‍್ಪ ಬಣಕಾರ. ಶಿವಪ್ಪ ಅಂಬಲಿ, ಶಿವಪುತ್ರ​‍್ಪ  ಅಗಡಿ, ಅಬ್ದುಲ್ ಮುನಾಫ್  ಎಲಿಗಾರ, ಅಧಿಕಾರಿಗಳಾದ.  ಕೆ, ಎಮ್,  ಮಲ್ಲಿಕಾರ್ಜುನ, ತಹಶೀಲ್ದಾರ ಪಟ್ಟರಾಜಗೌಡ, ವೈ, ಟಿ, ಪೂಜಾರ, ರಾಜು ಅರಳಿಕಟ್ಟಿ, ಅಶೋಕ ಬಸುರಾಜ ಸೇರಿದಂತೆ ಇತರರಿದ್ದರು.