ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ
Talent award and felicitation ceremony for students
ಜಮಖಂಡಿ 06: ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರ ಘಟಕ ಮತ್ತು ದೈವ ಮಂಡಳಿ ಸಹಯೋಗದಲ್ಲಿ ಜೂನ್ 14 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ವಿಭಾಗಗಳಲ್ಲಿ
ಸಾಧನಗೈದ ಸಾಧಕರಿಗೆ ಮತ್ತು ಇಬ್ಬರಿಗೆ ಜೀವಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಪ್ರತಿಭಾ ಪುರಸ್ಕಾರ ಅಧ್ಯಕ್ಷ ಉಮೇಶ ಬಾಂಗಿ ತಿಳಿಸಿದರು.
ನಗರದ ದಾನಮ್ಮ ದೇವಿ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ರಾಜಕಾರಣಿಗಳು, ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಯವರು ಭಾಗವಹಿಸಲಿದ್ದಾರೆ. ಬಣಜಿಗ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಸರು ನೋಂದಾಯಿಸುವ ಸ್ಥಳ ಮೋರೆ ಪ್ಲಾಟ್ ಶರಣ ಚೇತನ ಬ್ಯಾಂಕ್, ಬುರುಡಗಲ್ಲಿ ಗುರುಬಸವ ಬ್ಯಾಂಕ್, ಬಸವೇಶ್ವರ ಬ್ಯಾಂಕ್ ಪೋಸ್ಟ್ ಕಚೇರಿ ಹತ್ತಿರ ಹೀಗೆ ನಮ್ಮ ಬ್ಯಾಂಕ್‌ಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಬೇಕು. ಕೊನೆಯ ದಿನಾಂಕ ಜೂನ್ 12 ರಂದು ಸಂಜೆ 5 ಗಂಟೆಗೆವರಗೆ ಮಾತ್ರ ಅವಕಾಶ ಇರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ,ಆರ್, ಅನಂತಪುರ, ಸಂಗಮೇಶ ಹಲವಾಯಿ, ಮಲ್ಲಪ್ಪ ಜೈನಾಪುರ, ಷಣ್ಮುಖಪ್ಪ ಮಹಾಬಳಶೆಟ್ಟಿ, ಶಂಕರ ಜಿರಲಿ, ಪ್ರಭು ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಶಿವಾನಂದ ಗೊಂದಿ, ಮಲ್ಲಿಕಾರ್ಜುನ ಇಂಗಳಗಾಂವಿ, ಮುರಗೆಪ್ಪ ಕುರಿ, ಉಮೇಶ ಮುರಗೋಡ, ಬಸವರಾಜ ಹರಕಂಗಿ, ಸಂತೋಷ ಚನ್ನಾಳ, ಶ್ರೀಶೈಲ್ ಮೊಟಗಿ, ಸಂಜಯ ಕಂಕನವಾಡಿ, ಮಲ್ಲಿಕಾರ್ಜುನ ಜಿರಲಿ, ಬಸವರಾಜ ನರಗುಂದ, ಮುರಗೇಶ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 