ಎಚ್‌ಎಸ್ ಪಾಟೀಲ ಸಂಸ್ಥೆಯಲ್ಲಿ ಟ್ಯಾಲೆಂಟ ಸರ್ಚ್‌ ಪರೀಕ್ಷೆ

ತಾಳಿಕೋಟಿ 28: ಪಟ್ಟಣದ ಪ್ರತಿಷ್ಠಿತ ಎಚ್‌ಎಸ್ ಪಾಟೀಲ ಪದವಿ ಪೂರ್ವ ಮಹಾ ವಿದ್ಯಾಲಯ ಹಾಗೂ ದಾವಣಗೆರೆ ಪ್ರಗ್ಯಾ ಐಐಟಿ  ಅಕಾಡೆಮಿ ಇವರ ಸಹಯೋಗದಲ್ಲಿ ಪಿಯುಸಿ ಸೈನ್ಸ್‌ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗಾಗಿ ಟ್ಯಾಲೆಂಟ್ ಸರ್ಚ್‌ ಎಕ್ಷಾಮ 2024 ನಡೆಸಲಾಯಿತು.  

ರವಿವಾರ ಪಟ್ಟಣದ ಎಚ್‌ಎಸ್ ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಭಾಗವಹಿಸಿದರು. ಎಸ್ ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್‌ಎಸ್ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕ ಎಸ್‌.ವಿ.ಜಾಮಗೊಂಡಿ ಪ್ರಸ್ತಾವಿಕವಾಗಿ ಮಾತನಾಡಿ ಟ್ಯಾಲೆಂಟ್ ಸರ್ಚ್‌ ಎಕ್ಸಾಮ್ ಮಹತ್ವ ಹಾಗೂ ಅದರ ಉದ್ದೇಶವನ್ನು ತಿಳಿಸಿದರು.  

ಈ ಬಾರಿ ನಡೆದ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಸಂಸ್ಥೆಯಿಂದ ಅತ್ಯುತ್ತಮ ಸಾಧನೆ ಗೈದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಚಿಕ್ಕಮಠ, ಶಿವರಾಜ ಪೂಜಾರಿ, ಜಮೀರಾ ಅವಟಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಬಸನಗೌಡ ಪಾಟೀಲ, ಮುತ್ತಣ್ಣ, ಸಿದ್ದಪ್ಪ ಕಲಾ ವಿಭಾಗದಲ್ಲಿ ದರ್ಶನ ಕುಮಾರ ಬಡಿಗೇರ, ಶಿವಕುಮಾರ ನಾಯ್ಕೋಡಿ, ಸವಿತಾ ಪೂಜಾರಿ ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿ ವಿಜ್ಞಾನದಲ್ಲಿ ಶೇ. 97 ಅಂಕ ಪಡೆದು ಅತ್ಯುತ್ತಮ ಸಾಧನೆಗೈದ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿನಿ ಭವಾನಿ ಘೋರೆ​‍್ಡ ಇವರನ್ನು ಸಂಸ್ಥೆಯ ಅಧ್ಯಕ್ಷರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.  

ಸಂಘದ ಕಾರ್ಯದರ್ಶಿ ಕಿರಣ್ ಎಚ್ ಪಾಟೀಲ ರವಿ ಬಿ ಪಾಟೀಲ ನಿರ್ದೇಶಕ ಸಾಗರ ನಯ್ಯಮ. ಪ್ರಗ್ಯಾ ಅಕಾಡೆಮಿಯ ವೀರೇಶ್ ಬಳ್ಳೂರ.ಐ ಮಾಸ್ಟರ್ ಬಿಕೆ ಅಕಾಡೆಮಿ ಡೀನ ಹಾಗೂ ಗಣಿತ ಎಚ್‌.ಓ.ಡಿ.ರಘುನಂದನ ಪೈ. ಎಚ್‌ಎಸ್ ಪಾಟೀಲ್ ಸಂಸ್ಥೆಯ ಪ್ರಾಚಾರ್ಯರು ಮುಖ್ಯಸ್ಥರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತಿತರರು ಇದ್ದರು.  

ಶೃತಿ ಕೊಳೂರ ಪ್ರಾರ್ಥಿಸಿದರು. ಉಪನ್ಯಾಸಕ ಜಾಮಗೊಂಡಿ ಸ್ವಾಗತಿಸಿದರು ಹಾಗೂ ಶಿಕ್ಷಕ ಬಿಐ ಹಿರೇಹೋಳಿ ನಿರೂಪಿಸಿದರು.