ನರೇಗಾ ಯೋಜನೆಯ ಲಾಭ ಪಡೆದುಕೊಳ್ಳಿ: ಅಧ್ಯಕ್ಷೆ ರತ್ನವ್ವ ವಣಗೇರಿ

ಬಂಡಿ ಗ್ರಾಪಂ ಸಾಮಾನ್ಯ ಸಭೆ

ಯಲಬುರ್ಗಾ ನ 25: ನಗರ ಪ್ರದೇಶಗಳಿಗೆ ಗುಳೆ ಹೊಗುವುದನ್ನು ತಪ್ಪಿಸಲು ನರೇಗಾ ಯೋಜನೆ ರೂಪಿಸಲಾಗಿದೆ. ಸ್ಥಳೀಯರು ಉದ್ಯೋಗ ಪಡೆದುಕೊಳ್ಳುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ರತ್ನವ್ವ ಮಲ್ಲಪ್ಪ ವಣಗೇರಿ ಸಲಹೆ ನೀಡಿದರು. 

ತಾಲೂಕಿನ ಬಂಡಿ ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಉದ್ಯೋಗ ಖಾತ್ರಿ ಎನ್ನುವುದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಮಾಡಿಕೊಳ್ಳುವುದರ ಮೂಲಕ ಆರ್ಥಿಕ ಭದ್ರತೆ ಸ್ಥಿರ ಮಾಡಿಕೊಳ್ಳಬಹುದು. ಕೆರೆ ಕಟ್ಟೆಗಳ ನಿರ್ಮಾಣ ಕೆರೆ ಹೂಳೆತ್ತುವುದು ಸಿಸಿ ರಸ್ತೆಗಳ ನಿರ್ಮಾಣ ದಂತಹ ಸಾಮೂಹಿಕ ಕೆಲಸಗಳು ಹಾಗೂ ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ ಜಮೀನಿನ ಅರಣೀಕರಣ ಗಿಡಗಳ ನೆಡುವುದು ಹೀಗೆ ಹತ್ತು ಹಲವು ಕೆಲಸಗಳು ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಶ ನಾಯಕ ಮಾತನಾಡಿ, 2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಸಿದ್ದಪಡಿಸಲು ಕ್ರೀಯಾಯೋಜನೆ ಸಿದ್ದಪಡಿಸಲಾಗುತ್ತಿದೆ. ರೈತರಿಗೆ ನರೇಗಾ ಯೋಜನೆಯಡಿ ಉದ್ಯೋಗವನ್ನು ಪಡೆದುಕೊಳ್ಳಬೇಕು. 

 ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ, ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್‌.ಅಂಬೇಡ್ಕರ ವಸತಿ ಯೋಜನೆಯಡಿ, ಒಟ್ಟು ಸುಮಾರು 70 ಮನೆಗಳು ಬಂದಿದ್ದು. ಸದಸ್ಯರ ಸಮ್ಮುಖದಲ್ಲಿ ಅನುಮೋದನೆ ಮಾಡಲಾಗಿದೆ.ಇದರಲ್ಲಿ 45 ಸಾಮಾನ್ಯ, 7 ಮುಸ್ಲಿಂ, 13 ಎಸ್ಸಿ ಹಾಗೂ 5 ಎಸ್ಟಿ ಸಮಾಜಕ್ಕೆ ಮೀಸಲಾಗಿದ್ದರಿಂದ, ಈ ಯೋಜನೆಗೆ ಅನುಮೋದನೆ ಪಡೆಯುವ ಮೂಲಕ ಮನೆಗಳ ಹಂಚಿಕೆಯನ್ನು ಮಾಡಲಾಗುತ್ತಿದೆ ಎಂದರು. 

 ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಕಳಕವ್ವ ಕಾಮಪ್ಪ ಹೊರಪೇಟಿ, ಸದಸ್ಯರಾದ ಕಳಕಮ್ಮ ಹನಮಂತಪ್ಪ ಅಡಗುಡದ, ಬಸಪ್ಪ ತೊಂಡಿಹಾಳ, ಬಸವರಾಜ ರೊಟ್ಟಿ, ಯಮನೂರ ಭಜಂತ್ರಿ, ವೀರಯ್ಯ ಪುರಾಣಿಕಮಠ, ಕಳಕಪ್ಪ ಗೌಡ್ರ, ರೇಣುಕಾಬಾ ಹವಲ್ದಾರ, ಶಶಿಕಲಾ ದೇವಪ್ಪ ದಮ್ಮೂರು ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.