ಅನಧಿಕೃತ ಮಣ್ಣು ಸಾಗಣೆ ವಿರುದ್ಧ ಕ್ರಮ ಕೈಗೊಳ್ಳಿ: ಲೋಕಾಯುಕ್ತ ಪಿಎಸ್‌ಐ ಮಹ್ಮದ್ ರಫಿ

ಕಂಪ್ಲಿ 09: ಪ್ರತಿಯೊಂದು ಸರ್ಕಾರಿ ಅಧಿಕಾರಿಗಳು ಕೇವಲ ಭ್ರಷ್ಟರಹಿತರಾಗಿ ಕೆಲಸ ಮಾಡಿದರೆ ಸಾಲದು, ಜೊತೆಗೆ ದಕ್ಷತೆಯೂ ಅಗತ್ಯ ಎಂದು ಬಳ್ಳಾರಿ ಲೋಕಾಯುಕ್ತ ಪಿಎಸ್‌ಐ ಮಹ್ಮದ್ ರಫಿ ತಿಳಿಸಿದರು.  

ತಹಸೀಲ್ದಾರ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಕಚೇರಿಗೆ ಬರುವವರನ್ನು ವಿನಾಕಾರಣ ಅಲೆಸದೆ, ಅವರಿಗೆ ಸೂಕ್ತ ಮಾಹಿತಿ ನೀಡಬೇಕು. ಸಕಾಲದಲ್ಲಿ ಭ್ರಷ್ಟರಹಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು. 

ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರು ಇರುವಂತೆ, ಅನಧಿಕೃತ ಮಣ್ಣು ಸಾಗಣೆ ವಿರುದ್ಧ ಭೂ ಮತ್ತು ಗಣಿ ವಿಜ್ಞಾನ ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಕುರಿತು, ಹೊಸಪೇಟೆಯಿಂದ ಕಂಪ್ಲಿಗೆ ಬರುವ ಸರ್ಕಾರಿ ಬಸ್ಸುಗಳು ಅನಧಿಕೃತವಾಗಿ ಕಡೇಬಾಗಿಲು ಮೂಲಕ ಸಂಚರಿಸುವ ಕುರಿತು, ಕುಂದುಕೊರತೆ ಸಭೆಗೆ ಸರ್ಕಾರಿ ಅಧಿಕಾರಿಗಳ ಗೈರು ಕುರಿತು ಗಂಭೀರ ಚರ್ಚೆಗಳಾಗಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಲ್ಲದೆ, ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.  

ಉಗ್ರಾಣ ನಿಗಮದಲ್ಲಿ ಸುಮಾರು ವರ್ಷದಿಂದ ಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿರುವ ನೌಕರರನ್ನು ಸಂಬಳ ಕೊಡಲಾರದೆ ಏಕಾಏಕಿ ಕೆಲಸದಿಂದ ತೆಗೆದಿದ್ದು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ, ಒತ್ತಾಯಿಸಿದರು ವಸತಿ ಪಟ್ಟಾ ನೀಡುವಂತೆ ಸೇರಿ ನಾಲ್ಕು ಅರ್ಜಿಗಳು ಸಾರ್ವಜನಿಕರಿಂದ ಸಂದಾಯವಾದವು.  

ಸಭೆಯಲ್ಲಿ ತಹಸೀಲ್ದಾರ್ ಶಿವರಾಜ, ಇಒ ಆರ್‌.ಕೆ.ಶ್ರೀಕುಮಾರ್, ಸಿಒ ಕೆ.ದುರುಗಣ್ಣ, ಅಧಿಕಾರಿಗಳಾದ ಶ್ರೀಧರ್, ಎಸ್‌.ಡಿ.ರಮೇಶ್, ಟಿ.ಎಂ.ಬಸವರಾಜ, ಬಿ.ಬಸವರಾಜ, ಎಂ.ಪಿ.ಮಹಾಂತೇಶ, ಬಿ.ವಿರುಪಾಕ್ಷಗೌಡ, ಲತೀಫಾಬೇಗಂ ಸೇರಿ ಇತರರಿದ್ದರು.