ರಾಮದುರ್ಗ 15: ವಿದ್ಯಾಥರ್ಿಗಳು ನಿರಂತರ ಅಧ್ಯಯನ ಮಾಡಿ ಉನ್ನತ ಸಾಧನೆ ಮಾಡಿ, ತಮ್ಮ ಸೇವಾ ಅವಧಿಯಲ್ಲಿ ಅಸಹಾಯಕರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳು ದೂರದೃಷ್ಠಿಯೊಂದಿಗೆ ವ್ಯಾಸಂಗ ಮಾಡಬೇಕೆಂದು ತಹಶೀಲ್ದಾರ ಆರ್.ವ್ಹಿ. ಕಟ್ಟಿ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿರ ವಸತಿ ಶಾಲೆಯಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಓದಿನಿಂದ ಅಪಾರ ಜ್ಞಾನ ಗಳಿಸಲು ಸಾಧ್ಯ. ಹಣಕ್ಕಿಂತ ಜ್ಞಾನಕ್ಕೆ ಅಪಾರ ಮನ್ನನೆ ಇದೆ. ಪ್ರತಿಭಾವಂತರಿಗೆ ಅವಕಾಶಗಳು ವಿಫುಲವಾಗಿದ್ದು, ವಿದ್ಯಾಥರ್ಿಗಳು ಉನ್ನತ ಗುರಿಯೊಂದಿಗೆ ಸೂಕ್ತ ರೂಪರೇಷೆಗಳೊಂದಿಗೆ ಮುಂದುವರಿದಲ್ಲಿ ಗೆಲವು ನಿಶ್ಚಿತವೆಂದರು.
ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಗ್ರಂಥಾಲಯಕ್ಕೆ ಸುಮಾರು 15,000 ರೂಗಳ ಪುಸ್ತಕಗಳನ್ನು ದೇಣಿಗೆ ನೀಡಿದ ತಹಶೀಲ್ದಾರ್ ಆರ್.ವ್ಹಿ. ಕಟ್ಟಿ ಅವರನ್ನು ಶಾಲೆಯ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಯ ಪರವಾಗಿ ಸತ್ಕರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಕೆ.ಎಸ್. ಕಕರ್ಿ ಮುಖ್ಯೋಪಾಧ್ಯಾಯ ಪೂಜಾರಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಇತರರಿದ್ದರು.