ಟಿಬಿ ಲಸಿಕೆ ಸಾರ್ವತ್ರಿಕವಾಗಲಿ: ಸಿದ್ದರಾಯ ಐರೋಡಿ

TB vaccine should be universal: Siddaraiah Irodi

ಇಂಡಿ 07: ಕ್ಷಯ ಮುಕ್ತ ವಾಗಲು ಟಿಬಿ ಲಸಿಕೆ ಸೀಮಿತ ಬೇಡ. ಪ್ರತಿ ಪ್ರಜೆಗೆ ಲಸಿಕೆ ಸಾರ್ವತ್ರಿಕವಾಗಲಿ. ಟಿಬಿ ರೋಗ ತಡೆಗಟ್ಟಲು ಮುಂಜಾಗತಾ ಕ್ರಮಕ್ಕಾಗಿ ಆರೋಗ್ಯ ಇಲಾಖೆಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ಸಿಗುವಲ್ಲಿ ಸರ್ಕಾರದ ಗಮನಕ್ಕೆ ತರಲು ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದು ನಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಯ ಐರೋಡಗಿ ಹೇಳಿದರು.  

ತಾಲೂಕಿನ ನಾದ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾದ ಬಿಕೆ ಗ್ರಾಮದಲ್ಲಿ ಟಿ ಬಿ ಕಾಯಿಲೆಯ ವಿರುದ್ಧ ಹೋರಾಟ ಮಾಡಲು ಬಿಸಿಜಿ ಅಡಲ್ಟ ಲಸಿಕೆ ನೀಡುತ್ತಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. 

ವೈ ಎಂ ಪೂಜಾರ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ಡಿ ಎಚ್ ಓ ,ಡಾ  ಸಂಪತ ಕುಮಾರ ಗುಣಾರಿ,ಡಿ ಟಿ ಓ ಡಾ. ಎಂ ಬಿ ಬಿರಾದಾರ, ಇಂಡಿ ತಾಲೂಕು ಆರೋಗ್ಯ ವೈದ್ಯಾದಿಕಾರಿ ಡಾ. ಕೆ ಕೆ ಜಾದವ  ಆದೇಶದಂತೆ ಡಾ. ಪ್ರಶಾಂತ  ದೂಮುಗೊಂಡ ವೈದ್ಯಾಧಿಕಾರಿಗಳು ಸಹಕಾರ ಈಗಾಗಲೇ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡಿದಂತೆ. ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ  ಕಾರ್ಯಕ್ರಮದ ಅಡಿ ದೇಶದಾದಂತ್ಯ. ಕ್ಷಯಮುಕ್ತ ಭಾರತಕ್ಕಾಗಿ ಬೇಗ ಕಾಯಿಲೆಗೆ ತುತ್ತಾಗುವ ಅರ್ಹ ಫಲಾನುಭವಿಗಳಿಗೆ  ಗಂಡಾಂತರ ಫಲಾನುಭವಿಗಳಿಗೆ ಬಿಸಿಜಿ ವಯಸ್ಕರ ಲಸಿಕೆ ಮಧುಮೇಹಿಗಳಿಗೆ, ಹಿರಿಯ ನಾಗರಿಕರಿಗೆ 60 ವರ್ಷ ಮೇಲ್ಪಟ್ಟ ವಯಸ್ಕರಿಗೆ, ಕಳೆದ ಐದು ವರ್ಷಗಳಿಂದ ಟಿಬಿ ಸೊಂಕಿತರು ಚಿಕಿತ್ಸೆ ಪಡೆದು ಗುಣಮುಖರಾದ ಕುಟುಂಬಸ್ಥರಿಗೆ ಹಾಗೂ ಅಪ್ಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ಮತ್ತು ಧೂಮಪಾನ ಮದ್ಯಪಾನ ವ್ಯಸನಕ್ಕೆ ದಾಸರಾದ ವ್ಯಕ್ತಿಗಳಿಗೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದಾಗ ಲಸಿಕೆ ಪಡೆದವರ ಮಾಹಿತಿಯನ್ನು ಸರ್ಕಾರಕ್ಕೆ ಅಂತರ್ಜಾಲದ ಮೂಲಕ  ವರದಿ ಸಲ್ಲಿಸುವುದು ಲಸಿಕೆ ಪಡೆದ ಫಲಾನುಭವಿಗಳಿಗೆ ಸಕಾಲಕ್ಕೆ  ಅನುಸರಣೆ ಭೇಟಿಗೆ ಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಬಂದಾಗ ಸಹಕರಿಸಲು ತಿಳಿಸುತ್ತಾ ಲಸಿಕೆ ಪಡೆಯಲು ಆಸಕ್ತರಿಗೆ ನಿಶ್ಚಯ ಸಂಪರ್ಕ  1800-11-6666 ಸಂಪರ್ಕಿಸಲು ಮನವಿ ಮಾಡಿದರು. 

 ಪ್ರಸ್ತುತ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಹೆಚ್ ಅತನೂರ, ಬಸವರಾಜ ಪಾಟೀಲ. ಎಸ್ ಎ ಶೇಕ, ಮಹಾಂತೇಶ, ಆಶಾ ಕಾರ್ಯಕರ್ತಿ ಜ್ಯೋತಿ, ಗೀತಾ, ಪಾರ್ವತಮ್ಮ, ಶಕುಂತಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.