ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು

ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು Suspicion of irregularities in the stalled Chennamma statue project: Kannada activists gear up for a

ಬೆಳಗಾವಿ : ಜಿಲ್ಲೆಯ ಸಂಕೇಶ್ಚರದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ಮಹಾಲಕ್ಷ್ಮೀ ದೇವಿಯ ಈ ಹಿಂದಿನ ಯಾತ್ರೆಯ ಲೆಕ್ಕ ಕೊಡಿ ಎಂಬ ವಿವಾದವು‌ ಮಾಸುವ ಮುನ್ನವೇ ಮತ್ತೆ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಪ್ರತಿಷ್ಠಾಪನೆ ಕಾಮಗಾರಿಯಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾಗಿದ್ದು, ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಆದರೆ ಈ ಕ್ರಮದ ವಿರುದ್ದ ಕನ್ನಡಪರ ಹೋರಾಟಗಾರರು ಸಿಡಿದೆದ್ದಿದ್ದು, ಕಾಮಗಾರಿಯ ಕ್ಲ್ಯಾಮ್ಯಾಕ್ಸ್ ಈಗ ಲೆಕ್ಕ ಕೊಡಿ ಎನ್ನುವ ಹಂತ ತಲುಪಿದೆ ಎಂದು ತಿಳಿದಿದೆ. 

     ಕಳೆದ ಕೆಲವು ತಿಂಗಳುಗಳ ಹಿಂದೆ ಪಟ್ಟಣದ ಮಹಾಲಕ್ಷ್ಮೀ ಜಾತ್ರೆಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಕೆಲವು ಮುಂಖಡರು ಹಿಂದಿನ ಜಾತ್ರೆಯ ಲೆಕ್ಕ ಕೊಡಿ ಎಂದು ಕೇಳಿದ್ದರು. ಅಲ್ಲದೆ ಮಹಾಲಕ್ಷ್ಮಿ ದೇವಿಯ ಬಂಡಾರ ಮುಟ್ಟಿಸಿ ಆಣೆ ಪ್ರಮಾಣದ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಆ ವಿವಾದ ಇನ್ನು ಮಾಸುವ ಮುನ್ನವೆ ಪಟ್ಟಣದಲ್ಲಿ ಕಳೆದ ಮೂರು ವರ್ಷಗಳಿಂದ ಚನ್ನಮ್ಮ ವೃತ್ತದಲ್ಲಿ ಒಂದು ಸಮಾಜದಿಂದ ನಡೆಯುತ್ತಿರುವ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿಗೆ ಸಮಾಜವು ಸುಮಾರು 22 ಲಕ್ಷ ರೂ. ಮೇಲ್ಪಟ್ಟು ದುಡ್ಡನ್ನು ನೀಡಿದ್ದರೂ ಕಾಮಗಾರಿ ಮಾತ್ರ ಇನ್ನು ವರೆಗೆ ಅರ್ಧಕ್ಕೆ ನಿಂತು ಹೋಗಿದೆ. ಅಲ್ಲದೆ ವೀರಶೈವ ಸಮಾಜದಿಂದ ಈ ಕಾಮಗಾರಿಗೆ 22 ಲಕ್ಷ ಮೇಲ್ಪಟ್ಟು ಹಣ ನೀಡಿದ್ದರು. ಕಾಮಗಾರಿಗೆ ಇನ್ನು ಹಣ ಬಂದಿಲ್ಲ ಎನ್ನುವ ಮಾತು ಕಾಮಗಾರಿ ಮುಂದಾಳತ್ವ ವಹಿಸಿರುವ ಮುಖಂಡರಿಂದ ವ್ಯಕ್ತವಾಗಿದೆ ಎನ್ನಲಾಗಿದೆ. 

   ಆದರೆ ವೀರಶೈವ ಸಮಾಜ ಚನ್ನಮ್ಮ ಕಾಮಗಾರಿಗೆ ನೀಡಿದ ಹಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವಾಸನೆ ಬರುತ್ತಿದೆ. ಈ ಅವ್ಯವಾರದ ವಿರುದ್ಧ ಲೆಕ್ಕ ಕೊಡಿ ಎಂದು ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡುವ ಎಚ್ಚರಿಕೆಯೊಂದಿಗೆ ಹೋರಾಟದ ರೂಪುರೇಷೆ ಗಳನ್ನು ತಯಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

   ಇವೆಲ್ಲದರ ನಡುವೆ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನಿಗೆ ಇನ್ನು ಹಣ ನೀಡಬೇಕಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಮಾಜ ನೀಡಿದ 22 ಲಕ್ಷ ಮೇಲ್ಪಟ್ಟ ದುಡ್ಡು ಎಲ್ಲಿ ಹೋಯಿತು ಎನ್ನುವ ಬಗ್ಗೆ ಲೆಕ್ಕ ಕೇಳಲು ಕನ್ನಡಪರ ಸಂಘಟನೆಗಳು ಸಜ್ಜಾಗಿವೆ ಎಂದು ಹೇಳಲಾಗಿದೆ. 

    ಇವೆಲ್ಲದರು ನಡುವೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯಾಗಿರುವ ಹಾಗೂ ಆಂಗ್ಲರ ಎದೆ ಸೀಳಿದ್ದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯನ್ನು ಕೇವಲ ಒಂದು ಸಮಾಜಕ್ಕೆ ಇಲ್ಲಿ ಸಿಯಮಿತ ಮಾಡುತ್ತಿರುವದು ಕನ್ನಡಪರ ಹೋರಾಟಗಾರ ಕೆಂಗಣ್ಣಿಗೆ ಗುರಿ ಮಾಡಿದೆ.

    ಇವೆಲ್ಲದರ ನಡುವೆ ಚನ್ನಮ್ಮಾಜಿಯ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾತಿಯು ಕಳೆದ ಮೂರು ವರ್ಷದಿಂದ ನಡೆಯುತಿದ್ದು, ಕಾಮಗಾರಿ ಇನ್ನು ಕೂಡಾ ಅಪೂರ್ಣವಾಗಿದೆ. ವೀರಶೈವ ಸಮಾಜದ ಒಂದು ಸಂಸ್ಥೆಯಿಂದ 22 ಲಕ್ಷ ಮೇಲ್ಪಟ್ಟು ದುಡ್ಡು ನೀಡಲಾಗಿದೆ ಎಂದು ಸಂಸ್ಥೆಯವರು ದಾಖಲೆ ಸಮೇತ ಹೇಳುತ್ತಿದ್ದರೆ, ಅತ್ತ ಕಾಮಗಾರಿ ಮುಂದಾಳತ್ವ ವಹಿಸಿರುವ ಮುಖಂಡರು ಮಾತ್ರ ಇನ್ನು ಹಣ ನೀಡಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದಿದೆ. ಆದರೆ ಸಂಸ್ಥೆ ನೀಡಿದ ದುಡ್ಡು ಹೋಯಿತು ಎಲ್ಲಿ ಎನ್ನು ಯಕ್ಷಪ್ರಶ್ನೆ ಪಟ್ಟಣದ ನಾಗರಿಕರಿಗೆ ಹಾಗೂ ಕನ್ನಡಪರ ಹೋರಾಟಗಾರರಲ್ಲಿ ಮನೆ ಮಾಡಿದೆ. ದುಡ್ಡು ಎಲ್ಲಿ ಎನ್ನುವ ಇವೆಲ್ಲ ಪ್ರಶ್ನೆಗಳಿಗೆ ಕಾಮಗಾರಿ ಮುಂದಾಳತ್ವ ವಹಿಸಿರುವ ಮುಖಂಡರು ಮಾತ್ರ ಸ್ಪಷ್ಟನೆ ನೀಡಬೇಕಾಗಿದೆ.