ಸೈನಿಕರಿಗೆ ಬಲ ತುಂಬಿಸಲು ವಿದ್ಯಾರ್ಥಿಗಳಿಂದ ದೇವರಿಗೆ ವಿಶೇಷ ಪೂಜೆ

Students offer special prayers to God to strengthen soldiers

ಮಾಂಜರಿ, 09 : ಭಾರತ ದೇಶದ ಹೆಮ್ಮೆಯ ಯೋಧರ ರಕ್ಷಣೆಗೆ ಉಗ್ರವಾರಿಗಳಿಗೆ ತಕ್ಕ ಪಾಠ ಕಲಿಸಿ ಅವರನ್ನು ಮಟ್ಟಕ್ಕೆ ಹಾಕಲು ನಡೆಸುತ್ತಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಲೆಂದು ಚಿಕ್ಕೋಡಿ ತಾಲೂಕಿನ ಐತಿಹಾಸಿಕವಾದ ಶ್ರೀ ಕ್ಷೇತ್ರ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀಶೈಲ್ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಪಾಠಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಪಾಠಶಾಲೆಯ ಮುಖ್ಯ ಗುರುಗಳಾದ ಶ್ರೀ ಶ್ರೀಶೈಲ್ ಶಾಸ್ತ್ರಿ ಮತ್ತು ಬಸವರಾಜ್ ಶಾಸ್ತ್ರಿ ಗುರೂಜಿ ಇವರ ನೇತೃತ್ವದಲ್ಲಿ  ಅರ್ಚಕ ಪೂಜಾರ ಬಂಧುಗಳು ಸಮಸ್ತ ದೇಶವಾಸಿಗಳ ಪರವಾಗಿ ವಿಶೇಷ ಪೂಜೆ ಹಾಗು ವಿಶೇಷ ಹೋಮ್ಸ ವಹನ ಲ್ಲಿಸಿದ್ದಾರೆ. 

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ನಾಡಿನಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು. ಭಾರತೀಯ ಸೈನಿಕರಿಗೆ ಶಕ್ತಿ ತುಂಬಲು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಡಿಯಲ್ಲಿ ದೇಶಕ್ಕಾಗಿ ಸೇವೆ ಮಾಡುತ್ತಿರುವ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನೀವ್ ಹೇಳಿ ಅಡ್ವಯ್ಯ ಅರಳಿಕಟ್ಟಿಮಠ ದೀಪಕ್ ಕಮತೆ ಮುತ್ತು ಮಠದ್ ನರಸಾಗೋಡಾ ಕಮತೆ ಮನೋಹರ್ ಪುಟಾಣಿ ಸಿದ್ದಯ್ಯ ಮಠಪತಿ ನವೀನ್ ಹಿರೇಮಠ ಶಿವಾನಂದ ಹಿರೇಮಠ ಹಾಗೂ ಶ್ರೀ ಸಿದ್ದ ಪಾಠಶಾಲೆಯ ಸುಮಾರು 200 ವಿದ್ಯಾರ್ಥಿಗಳು ಸಹಭಾಗಿಯಾಗಿದ್ದರು ದೇಶದ ಒಳತೆಗಾಗಿ ಹಾಗೂ ಸೈನಿಕರಿಗೆ ತುಂಬಿಸಲು ಸುಮಾರು 2 ಗಂಟೆಗಳ ಕಾಲ ವೀರಭದ್ರ ಮತ್ತು ಭದ್ರಕಾಳಿ ದೀವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು