ರೈಲು ಮಾರ್ಗ ವಿಸ್ತರಣೆಗೆ ಹೋರಾಟ ಅಗತ್ಯ: ಕೆ ಮಹೇಶ್ವರ ಸ್ವಾಮಿ

ಸಿರುಗುಪ್ಪ 16: ರೈಲ್ವೆ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ತುಂಬಾ ಹಿಂದುಳಿರುವುದು ದುರಂತದ ಸಂಗತಿ ಎಂದು ರಾಜ್ಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕೆ ಮಹೇಶ್ವರ ಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಕುರುಗೋಡು ಕಂಪ್ಲಿಯ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಠದಲ್ಲಿ ಹಮ್ಮಿಕೊಂಡಿದ್ದ ರೈಲು ಮಾರ್ಗ ವಿಸ್ತರಣೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಾ ಬಳ್ಳಾರಿ ರೈಲ್ವೆ ಮಾರ್ಗದಲ್ಲಿ ನಿತ್ಯ ನೂರು ರೈಲ್ವೆ ಗೂಡ್ಸ್ ವಾಹನಗಳು ಓಡಾಡುತ್ತಿದ್ದು ಪ್ರಯಾಣಿಕರ ರೈಲ್ವೆ ಗಳಿಗೆ ಅವಕಾಶ ಇಲ್ಲದಂತಾಗಿದೆ ರೈಲು ಮಾರ್ಗ ರಚನೆ ಅಷ್ಟು ಸುಲಭವಲ್ಲ ಸದ್ಯ ಗಂಗಾವತಿಯಿಂದ ದರೋಜಿ ಕಂಪ್ಲಿ ವರೆಗೆ ರೈಲು ಮಾರ್ಗ ರಚನೆಗೆ ಸರ್ವೆ ನಡೆದಿದೆ ಅದನ್ನು ಎಮ್ಮಿಗನೂರು ಓರ್ವಾಯಿ ಕ್ರಾಸ್ ಕಲ್ಲುಕಂಬ ಕುರುಗೋಡುವರೆಗೆ ವಿಸ್ತರಿಸಿದರೆ ಈ ಭಾಗದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಣೆಗೆ ಅನುಕೂಲವಾಗಿದೆ ಈ ನಿಟ್ಟಿನಲ್ಲಿ ಹೋರಾಟ ರೂಪಿಸಲು ಮುಂದು ವಾಗಿರುವುದು ಒಳ್ಳೆಯ ನಿರ್ಧಾರ ಎಂದರು.

ಡಾ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಭಾರತ ಸರ್ಕಾರದ ಸಚಿವರಾಗಿದ್ದಾಗ ಮಂಜೂರಾದ ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂಗೂರು ಮಾರ್ಗ ರಚನೆಗೆ ಈಗಾಗಲೇ ಬ್ರಾಡ್ ಗೇಜ್ ಸರ್ವೆ ನಡೆಯುತ್ತಿದೆ ಅದರಂತೆ ಗಂಗಾವತಿ ದರೋಜಿ ಕಂಪ್ಲಿ ಮಾರ್ಗ ಕೂಡ ಅನುಮೋದನೆಗೊಂಡಿದ್ದು ಅದರ ಸಂಪರ್ಕಕ್ಕೆ ಒಳಪಡಿಸುವಂತೆ ಒತ್ತಾಯ ಮಾಡುವುದು ಒಳ್ಳೆಯದು ಎಂದು ತಿಳಿಸಿದರು. ಶ್ರೀ ಮಠದ ವಾಮದೇವ ಶ್ರೀಗಳು ಮಾತನಾಡಿ ರೈಲು ಮಾರ್ಗ ವಿಸ್ತರಣೆಯಿಂದ ಈ ಭಾಗದಲ್ಲಿ ಕೃಷಿ ಆರೋಗ್ಯ ಶಿಕ್ಷಣ ಸೇರಿದಂತೆ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಹೆಚ್ ವೀರಾಪುರ ಜ್ಞಾನಜ್ಯೋತಿ ಜಡೆ ಶಿವಲಿಂಗ ಮಂದಿರದ ಜಡೆಶ ತಾತಾ ಕ್ರೀಯಾ  ಸಮಿತಿ ಸದಸ್ಯರಾದ ಕೋಳುರು ಚಂದ್ರಶೇಖರ್ ಬಂಡೇಗೌಡ, ಹೆಚ್ ಕೆ ಗೌರಿಶಂಕರ್ ಪಂಪನಗೌಡ, ಉಮಾಪತಿ ಗೌಡ, ಸಿರುಗುಪ್ಪದ ಅಬ್ದುಲ್ ನಬಿ ಎಮ್ಮಿಗನೂರು, ರೈಲ್ವೆ ಹೋರಾಟ ಸಮಿತಿ ಸದಸ್ಯರಾದ ಹೆಚ್ ಚಂದ್ರಶೇಖರ್, ವೈ ರಾಘವೇಂದ್ರ ರೆಡ್ಡಿ, ಎಸ್ ಶರಣ ಗೌಡ , ಹನುಮನ ಗೌಡ ಖಾಸಿಂ ಸಾಬ್ ಮೃತ್ಯುಂಜಯ ದುರ್ಗಾ ಪ್ರಸಾದ್ ಶಿವನಗೌಡ ರಾಮು ಲೋಕೇಶ್ ಇತರರು ಇದ್ದರು .