ವೈಯಕ್ತಿಕ ಲಾಭಕ್ಕಾಗಿ ಶಾಸಕರನ್ನು ನಿಂದಿಸುವುದನ್ನು ನಿಲ್ಲಿಸಿ: ಆರ್ ಲೋಕೇಶ್

ಹರಪನಹಳ್ಳಿ 06: ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಕೋರಶಟ್ಟಿ ಹುಚ್ಚಂಗೆಪ್ಪನವರೆ ಮೂರು ವರ್ಷ ಕಳೆದರೂ ಸಮಾಜದ ಸಭೆ ಕರೆದಿಲ್ಲ ಕಾಂಗ್ರೆಸ್ ಏಜೆಂಟರಂತೆ ವರ್ತಿಸಬೇಡಿ ಎಂದು ಬಿ ಜೆ ಪಿ ಮುಖಂಡ  ಆರ್ ಲೋಕೇಶ್ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನ ಸಭಾ ಕ್ಷೇತ್ರದ ಕೋಣನಕಟ್ಟೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ ಅಭಿವೃದ್ದಿ ಕಾರ್ಯದಲ್ಲಿ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿಯವರಿಗಿಂತ ಜಗಳೂರು ಶಾಸಕ ಎಸ್‌.ವಿ ರಾಮಚಂದ್ರ​‍್ಪ ಸಾವಿರಪಟ್ಟು ಮೇಲು, ಹಾಗೂ ವಾಲ್ಮೀಕಿ ಸಮಾಜದ ಬಗ್ಗೆ ಶಾಸಕ ಜಿ.ಕರುಣಾಕರ ರಡ್ಡಿಯವರಿಗೆ ಕಾಳಜಿ ಇಲ್ಲ ಅಂತ ವೇದಿಕೆಗಳಲ್ಲಿ ಮನಬಂದಂತೆ  ಮಾತನಾಡಬಾರದು ಅವರು ಸಮಾಜದ ಅಧ್ಯಕ್ಷರಾಗಿ ಮೂರು ವರ್ಷ ಕಳೆದರೂ ಕೂಡ ನಾಯಕ ಸಮಾಜದ ಸಭೆಗಳನ್ನು ಕರೆದಿಲ್ಲ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿವಿಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿಲ್ಲ ಏಕೆ ಸಮಾಜದ ಬಗ್ಗೆ ನಿಮಗೆ ಕಳಕಳಿ ಇಲ್ಲವೇ ಎಸ್ ಟಿ  ನಿಗಮದಿಂದ 5 ಲಕ್ಷ  ರೂಪಾಯಿಗಳ ಧನಸಹಾಯವನ್ನ ಪಡೆದುಕೊಂಡು ನಮ್ಮ ಪಕ್ಷದ  ಒಬ್ಬ ಶಾಸಕರನ್ನ ಹೋಗಳುವುದು ಇನ್ನೊಬ್ಬ ಶಾಸಕರನ್ನ ತೇಗಳುವುದು  ಸರಿಯೇ ಸಮಾಜದ ಅಧ್ಯಕ್ಷರಾಗಿ ಸಮಾಜಸೇವೆ ಮಾಡಬೇಕು ನೀವು ಸನ್ಮಾನ ಮಾಡಿಸಿಕೋಳ್ಳವ ಅಧ್ಯಕ್ಷರಾಗಿದ್ದಿರಿ ರಾಜಕಾರಣ ಮಾಡಬಾರದು. ರಾಜಕಾರಣ ಮಾಡುವುದಾದರೆ ನಿಮ್ಮೆಲ್ಲ ವ್ರತ್ತಿಗಳನ್ನ ತ್ಯಜಿಸಿ ರಾಜಕಾರಣಕ್ಕೆ ಬನ್ನಿ ನಾವು ಹೆದರಿಸಲು ಸಿದ್ಧರಿದ್ದೇವೆ  ಜಿ ಕರಣಕಾರರೆಡ್ಡಿ ಶಾಸಕರ ನಮ್ಮ ಸಮಾಜಕ್ಕೆ ರೈತರಿಗೆ 150 ಗಂಗಾಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ ಮತ್ತು ಯುವಕರಿಗೆ 25ವಾಹನಗಳನ್ನು ನೀಡಿದ್ದಾರೆ ಹಾಗೂ ಎಸ್‌ಟಿಪಿ ಮತ್ತು ಟಿ ಎಸ್‌ಪಿ ಯೋಜನೆಯಲ್ಲಿ ಸಿಸಿ ರಸ್ತೆಗಳು ನಿರ್ಮಾಣ ಮಾಡಿದ್ದರೆ  ಮತ್ತು 400 ಶಾಲೆ  ಕೊಠಡಿಗಳನ್ನ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು. ವಾಲ್ಮೀಕಿ ಸಮಾಜದ ತಾಲ್ಲೂಕು ಉಪಾಧ್ಯಕ್ಷರಾದ ದಾದಾಪುರ ಶಿವಾನಂದ ಮಾತನಾಡಿ  ವಾಲ್ಮೀಕಿ ಸಮಾಜದ ಅಧ್ಯಕ್ಷರಾದ  ಕೋರಿಶೆಟ್ಟಿ ಉಚ್ಚಂಗೆಪ್ಪರವರಿಗೆ ಶಾಸಕ ಜಿ.ಕರುಣಾಕರ ರೆಡ್ಡಿಯವರು ಮಾಡಿರುವ ಅಭಿವೃದ್ದಿ ಕಾರ್ಯಗಳು ಕಣ್ಣಿಗೆ ಕಾಣದೇ ಕೇವಲ ತಮ್ಮ ಸ್ವಾರ್ಥಕ್ಕೆ ಇನ್ನೊಬ್ಬ ಶಾಸಕರ ಬಗ್ಗೆ ಓಲೈಕೆ ಮಾಡಿ ವೇದಿಕೆಗಳಲ್ಲಿ ಮಾತನಾಡುವುದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.  

ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಮಾತನಾಡಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ ಅಧ್ಯಕ್ಷರಾಗಿ 3ವರ್ಷಗಳಾದರೂ ಒಂದು ಸಭೆ ನಡೆಸಿಲ್ಳ ಅವರಿಂದ ಇಲ್ಲಿಯವರೆಗೂ ಸಮಾಜದ ಅಭಿವೃದ್ದಿ ಯಾವ ಕಾರ್ಯಗಳನ್ನು ಮಾಡಿಲ್ಲ ಆದರೆ ರಾಜಕೀಯ ಹಿತಾಸಕ್ತಿ ತೋರಿಸುತ್ತಿದ್ದಾರೆ. 

ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ಮಾಳ್ಗಿ ತಿಮ್ಮೇಶ್ ಮಾತನಾಡಿ ಸಮಾಜದ ಅಧ್ಯಕ್ಷರಾಗಿ ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು ಹೋಗಬೇಕು, ಪಕ್ಷತೀತಾವಾಗಿ ಕಾರ್ಯನಿರ್ವಹಿಸಬೇಕು, ಸಮಾಜದ ಅಧ್ಯಕ್ಷರಾಗಿ ಯಾವ ರಾಜಕೀಯ ನಾಯಕರನ್ನು ಓಲೈಕೆ ಮಾಡಿ ಮಾತನಾಡಿ ಬೆಂಕಿಹಚ್ಚುವ ಕೆಲಸ ಮಾಡಬಾರದು, ಯಾವುದಾದರೂ ಪಕ್ಷದಿಂದ ರಾಜಕಾರಣಕ್ಕೆ ಬರುತ್ತಿರಾ? ಬರುವುದಾದರೆ ಬನ್ನಿ ಸಮಾಜವನ್ನು ಬಲಿಕೊಡಬೇಡಿ ಎಂದು ಹೇಳಿದರು. 

ಕೆಂಗಳ್ಳಿ ಪ್ರಕಾಶ್ ವಕೀಲರು ಮಾತನಾಡಿ  ಸಮಾಜದ ಅಧ್ಯಕ್ಷರಾಗಿ ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು  ಪಕ್ಷತೀತಾವಾಗಿ ಸಮಾಜವನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು ಎಂದರು ಈ ವೇಳೆ ಪ್ರಾಣೇಶ್ ಮಾತನಾಡಿದರು.  

ಸಂದರ್ಭದಲ್ಲಿ ಗುಂಡಿ ಮಂಜುನಾಥ್, ಮ್ಯಾಕಿ ದುರುಗಪ್ಪ, ಕೌಸರ ನಾಗರಾಜ್, ತೆಲಿಗಿ ಅಂಜಿನಪ್ಪ, ಕಣವಿಹಳ್ಳಿ ಪರುಸಪ್ಪ, ದ್ಯಾಮಜ್ಜಿ ಉಚ್ಚಂಗೆಪ್ಪ, ರಾಘವೇಂದ್ರ, ಕಣವಿಹಳ್ಳಿ ಮಾರುತಿ, ಪ್ರಕಾಶ್, ಹುಲಿಕಟ್ಟಿ ಲಕ್ಕಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.