ಶ್ರೀರಾಮ ಮಂದಿರ ಲೋಕಾರ್ಪಣೆ: ಶ್ರೀರಾಮ ಶೋಭಾಯಾತ್ರೆ

ಇಂಡಿ 20: ಶ್ರೀರಾಮ ಮಂದಿರ ಲೋಕಾರೆ​‍್ಣ ಹಾಗೂ ರಾಮಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಅದ್ದೂರಿ ಶ್ರೀರಾಮ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಹಿಂಪ ಭಜರಂಗದಳ ನಗರಘಟಕದ ಅಧ್ಯಕ್ಷ ನೇತಾಜಿ ಪವಾರ ತಿಳಿಸಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಂತೇಶ್ವರ ದೇವಸ್ಥಾನದಿಂದ ಶ್ರೀರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಪ್ರಾರಂಭಿಸಿ,  ಚೌಡೇಶ್ವರಿ ದೇವಸ್ಥಾನದ ಮಾರ್ಗವಾಗಿ ಅಗಸಿ ಹನುಮಾನ ದೇವಾಲಯದಿಂದ ಮಹಾವೀರ ವೃತ್ತ , ಅಂಬೇಡ್ಕರ್ ವೃತ್ತದ ಮುಖಾಂತರ ಹಾದು ಬಸವೇಶ್ವರ ವೃತ್ತದಲ್ಲಿ ಶೋಭಾಯಾತ್ರೆ ಸಂಫನ್ನಗೊಳ್ಳಲಿದೆ. 

ಇಂಡಿ ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶೋಭಾಯಾತ್ರೆ ಯಶಸ್ವಿಗೊಳಿಸಬೇಕು. ಗುರುಸಾರ್ವಭೌಮ ಭಜನಾ ಮಂಡಳಿಯವರಿಂದ ರಾಮ ಭಜನೆ ನಡೆಯಲಿದೆ. 

ಅಂದು ಸಂಜೆ ಶ್ರೀ ಶಾಂತೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತೀ ದೇವಸ್ಥಾನದಲ್ಲಿ ದೀಪೋತ್ಸವವಿರುತ್ತದೆ. ಅಂದು ಜಿಆರ್‌ಜಿ ಕಾಲೇಜಿನ ಆವರಣದಲ್ಲಿ ಆಕಾಶ ದೀಪೋತ್ಸವ (ಆಕಾಶ ಬುಟ್ಟಿ) ಹಾರಿಸಲಾಗುತ್ತದೆ. ಶೋಭಾಯಾತ್ರೆಯ ನಂತರ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಪವಾರ ತಿಳಿಸಿದರು. 

ಪ್ರಕಾಶ ಬಿರಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಶಾಂತು ಶಿರಕನಳ್ಳಿ, ಅಶೋಕ ಹದಗಲ್, ಮಂಜು ತೆನ್ನೆಳ್ಳಿ, ಶಿವಾನಂದ ಬೋಡಿ, ವಿಠ್ಠಲ ಹೊಸಮನಿ, ಅಪ್ಪು ಪವಾರ, ಭೀಮ ಪ್ರಚಂಡಿ, ರಾಚು ಬಡಿಗೇರ, ಮಲ್ಲಿಕಾರ್ಜುನ ಬಿರಾದಾರ ಮತ್ತಿತರರು ಇದ್ದರು.