ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ   Sri Raghavendra Swamy Aradhana Mahotsava

ಲೋಕದರ್ಶನ ವರದಿ 

ಬೆಳಗಾವಿ 04 : ವಡಗಾವಿಯ ವಝೆಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿ 355 ನೇ ಆರಾಧನಾ ಮಹೋತ್ಸವು ಜರುಗಿತು. ಅಷ್ಟೋತ್ತರ, ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದವಿತ್ತು. ಸಾಯಂಕಾಲ 6 ಗಂಟೆಗೆ ಗಾಯಕ ವಿನಾಯಕ ಮುತಾಲಿಕ ದೇಸಾಯಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಪುರಂದರದಾಸರು, ಕನಕದಾಸರು, ಜಗನಾಥದಾಸರು, ವಿಜಯವಿಠ್ಠಲ ದಾಸರ ರಚನೆಗಳನ್ನು ಹಾಡಿದರು. ತಬಲಾ ಸಂತೋಷ ಕುಲಕರ್ಣಿ, ಹಾರ್ಮೋನಿಯಂ ಶಶಿಕಾಂತ ಪಾವಸ್ಕರ್ ಸಾಥ ನೀಡಿದರು.