ವಿಜೃಂಭಣೆಯಿಂದ ಜರುಗಿದ ಶ್ರೀ ನಿಂಗಯ್ಯ ಮುತ್ಯಾನ ಜಾತ್ರಾ ಮಹೋತ್ಸವ
Sri Ningayya Mutya's Jatra Mahotsava Celebrated with Grandeur
ತಾಳಿಕೋಟಿ 01: ತಾಲೂಕಿನ ಸುಕ್ಷೇತ್ರ ಬಂಡೆಪ್ಪನಹಳ್ಳಿಯಲ್ಲಿ ಶ್ರೀ ನಿಂಗಯ್ಯ ಮುತ್ಯಾನ ಜಾತ್ರಾ ಮಹೋತ್ಸವವು ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಗುರುವಾರ ರಾತ್ರಿ 10 ಗಂಟೆಗೆ ಮುದನೂರು ಹಾಗೂ ಬಂಡೆಪ್ಪನಹಳ್ಳಿಯ ಶ್ರೀ ನಿಂಗಯ್ಯ ಮುತ್ಯಾನ ಜೋಡಿ ಪಲ್ಲಕ್ಕಿಗಳ ಗಂಗಾಸ್ಥಾನ ಮೆರವಣಿಗೆ ಭಕ್ತರ ಜಯಘೋಷದ ನಡುವೆ ನಡೆಯಿತು. ಬಳಿಕ ಶುಕ್ರವಾರ ಮಹಾಪ್ರಸಾದ ವಿತರಣೆ, ಜಾತ್ರಾ ಮಹೋತ್ಸವ ಹಾಗೂ ಸಾಂಪ್ರದಾಯಿಕ ಹಿರಗಲ್ಲ ಆಟ ಪ್ರಮುಖ ಆಕರ್ಷಣೆಯಾಗಿತ್ತು. ನೂರಾರು ಪಟ್ಟದ ಪೂಜಾರಿಗಳು ದೇವರ ಉಡುಗೆ ಧರಿಸಿ ಹಿರಗಲ್ಲ ಆಟದಲ್ಲಿ ಪಾಲ್ಗೊಂಡು ಭಕ್ತರ ಗಮನ ಸೆಳೆದರು.
ಜಾತ್ರೆಯ ನೇತೃತ್ವವನ್ನು ಶ್ರೀ ನಿಂಗಯ್ಯ ಮುತ್ಯಾನ ದೇವಸ್ಥಾನದ ಪೂಜ್ಯರಾದ ಶ್ರೀ ಸಣ್ಣಕ್ಕೆಪ್ಪ ಮುತ್ಯಾ ಹಾಗೂ ಶ್ರೀ ಮಾರಾಯ ನಿಂಗಣ್ಣ ಮುತ್ಯಾ ವಹಿಸಿದ್ದರು. ನಾವದಗಿಯ ಕರಿಸಿದ್ದಪ್ಪ ಮುತ್ಯಾ ಪೂಜಾರಿ, ಮುದನೂರಿನ ಜಗದೀಶ ಮುತ್ಯಾ ಪೂಜಾರಿ, ಹುಣಸಗಿಯ ನಿಂಗಣ್ಣ ಮುತ್ಯಾ ಪೂಜಾರಿ ಸೇರಿದಂತೆ ಅನೇಕ ಪಟ್ಟದ ಪೂಜಾರಿಗಳು ದೇವರ ಉಡುಗೆ ಧರಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.
ಪ್ರತಿವರ್ಷ ಆಷಾಢ ಮಾಸದ ಕಡ್ಲಿಗಾರ ಹುಣ್ಣಿಮೆ ಅಂಗವಾಗಿ ನಡೆಯುವ ಈ ಜಾತ್ರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪಟ್ಟದ ಪೂಜಾರಿಗಳು ಮಳೆ ಹಾಗೂ ಬೆಳೆಗಳ ಕುರಿತು ಭವಿಷ್ಯ ನುಡಿಗಳನ್ನು ಹೇಳಿ, ಈ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಉತ್ತಮವಾಗಿದ್ದು, ರೈತರಿಗೆ ಉತ್ತಮ ಮಳೆ ಮತ್ತು ಸಮೃದ್ಧ ಬೆಳೆ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 