ಖೇಡಗಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀಭೀರಲಿಂಗೇಶ್ವರ ಜಾತ್ರೆ
Sri Bheeralingeshwara fair held in Khedagi
ಇಂಡಿ 26: ತಾಲ್ಲೂಕಿನ ಭೀಮಾತೀರ ಸಂತ ಮಹಾತ್ಮರಿಗೆ ನೆಚ್ಚಿನ ತಾಣವಾಗಿದೆ, ಹಿಂತಾ ಮಹಿಮಾಂತ್ಮಕರ ಸಾಲಿನಲ್ಲಿ, ಸುಕ್ಷೇತ್ರ ಖೇಡಗಿ ಗ್ರಾಮದಲ್ಲಿ ಶ್ರೀಭೀರಲಿಂಗೇಶ್ವರರು ನೆಲೆನಿಂತು ಕಷ್ಠ ಎಂದು ಬಂದ ಭಕ್ತರಿಗೆ ಉದ್ಧರಿಸಿದ ಮಹಾತ್ಮರಾಗಿದ್ದಾರೆ.
ಇದು ಸುಮಾರು ಎರಡು ನೂರರಿಂದ ಮೂನ್ನುರು ವರ್ಷಗಳ ಹಳೆಯ ದೇವಾಲಯವಾಗಿದೆ. ಈ ಭಾಗದ ಭಕ್ತರು ಜಾತಿ ಮತ ಪಂಥಗಳನ್ನು ಲೇಕಿಸದೆ ಪ್ರತಿವರ್ಷ ಜಾತ್ರೆ ನಡೆಸುತ್ತಿದ್ದಾರೆ. ದಾಸೋಹ, ದೇವರ ಹೇಳಿಕೆಗಳು, ಡೂಳ್ಳಿನ ಹಾಡಿಕೆ ನಡೆಯುತ್ತಿದೆ. ನಾಗರಳ್ಳಿಯ ಲಕ್ಷ್ಮಿದೇವಿಯ ಪಲಕ್ಕಿ ಉಪಸ್ಥಿತಿಯಲ್ಲಿ ಭೀಮಾ ನದಿಯಲ್ಲಿ ಗಂಗಸೀತಾಳ ಮುಗಿಸಿ ನಂತರ ಈರಕಾರ ಕುಣಿತ ಮತ್ತು ದೇವರ ಹೇಳಿಕೆಗಳು ನಡೆಯುವ ಸಾಂಪ್ರಾದಾಯ.ಈ ಜಾತ್ರೆಗೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಭೇಟಿ ನೀಡಿ ದರ್ಶನ ಪಡೆದು ಆರ್ಶಿವಾದ ಪಡೆದರು.ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವ್ಹಿ.ಎಚ್.ಬಿದನೂರ, ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಅಣ್ಣಾರಾಯ ಕರನಾಯಕ, ಕಾಶಿನಾಥ್, ಮಡಗೋಂಡ, ಅಮೋಗಿ, ಸೀನೂರ, ದಯಾನಂದ ಬಿದನೂರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 