ಸಗಣಿ ಪಾಂಡವರಿಗೆ ವಿಶೇಷ ಪೂಜೆ

ತಾಂಬಾ: ದೀಪಾವಳಿ ಪಾಡ್ಯ ನಿಮಿತ್ಯ ಗ್ರಾಮೀಣ ಭಾಗದಲ್ಲಿ ಶ್ರದ್ದಾ ಭಕ್ತಿಯಿಂದ ಮಹಿಳೆಯರು ಸಗಣೀ ಪಾಂಡವರಿಗೆ ವಿಶೇಷ ಪೂಜೆ ನೇರೆವೆರಿಸಿದರು. 

ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ದೃಷ್ಠಿಯಿಂದ ಗ್ರಾಮೀಣ ಜನ ತಿಂಗಳ ಮೋದಲೆ ಸಕಲ ಸಿದ್ದತೆ ಮಾಡಿಕೋಂಡಿರುತ್ತಾರೆ ರವಿವಾರ ನೀರು ತುಂಬುವ ಹಬ್ಬದಿಂದ ಆರಂಬವಾಗುವ ಈ ಹಬ್ಬ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಸೋಮವಾರ ನರಕ ಚರ್ತುದಶಿ ಎಂದು ಪುರುಷರು ಅಂಭ್ಯನ ಸ್ತಾನ ಮಾಡಿ ಸಹೋದರಿಯರಿಂದ ಆರತಿ ಮಾಡಿಕೋಂಡು ಸಂಭ್ರಮಿಸಿದರು. ಮಂಗಳವಾರ ದೀಪಾವಳಿ ಅಮಾಸೆಯಂದು ಮನೆ ಅಂಗಡಿ ಮುಂಗಟ್ಟುಗಳಲ್ಲಿ ಸಕಲ ಬಾಗ್ಯಗಳನ್ನು ಕರುಣಿಸುವಂತೆ ಲಕ್ಷ್ಮೀ ಪೂಜೆ ಕೈಗೋಂಡು ರಾತ್ರಿ ಜಾಗರಣೆ, ಭಜನೆ, ಮನರಂಜನೆ, ಆಟಗಳನ್ನು ಆಡಿ ಸಂಭ್ರಮಿಸಿದರು.  

ಸಗಣಿ ಪಾಂಡವರಿಗೆ ಪೂಜೆ: ಯಂತ್ರಗಳಿಗು ದೈವಿಕ ಶಕ್ತಿಯಿರುತ್ತದೆ ಅವ್ವುಗಳನ್ನು ಸ್ವಚ್ಚಗೋಳಿಸಿ ಪೂಜೆ ಸಲ್ಲಿಸಿದರೆ ಸಮಸ್ಯೆಗಳು ಎದುರಾಗುವದಿಲ್ಲ ಎಂಬ ನಂಬಿಕೆ ಹಿನ್ನಲೆಯಲ್ಲಿ ಟ್ಯಾಕ್ಟರ್, ರಾಶಿ ಯಂತ್ರ ಬೈಕ್ ಕಾರು ಸೇರಿದಂತೆ ತಮ್ಮ ವಾಹನಗಳಿಗೆ ಹೂವಿನಿಂದ ಅಲಂಕಿರಿಸಿ ಪೂಜೆಸಲ್ಲಿಸುವದು ವಾಡಿಕೆ ಅದರಂತೆ ದೀಪಾವಳಿ ಅಮವಾಸೆ ನಂತರ ಬುಧವಾರ ಪಾಡ್ಯದಂದು ಬೆಳಿಗ್ಗೆ ಸಗಣಿಯಿಂದ ತಯಾರಿಸಿದ ಪಾಂಡವರ ಮೂರ್ತಿಗಳನ್ನು ಮಹಿಳೆಯರು ಭಕ್ತಿಯಿಂದ ಪೂಜಿಸಿ ಶ್ಯಾವಿಗೆ ಹಾಲು ಮೋಸರು ನೈವಿದ್ಯ ಸಲ್ಲಿಸಿದರು ಆ ಸಗಣಿ ಪಾಂಡವರಿಗೆ ಉತ್ರಾಣಿ ಕಡ್ಡಿ ಅವರಿ ಹೂವು ಚಂಡುಗಳಿಂದ ಅಲಂಕಾರ ಮಾಡಿ ಭಕ್ತಿಯಿಂದ ಪೂಜೆಸಲ್ಲಿಸುವದು ಒಂದು ವಿಷೇಶ ಸಂಪ್ರದಾಯವಾಗಿದೆ. 

ಗೋ ಸಂಖ್ಯೆತ: ಆಕಳು(ಗೋಮಾತೆ) ಸಗಣಿಯಿಂದ ನಂದಾ, ಭದ್ರಾ, ಸುಗುಣ, ಸಶೀಲಆ, ಸುರಭಿಯನ್ನುವ ಗೋವುಗಳು ಶಿವನಲ್ಲಿ ನಾವು ಭೂಲೋಕಕ್ಕೆ ಹೋಗಿಬರುತ್ತೆವೆ ನಮ್ಮನ್ನು ಕೂಡಾ ಪೂಜೆಗೋಳ್ಳುವಂತೆ ವರನೀಡಿ ಎಂದಾಗ ಶಿವನು ಭಲಿಪಾಡ್ಯದ ದಿನದಂದು ಆ ಐದು ಗೋವುಗಳ ಪೂಜೆ ಸಂಖ್ಯೆತವಾಗಿ ಈ ಮುರ್ತಿಗಳನ್ನು ತಯಾರಿಸುತ್ತಾರೆ, ಇವುಗಳಿಗೆ ವಿವಿದ ತರಹದ ಹೂಗಳಿಂದ ಅಲಂಕಾರ ಮಾಡಿ ಪೂಜಿಸುತ್ತಾರೆ ಇದನ್ನು ವಿಷ್ಣುನಂದ ರಾಕ್ಷಸನನ್ನು ಕೋಂದ ನೆನಪಿಗಾಗಿ ದೀಪಾವಳಿಯ ಪಾಡ್ಯದ ದಿವಸ ಪಾಂಡವರನ್ನು ಪ್ರತಿಷ್ಠಾಪಿಸುವದು ಹಿಂದಿನಿಂದ ನಡೆದುಕೋಂಡು ಬಂದ ಸಂಪ್ರದಾಯವಾಗಿದೆ ಗೋವುಗಳ ಜೋತೆಗೆ ಲಕ್ಷ್ಮೀ ವಾಸವಾಗಿರುತ್ತಾಳೆ ಎಂಬ ನಂಬಿಕೆ ಹಿನ್ನಲೆಯಲ್ಲಿ ರೈತರು ಧನದ ಕೋಟ್ಟಿಗೆಯಲ್ಲಿ ಲಕ್ಷ್ಮೀ ಗೂಡುಮಾಡಿರುತ್ತಾರೆ ಧನ ಕರುಗಳಿಗೆ ಯಾವುದೆ ಆಪತ್ತುಗಳು ಬಾರದಿರಲೆಂದು ದಿಪಾವಳಿಯಂದು ವಿಷೇಶ ಲಕ್ಷ್ಮೀ ಪೂಜೆ ಮಾಡಿ ನಂದಾದೀಪವನ್ನು ಬೆಳಗಿಸಿದರು. 

ಮನುಷ್ಯನಿಗೆ ಹತ್ತಿರವಾದ ಎಲ್ಲ ವಸ್ತುಗಳನ್ನು ಒಂದೋಂದು ಹಬ್ಬದಲ್ಲಿ ಪೂಜೆ ಮಾಡುತ್ತೆವೆ ಪಾಡ್ಯದಂದು ಸಗಣಿಯಿಂದ ಮಾಡಿದ ಪಾಂಡವ ಮೂರ್ತಿಗಳನ್ನು ಪೂಜಿಸಲಾಗುತ್ತದೆ ಸಗಣಿ ರೈತನಿಗೆ ಅನ್ನ ನೀಡುವ ಸಂಜೀವಿನಿಯಾಗಿದೆ ಎಂಬುವದಕ್ಕೆ ಪಾಂಡವರಪೂಜೆ ನೀದರ್ಶನವಾಗಿದೆ. 

ಭೀರ​ಪ್ಪ ವಗ್ಗಿ ರೈತ.