ಗಾಳೆಮ್ಮ ದೇವಿಯ ವಾರ್ಷಿಕೋತ್ಸವದ ನಿಮಿತ್ಯ ಮಳೆ ಬೆಳೆಗಾಗಿ ವಿಶೇಷ ಪೂಜೆ
Special puja for rain crops on the occasion of Galemma Devi's anniversary
ಲೋಕದರ್ಶನ ವರದಿ
ಕಂಪ್ಲಿ 09 : ಪಟ್ಟಣದ ಮುಸ್ಟೂರು ರಸ್ತೆ ಬದಿಯಲ್ಲಿ ಆರಾಧ್ಯ ದೇವತೆ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ವಾರ್ಷಿಕೋತ್ಸವ ನಿಮಿತ್ಯ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ರೈತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಮಂಗಳವಾರ ನೆರವೇರಿದವು.ಇಲ್ಲಿನ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ ದೇವಿಗೆ ಅಭಿಷೇಕ, ಅಲಂಕಾರ, ಪೂಜೆ ಮತ್ತು ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ಜರುಗಿದವು. ರೈತರು ಮತ್ತು ಸಾರ್ವಜನಿಕರು ಕಾಯಿ, ಕರ್ೂರ ಅರ್ಿಸಿ ದೇವಿಯ ದರ್ಶನದೊಂದಿಗೆ ಧನ್ಯತರಾದರು. ತದನಂತರ ಮಹಾದಾಸೋಹ ಜರುಗಿತು.ರೈತ ಮುಖಂಡ ಕೆ.ಅಕ್ಬರ್ ಮಾತನಾಡಿ, ಪ್ರತಿಯೊಬ್ಬ ರೈತರ ಆರಾಧ್ಯ ದೇವತೆ ಶ್ರೀ ಗಾಳೆಮ್ಮ ದೇವಿಯ ವಾರ್ಷಿಕೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವಾರ್ಷಿಕೋತ್ಸವದ ನಿಮಿತ್ಯ ವಿಶೇಷ ಪೂಜೆಗಳು ನೆರವೇರಿದವು. ದೇವಿಯು ಸದಾ ಕಾಲ ಸಕಾಲಕಕ್ಕೆ ಮಳೆ, ಬೆಳೆಯೊಂದಿಗೆ ಸಮೃದ್ಧ ಬೆಳೆ ನೀಡಬೇಕೆಂಬುದು ರೈತರ ಆಶಯವಾಗಿದೆ. ಇದರಿಂದ ಹಿನ್ನಲೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಾರ್ಷಿಕೋತ್ಸವದ ಜೊತೆಗೆ ಲೋಕಕಲ್ಯಾಣಕ್ಕಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದರು.ಈ ಸಂದರ್ಭದಲ್ಲಿ ರೈತರಾದ ಅಯೋಧ್ಯ ವಿರುಪಣ್ಣ, ಕೆ.ಮುಕ್ಕಣ್ಣ, ಕೆ.ಬುಡ್ಡಪ್ಪ, ಸಿದ್ದಿ ಅಂಜಿನಪ್ಪ, ವಡ್ರು ಗೋವಿಂದಪ್ಪ, ಆದೋನಿ ನಾಗರಾಜ, ಸಿ.ಡಿ.ತಿಮ್ಮಯ್ಯ, ಡಿ.ಆರ್.ಪಾಡುರಂಗ, ಸಿದ್ದಿ ಷಣ್ಮುಕ, ಶ್ರೀನಿವಾಸ, ಸಂಡೂರು ಮೂಕಪ್ಪ, ಸುಧಾ, ಮಾರುತಿ, ಪೂಜಾರಿ ದೇವಮ್ಮ, ದಾಸರ ಪದ್ಮಾವತಿ ಸೇರಿದಂತೆ ರೈತರಿದ್ದರು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 