ಪಿ. ರಾಜೀವ್ ಗೆಲುವಿಗಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ

ಪಿ. ರಾಜೀವ್ ಗೆಲುವಿಗಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ  Special prayers offered to Goddess Chamundeshwari for P. Rajeev's victory


ರಾಯಬಾಗ 23 : ಕುಡಚಿ ಮತಕ್ಷೇತ್ರದಿಂದ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಿ. ರಾಜೀವ್ ಅವರು ಶಾಸಕರಾಗಿ ಆಯ್ಕೆಯಾಗಲಿ ಎಂದು ಆಶಿಸಿ, ಕುಡಚಿ ಮತಕ್ಷೇತ್ರದ ಮೊರಬ ಗ್ರಾಮದ ಪಿ. ರಾಜೀವ್ ಅಭಿಮಾನಿ ಬಳಗದ ವತಿಯಿಂದ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಣಮಂತ ಅಸೋದೆ, ಶ್ರೀಶೈಲ್ ಅಸೋದೆ, ಲೋಕೇಶ ಅಸೋದೆ, ನಾಗು ಅಸೋದೆ, ಪ್ರತಾಪ ಕಾಂಬಳೆ, ವಿಕಾಸ ಅಸೋದೆ, ಗೀರೀಶ ಕಾಂಬಳೆ ಹಾಗೂ ರಂಜಿತ ದ್ಯಾಮನವರ ಉಪಸ್ಥಿತರಿದ್ದರು.