ಮನ್ನಾಪುರ್ ದಂಪತಿಗಳಿಗೆ ವಿಶೇಷ ಸನ್ಮಾನ
ಕೊಪ್ಪಳ 14 : ನಗರದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳದ ವತಿಯಿಂದ ಜರುಗಿದ ಅಕ್ಕಮಹಾದೇವಿ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಹಿರಿಯ ಸಾಹಿತಿ ಮಹೇಶ್ ಮನ್ನಾಪುರ ಹಾಗೂ ಅವರ ಪತ್ನಿ ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ ರವರಿಗೆ ವಿಶೇಷ ಸನ್ಮಾನ ಏರಿ್ಡಸಲಾಗಿತ್ತು, ಮಹೇಶ್ ಮನ್ನಾಪುರ್ರವರ ಸಾಹಿತ್ಯ ಕ್ಷೇತ್ರದ ಅಪಾರ ಸೇವೆಗಾಗಿ ಹಾಗೂ ಸಂಗೀತ ಕ್ಷೇತ್ರದ ಸಾಧನೆಗಾಗಿ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ್ ಅವರಿಗೆ ಈ ಶುಭ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು, ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮಂಗಳೂರಿನ ಕೃಷಿ ತಜ್ಞ ಕೃಷ್ಣಪ್ಪಗೌಡ ಪಡ್ಡ ಮೊಬೈಲ್ ನಮ್ಮ ಕುಡ್ಲ ತುಳು ಚಾನಲ್ ನ ವಾರ್ತಾವಾಚಕಿ ಡಾ, ಪ್ರಿಯಾ ಹರೀಶ್, ಕೊಪ್ಪಳದ ಸಾಹಿತಿ ಎಸ್‌ಎಂ ಕಂಬಾಳಿ ಮಠ ಸೇರಿದಂತೆ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಕೋಮಲಾ ಕುದುರೆಮೋತಿ ಮತ್ತು ಮಂಡಳಿಯ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು