ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ Special comprehensive revision of voter list: Public should cooperate: District Collector

ಲೋಕದರ್ಶನ ವರದಿ 

ಕಾರವಾರ 16:- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಜೂನ್ 20 ರಿಂದ ನಡೆಯಲಿದ್ದು, ಜೂ.30 ರಿಂದ ಜು.29 ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಪ್ರಿ ಫಿಲ್ಡ್‌ ಎನ್ಯೂಮರೇಷನ್ ಫಾರ್ಮ್‌ಗಳನ್ನು ನೀಡಲಿದ್ದು, ನಿಗಧಿತ ಅವಧಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲು ಸಾರ್ವಜನಿಕರು ಅಗತ್ಯ ಸಹಕಾರವನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು  ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  

ಮತಗಟ್ಟಿ ಅಧಿಕಾರಿಗಳು  ಪ್ರಿ ಫಿಲ್ಡ್‌ ಎನ್ಯೂಮರೇಷನ್ ಫಾರ್ಮ್‌ಗಳನ್ನು ನೀಡಲು ಒಂದು ಬಾರಿ ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲು ಮೂರು ಬಾರಿ ಮನೆಗೆ ಭೇಟಿ ನೀಡಲಿದ್ದು, ಬಿಎಲ್‌ಒಗಳು ತಮ್ಮ ಮನೆಗೆ ಬಂದಾಗ ಫಾರ್ಮ್‌ಗಳನ್ನು ಭರ್ತಿ ಮಾಡಿ ಅವರಿಗೆ ಮರಳಿ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಫಾರ್ಮ್‌ನ್ನು ಮರಳಿ ನೀಡದಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ​‍್ಡಯಾಗುವುದಿಲ್ಲ. ಎರಡು ಫಾರ್ಮ್‌ಗಳಲ್ಲಿ ಒಂದನ್ನು ಬಿಎಲ್‌ಒಗೆ ನೀಡಿ, ಮತ್ತೊಂದನ್ನು ಸಾರ್ವಜನಿಕರು ತಮ್ಮ ರೆಫರೆನ್ಸ್‌ಗಾಗಿ ಇಟ್ಟುಕೊಳ್ಳಬಹುದು.  

ಪ್ರಿ-ಫಿಲ್ಡ್‌ ಅರ್ಜಿಯಲ್ಲಿ  ಮತದಾರರ ಹೆಸರು, ಎಪಿಕ್ ಸಂಖ್ಯೆ, ವಿಳಾಸ, ಭಾಗದ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಫೋಟೋ ಮುದ್ರಿತವಾಗಿದ್ದು, ಈ ಎರಡು ಎನ್ಯುಮರೇಷನ್ ಪ್ರತಿಗಳಿಗೆ ಬಿ.ಎಲ್‌.ಓ ಮತ್ತು ಮತದಾರರು ಅಥವಾ ಅವರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ ಹಾಗೂ ತಮ್ಮ ಇತ್ತೀಚಿನ ಕಲರ್ ಭಾವಚಿತ್ರವನ್ನು ನೀಡಬೇಕು. ಎನ್ಯುಮರೇಷನ್ ಫಾರಂ ಜೊತೆಯಲ್ಲಿ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದರು.