ಸೋಯಾಬೀನ್ ಖರೀದಿ ಕೇಂದ್ರ ತೆರೆದಿದೆ ರೈತರು ಇದರ ಸದುಪಯೋಗಪಡೆದುಕೊಳ್ಳಿರಿ: ಅಮಿತ್ ಕಟಾರಿಯಾ
Soybean procurement center opened; farmers should make good use of it: Amit Kataria
ಶಿಗ್ಗಾವಿ 07: ಕೀರ್ತಿ ಗೋಲ್ಡ್ ಸಂಸ್ಥೆಯು ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನ ಸೋಯಾಬೀನ್ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೀರ್ತಿ ಗೋಲ್ಡ್ ಸಂಸ್ಥೆಯ ಉಪಾಧ್ಯಕ್ಷ ಅಮಿತ್ ಎಸ್ ಕಟಾರಿಯಾ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕೀರ್ತಿ ಗೋಲ್ಡ್ ಸಂಸ್ಥೆಯ ಸೋಯಾಬೀನ್ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರುಕಂಪನಿಯು ಮುಖ್ಯವಾಗಿ ಮಹಾರಾಷ್ಟ್ರದ ಲಾತೂರ್, ನಾಂದೇಡ್, ಸೊಲ್ಲಾಪುರ, ಹಿಂಗೋಲಿ ಹಾಗೂ ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿ ತನ್ನ ಬೃಹತ್ ಸಂಸ್ಕರಣಾ ಘಟಕಗಳು ಮತ್ತು ಖರೀದಿ ಕೇಂದ್ರಗಳನ್ನು ಹೊಂದಿದೆ. ಹಾವೇರಿ ಜಿಲ್ಲೆಯಲ್ಲಿ ರೈತರು ಅತ್ಯುತ್ತಮ ಗುಣಮಟ್ಟದ ಸೋಯಾಬಿನ್ ಬೆಳೆಯುವುದನ್ನು ಗಮನಿಸಿದ ಕಂಪನಿ ಮುಖ್ಯಸ್ಥರು ಶಿಗ್ಗಾಂವ ತಾಲೂಕನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು, ಪಟ್ಟಣದ ಎಪಿಎಂಸಿ ಆವರಣದಲ್ಲಿ ಹೊಸದಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಭಾಗದ ರೈತರು ಉತ್ತಮ ಬೆಲೆಯೊಂದಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಬಹುದು ಎಂದರು.
ಕರ್ನಾಟಕ ಕೀರ್ತಿ ಗೋಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಪರಮೇಶ್ವರ್ ಮಾತನಾಡಿ ರೈತರಿಗೆ ಯೋಗ್ಯ ಮತ್ತು ಉತ್ತಮ ಬೆಲೆ ಸಿಗುವಂತೆ ಮಾಡಲು ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸಲು ಕಂಪನಿಯು ನೇರವಾಗಿ ರೈತರಿಂದಲೇ ಸೋಯಾಬೀನ್ ಖರೀದಿಸುತ್ತದೆ. ರೈತರಿಂದ ಸೋಯಾಬೀನ್ ಖರೀದಿಸಿದ 24 ಘಂಟೆಗಳ ಒಳಗಾಗಿ ರೈತರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು. ರೈತರು ತಮ್ಮ ಬೆಳೆಯನ್ನು ನೇರವಾಗಿ ಕಂಪನಿಗೆ ಮಾರಾಟ ಮಾಡಿ, ಒಳ್ಳೆಯ ಲಾಭವನ್ನು ಪಡೆಯಬೇಕು ಎಂದು ಹೇಳಿದರು. ವೇ.ಮು. ಚಂದ್ರಯ್ಯ ಹಿರೇಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶೇಖಪ್ಪ ಗುಂಜಳ,ಶಶಿಧರ ಹೊನ್ನಣ್ಣವರ, ಶಂಕ್ರ್ಪ ಶೆಟ್ಟೆಪ್ಪನವರ, ಬಸಲಿಂಗಪ್ಪ ನರಗುಂದ, ಮಂಜುನಾಥ ಕಂಕನವಾಡ, ಶಂಕರಗೌಡ ಪಾಟೀಲ, ಕರಿಯಪ್ಪ ಆಡಿನ, ಕಲ್ಲಯ್ಯ ಗೊಟಗೊಡಿಮಠ, ಈಶ್ವರ್ಪ ಗುಂಜಳ, ಮಲ್ಲಪ್ಪಶೆಟ್ಟೆಪ್ಪನವರ, ಸಂತೋಷ ಕಲಕೇರಿ, ನಾಗಪ್ಪ ಮುತ್ತಿಕೊಪ್ಪ, ರವಿ ಪಾಟೀಲ, ಬಸವರಾಜ, ಭೀಮಾಶಂಕರ ಸೇರಿದಂತೆ ಇತರರಿದ್ದರು. ನಾಗನಗೌಡ ಪಾಟೀಲ ಹಾಗೂ ಪರಮೇಶ್ವರ ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 