ಸಹಕಾರಿಗಳ ನಿರಂತರ ಸಹಕಾರ, ಸಿಬ್ಬಂದಿಯ ಉತ್ತಮ ಸೇವೆಯಿಂದ ಸಂಘ ಪ್ರಗತಿಯತ್ತ: ರೂಪಾ ಶ್ರೀನಿವಾಸ್ ಕಾಕಿ

ಸಹಕಾರಿಗಳ ನಿರಂತರ ಸಹಕಾರ, ಸಿಬ್ಬಂದಿಯ ಉತ್ತಮ ಸೇವೆಯಿಂದ ಸಂಘ ಪ್ರಗತಿಯತ್ತ: ರೂಪಾ ಶ್ರೀನಿವಾಸ್ ಕಾಕಿ  Society progressing thanks to the constant cooperation of associates and the excellent service of th

ಸಹಕಾರಿಗಳ ನಿರಂತರ ಸಹಕಾರ, ಸಿಬ್ಬಂದಿಯ ಉತ್ತಮ ಸೇವೆಯಿಂದ ಸಂಘ ಪ್ರಗತಿಯತ್ತ: ರೂಪಾ ಶ್ರೀನಿವಾಸ್ ಕಾಕಿ  

ರಾಣೆಬೆನ್ನೂರ 11 : ತಮ್ಮ ಸಹಕಾರಿಗಳ ನಿರಂತರ ಸಹಕಾರ ಹಾಗೂ ಸಿಬ್ಬಂದಿಯ ಅತ್ಯುತ್ತಮ ಸೇವೆಯಿಂದಾಗಿ ವಾಣಿಜ್ಯ ನಗರದಲ್ಲಿನ ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಶ್ರೀ ಕಾಕಿ ಸೌಹಾರ್ದ ಸಹಕಾರಿ ಸಂಘವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಶ್ರೀಮತಿ ರೂಪಾ ಶ್ರೀನಿವಾಸ್ ಕಾಕಿ ಹೇಳಿದರು.  

ನಗರದ ಹೊರವಲಯದ ಹುಣಸಿಕಟ್ಟಿ ರಸ್ತೆಯಲ್ಲಿರುವ ಕಾಕಿ ಶ್ರೀನಿವಾಸ್ ಜೆಸಿ ವಾಣಿ ಅರಮನೆಯಲ್ಲಿ ನಡೆದ 2025ಹಿ26್ಫೂ ಸಾಲಿನ ಸೌಹಾರ್ದ ಸಹಕಾರಿ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸಂಘದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಸಂಪೂರ್ಣ ಗಣಕೀಕೃತ ಸೇವೆ, ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ, ವಿಳಂಬವಿಲ್ಲದೆ ತ್ವರಿತ ಸಾಲ ಸೌಲಭ್ಯ ಹಾಗೂ ಸೌಜನ್ಯಯುತ ಸೇವೆ ಒದಗಿಸಲಾಗುತ್ತಿದೆ. ಸದಸ್ಯರ ಠೇವಣಿಗಳಿಗೆ ಡಿಡಿಎಸ್ನಿಂದ ವಿನಾಯಿತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  

ಸಂಘದ ಆಡಳಿತ ಮಂಡಳಿಯಲ್ಲಿ 13 ಸದಸ್ಯರಿದ್ದು, ನಿಯಮಾವಳಿಯಂತೆ ಸಭೆಗಳನ್ನು ನಡೆಸುವ ಮೂಲಕ ಸಂಘದ ಪ್ರಗತಿ ಕುರಿತು ಚರ್ಚಿಸಿ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವ ಸಂಕಲ್ಪ ಹೊಂದಲಾಗಿದೆ ಎಂದರು.  

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹನುಮಂತ ಬಿ. ಕುಲಕರ್ಣಿ, ವ್ಯವಸ್ಥಾಪಕ ಪರಶುರಾಮ ಸಾಲಗಾರ, ನಿರ್ದೇಶಕರಾದ ಶ್ರೀಮತಿ ಸುನಿತಾ ಹ. ಕಾಕಿ, ಅಶ್ವಿತಾ ಶ್ರೀಕಾಂತ್ ಕಾಕಿ, ಭಾನುಪ್ರಿಯ ಪಿ. ಕಾಕಿ, ಪವಿತ್ರಾ ಮೋಹನ್ ಕಾಕಿ, ರಾಧಾ ಗ. ಕಾಕಿ, ವೆಂಕಟೇಶ್ ಕೆ. ಸಾಲಗೇರಿ, ಯಲ್ಲಪ್ಪ ಎಚ್‌. ಗಡ್ಡದ, ದುಗ್ಗಮ್ಮ ಟಿ. ಗಡ್ಡದ, ಕಲಾವತಿ ಪಿ. ಗಡ್ಡದ, ಶಾರದಾ ಎಸ್‌. ಧಾರವಾಡ, ವಿಜಯಲಕ್ಷ್ಮಿ ಎಲ್‌.ಜಿ., ನಾಗರಾಜ್ ಎಂ. ಗಡ್ಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಯುವ ಪ್ರತಿಭೆ ಕುಮಾರಿ ಅಂಕಿತಾ ರೂಪಾ ಶ್ರೀನಿವಾಸ್ ಕಾಕಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.  

ಶ್ರೀಮತಿ ಲಕ್ಷ್ಮೀ ಹುರುಕಡ್ಲಿ ಪ್ರಾರ್ಥಿಸಿದರು. ಕ್ಲರ್ಕ್‌ ವೀರೇಶ್ ಚನ್ನಳ್ಳಿ ಸ್ವಾಗತಿಸಿದರು. ಪ್ರೊ. ಶಿವಾನಂದ ಬಗಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅಶ್ವಿನಿ ಹುಬ್ಬಳ್ಳಿ ನಿರೂಪಿಸಿದರು. ನಾಗರಾಜ್ ಪುರದ ವಂದಿಸಿದರು.  

ನಂತರ ಕಲಾವಿದ ಪ್ರಕಾಶ್ ಗಚ್ಚಿನಮಠ ತಂಡದವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.