ತರಬೇತಿಯಿಂದ ಕೌಶಲ್ಯ ಕರಗತ: ಡಾ.ಟಿ.ಪಿ. ಗಿರಡ್ಡಿ

ಜಮಖಂಡಿ 25: ತರಬೇತಿ ಪಡೆದ ಕೈಗಳಿಗೆ ಸಲಕರಣೆ, ಸಾಮಗ್ರಿಗಳನ್ನು ಉಪಯೋಗಿಸುವ ಕೌಶಲ್ಯ ಕರಗತವಾಗುತ್ತದೆ. ಅದರಿಂದ ಅವಕಾಶಗಳು ತೆರೆದುಕೊಂಡು ಸ್ವಾಯತ್ತ ಜೀವನ ಸಾಗಿಸಲು ಸಹಾಯಕವಾಗುತ್ತದೆ ಎಂದು ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಹೇಳಿದರು. 

ದಾವಣಗೆರೆಯ ಸ್ಪೂರ್ತಿ ನಗರ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಐರಣಿ ಮಹಾಸಂಸ್ಥಾನ ಹೊಳೆಮಠದ ಆಶ್ರಯದಲ್ಲಿ ಹುನ್ನೂರ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಹಾಗೂ ಫೋರ್ ಹ್ಯಾಂಡ್ ಚಿಟ್ ಫಂಡ್ಸ್‌ ಪ್ರೈ.ಲಿ., ಹುನ್ನೂರ ಇವುಗಳ ಸಹಯೋಗದಲ್ಲಿ ಮಹಿಳೆಯರಿಗಾಗಿ ಹುನ್ನೂರಿನಲ್ಲಿ ಆಯೋಜಿಸಿದ್ದ 110 ದಿನಗಳ ಸ್ವಯಂ ಉದ್ಯೋಗ ತರಬೇತಿ ಶಿಬಿರದ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದ ಅವರು, ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಳಸಿಕೊಂಡು ಉದ್ಯೋಗಕ್ಕೆ ಬೇಕಾಗುವ ಸಲಕರಣೆ ಮತ್ತು ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಉದ್ಯೋಗ ಮಾಡಬೇಕು. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಕೌಶಲಯುಕ್ತ ಉದ್ಯೋಗ ಅಗತ್ಯ ಎಂದರು. 

ಹನಗಂಡಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಶಾರದಾ ಮುಳ್ಳೂರ, ಚನ್ನಪ್ಪ ಬಿರಾದಾರ ಮಾತನಾಡಿದರು.  

ಶಂಕರ ಜಾಲಿಗಿಡದ, ಸದಾಶಿವ ಸೊನ್ನದ, ಶ್ರೀಶೈಲ ತೇಲಿ, ಚನ್ನಪ್ಪ ಬಿರಾದಾರ, ಶಿವಾನಂದ ಕೊಣ್ಣೂರ, ಬಸವರಾಜ ಬಳಿಗಾರ ಹಾಗೂ ಶಿಬಿರ ಆಯೋಜಿಸಿದ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಗೂಳಪ್ಪ ಗೊಳಸಂಗಿ, ಕಾರ್ಯದರ್ಶಿ ಎಂ. ಗುಡ್ಡಪ್ಪ ಅವರುಗಳಿಗೆ ಸಮಾಜಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಶಿಬಿರಾರ್ಥಿಗಳಾದ ಸಾವಿತ್ರಿ ಹೊಸಮನಿ, ತಂಗೆಮ್ಮ ಸಾವಳಗಿ, ದಾಕ್ಷಾಯಿಣಿ ಕಡಪಟ್ಟಿ, ಶಿವಲೀಲಾ ನಾವಿ ಶಿಬಿರ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಶ್ರೀಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಡಪ್ಪ ಮರೇಗುದ್ದಿ ಇದ್ದರು. 

ಪರಮೇಶ್ವರ ತೇಲಿ, ಪುಟ್ಟ ಬಾಲಕಿಯರಾದ ತ್ರಿಶಾ, ವಸುಂಧರಾ ಪ್ರಾರ್ಥನೆ ಗೀತೆ ಹಾಡಿದರು. ಶಿಬಿರಾರ್ಥಿಗಳು ಸಾಮೂಹಿಕ ಗೀತೆ ಹಾಡಿದರು. ಶಿಕ್ಷಕಿ ಜರೀನಾ ಗಡೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಂ. ಗುಡ್ಡಪ್ಪ ಸ್ವಾಗತಿಸಿ, ನಿರೂಪಿಸಿದರು.