ಕುಂದರಗಿಯಲ್ಲಿ ಬಲಮುರಿ ಗಣಪತಿಗೆ ಬೆಳ್ಳಿ ಕವಚ ಸಮರೆ್ಣ
Silver armour offered to Balamuri Ganapathi in Kundaragi
ಕುಂದರಗಿ 03 : (ಕುಂದರಗಿ ಇಂಚಿಗೇರಿ ಮಠದ ಓಣಿಯಲ್ಲಿ ಶುಕ್ರವಾರ ದಿವಸ ಬಲಮುರಿ ಗಣಪತಿಗೆ ಬೆಳ್ಳಿ ಕವಚ ಅರ್ಿಸಲಾಯಿತು.) ಬೀಳಗಿ ಕುಂದರಗಿ : ಗ್ರಾಮದ ಇಂಚಿಗೇರಿ ಮಠದ ಓಣಿಯಲ್ಲಿರುವ ಭರಮದೇವರ ದೇವಸ್ಥಾನದ ಸಮೀಪದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಭಕ್ತಿಭಾವದಿಂದ ಬೆಳ್ಳಿ ಕವಚ ಸಮರೆ್ಣ ಕಾರ್ಯಕ್ರಮ ನಡೆಯಿತು. ಹಾಲುಮತ ಗಜಾನನ ಜೀರ್ಣೋದ್ಧಾರ ಸಮಿತಿಯ ಆಶ್ರಯದಲ್ಲಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಬಲಮುರಿ ಗಣಪತಿ ಮೂರ್ತಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ದೇವಸ್ಥಾನದ ಆಚಾರ್ಯ ಶ್ರವಣ್ ಜೋಶಿ ಅವರು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.
ಇದೇ ವೇಳೆ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಾಲಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಭೀಮಪ್ಪ ಹಳ್ಳಿ, ಗ್ರಾಮಸ್ಥರ ಸಹಕಾರ ಮತ್ತು ಭಕ್ತರ ದೇಣಿಗೆಯಿಂದ ದೇವಸ್ಥಾನ ನಿರ್ಮಾಣಗೊಂಡಿದ್ದು, ನಂತರ ಬಲಮುರಿ ಗಣಪತಿ ಮೂರ್ತಿಗೆ ಭಕ್ತರ ನೆರವಿನಿಂದ ಬೆಳ್ಳಿ ಕವಚವನ್ನು ಸಮರ್ಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದುಂಡಪ್ಪ ಹಳ್ಳಿ, ರಾಚಯ್ಯ ಬಾರಾಗಣಿ, ದುಸಪ್ಪ ಲಕ್ಷಾಪತಿ, ಲಕ್ಕಪ್ಪ ಸಂತನಪ್ಪನವರ, ಮಲ್ಲಪ್ಪ ಜಡಿಯಮ್ಮನವರ. ಗಿರಿಮಲ್ಲಪ್ಪ ಕಿಡಿಯಪ್ಪನವರ, ಭೀಮಪ್ಪ ಜಡಿಯಮ್ಮನವರ, ವಿಠ್ಠಲ ಗಾಜಪ್ಪನವರ, ಶಿವಪ್ಪ ಮೇಟಿ, ಹನಮಂತ ಹಾದಿಮನಿ, ಯಲ್ಲಪ್ಪ ಡೊಳ್ಳಿನ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 