ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವಕ್ಕೆ ಚಾಲನೆ
Silver Jubilee Celebration of Sri Kalidasa Education Committee inaugurated
ಲೋಕದರ್ಶನ ವರದಿ
ಗದಗ 08: ಒಂದು ಸಂಸ್ಥೆ ಕಟ್ಟಬೇಕಾದರೆ ಬಹಳ ಶ್ರಮ ಬೇಕಾಗುತ್ತದೆ. ಅದು ನೋಡವವರಿಗೆ ಒಂದು ತರ ಕಂಡರೆ ಕನಸು ಕಟ್ಟುವ ಮನಸ್ಸಿನವರಿಗೆ ಬಹಳ ಕಷ್ಟ ಇರುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು. ನಗರದ ಕಳಸಾಪೂರ ರಸ್ತೆಯಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಆವರಣದಲ್ಲಿ ರವಿವಾರ ಜರುಗಿದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ವರ್ಷವಿಡಿ ಕಾರ್ಯಕ್ರಮಗಳಿಗೆ ಲ್ಯಾಪಟ್ಯಾಪ್‌ನಲ್ಲಿ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾಳಿದಾಸ ಶಿಕ್ಷಣ ಸಂಸ್ಥೆ ತನ್ನ 25 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವದಕ್ಕೂ ನಾವುಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಾವುಗಳು ಕೇಕ್‌ನಲ್ಲಿರುವ ದೀಪವನ್ನು ಆರಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೆವೆ. ಆದರೆ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರದ ದೀಪವನ್ನು ಹಚ್ಚಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ ಇಂತಹ ರಜತ ಮಹೋತ್ಸವ ಸಮಾರಂಭದ ಆರಂಭವು ಅದ್ದೂರಿಯಾಗಿ ಜರುಗಿದೆ ಎಂದು ಕೊಪ್ಪಳದ ಶ್ರೀಗಳು ಹೇಳಿದರು.
ಶಿಕ್ಷಣ ಎಂದರೆ ಶಾಲೆಯಲ್ಲಿ ಕಲಿಯುವದಲ್ಲ, ಈ ಜಗತ್ತು ನಮಗೆ ಕಲಿಸುತ್ತದೆ. ಡೋನೇಷನ್ ಇಲ್ಲದೆ ಕಲಿಸುವ ಪಾಠಶಾಲೆ ಈ ಜಗತ್ತು. ಅಮ್ಮನ ಜೋಗುಳ, ಅಪ್ಪನ ಬೈಗುಳ ಇದ್ದರೆ ನಮ್ಮ ಜೀವನ ಪರಿಪೂರ್ಣ ನಮ್ಮ ಜೀವನವೂ ಅರ್ಥಮಾಡಿಕೊಂಡರೆ ಸಾರ್ಥಕವಾದಂತೆ ಎಂದು ಕೊಪ್ಪಳ ಗವಿಶಿದ್ದೇಶ್ವರ ಶ್ರೀಗಳು ಹೇಳಿದರು.
ಕಾಲ ಕೆಟ್ಟಿದೆ ಎನ್ನುವ ಜನರಿಗೆ ಒಂದು ಮಾತು ಈ ಕಾಲದಲ್ಲಿ ಪ್ರತಿದಿನ ಉದಯಿಸುವ ಸೂರ್ಯ, ತಿರುಗುವ ಭೂಮಿ, ಬೀಸುವ ಗಾಳಿ, ಹರಿಯುವ ನೀರು ಇವುಗಳಲ್ಲಿ ಯಾವುಗಳು ಕೆಟ್ಟಿಲ್ಲ ಅದು ಏನಾದರೂ ಕೆಟ್ಟಿದ್ದರೆ ಮನುಷ್ಯನ ಮನಸ್ಸು ಮಾತ್ರ, ಮನುಷ್ಯನ ಜೀವನದಲ್ಲಿ ಎರಡೆ ದಿನಗಳು ಮುಖ್ಯವಾಗಿವೆ. ಒಂದು ತಾಯಿ ಗರ್ಭದಿಂದ ಭೂಮಿಗೆ ಬಂದ ದಿನ ಒಂದು ಆದರೆ, ದೇವರು ಪಶು, ಪಕ್ಷಿ, ಪ್ರಾಣಿಗಳಿಂತ ನನ್ನನ್ನು ಏಕೆ ಈ ಭೂಮಿಗೆ ಕಳುಹಿಸಿದ್ದಾನೆ ಎಂದು ಚಿಂತನೆ ಬಂದಾಗ ನಮಗೆ ಅದು ಎರಡನೆಯ ಮರುಜನ್ಮ, ದೇವರು ನಮಗೆ ನೂರು ವರ್ಷ ಆಯುಷ್ಯ ಏಕೆ ನೀಡಿದ್ದಾನೆ ಎಂಬ ಚಿಂತನೆ ಅಗತ್ಯವಾಗಿದೆ. ಹಿತ್ತಲಿನಲ್ಲಿರುವ ಬಳ್ಳಿಯ ಹೂವ ಬೆಳಿಗ್ಗೆ ಅರಳಿ ಸಂಜೆ ಬಾಡುತ್ತದೆ. ಆ ಒಂದು ದಿನ ಬದುಕುವ ಆ ಹೂವು ದೇವರ ತಲೆ ಮೇಲೆ ಕುಳಿತು ತನ್ನ ಜೀವನವನ್ನು ಸಾರ್ಥಕ ಪಡೆಸಿಕೊಳ್ಳುತ್ತದೆ ಎಂದು ಕೊಪ್ಪಳದ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಅವರು ಮಾತನಾಡಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ತನ್ನ ರಜತ ಮಹೋತ್ಸವದ ಸಂಭ್ರಮಾಚರಣೆಯನ್ನು ಅತ್ಯಂತ ವಿಬಿನ್ನ ರೀತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಸಂದೇಶ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಜಿ.ಬಿ.ಪಾಟೀಲ ಅವರು ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ.ಪಲ್ಲೇದ, ಬಿ.ಬಿ.ಬಾವಿಕಟ್ಟಿ, ಫಕೀರ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್.ಡಿ.ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ.ಬಾನಾಪೂರ, ಆರ್.ಎಂ. ನಿಂಬನಾಯ್ಕರ, ಎಸ್. ಡಿ.ಸಿಂಗಟಾಲಕೇರಿ, ಎಸ್.ಎಸ್.ಕರಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ದೇವರಾಜ ಅರಸು ಹಾಸ್ಟೇಲ್ ಆವರಣದಲ್ಲಿ ಶಶಿಧರ ರೊಳ್ಳಿ ಕುಟುಂಬದವರಿಂದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಪಾದಪೂಜೆ ಕಾರ್ಯಕ್ರಮ ಜರುಗಿತು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 