ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ವಿಕಲಚೇತನರಿಗೆ ಉಚಿತ, ತಂದೆ ಇಲ್ಲದ ಮಕ್ಕಳಿಗೆ ಅರ್ಧ ಫೀ
Shrestha International School: Free for the disabled, half fee for fatherless children
ಬಳ್ಳಾರಿ 12 : ಸಿರಿವಾರ ಕ್ರಾಸ್ ಬಳಿ ಮಾತೃಭೂಮಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ ವತಿಯಿಂದ ಶ್ರೇಷ್ಠ ಇಂಟರ್ ನ್ಯಾಷನಲ್ ಶಾಲೆ, ವಿಕಲಚೇತನ ಮಕ್ಕಳಿಗೆ ಉಚಿತ,ವಿದ್ಯಾಭಾಸ ಹಾಗೂ ತಂದೆ ಇಲ್ಲದ ಮಕ್ಕಳಿಗೆ ಶೇ 50 ರಷ್ಟು, ರೈತರ ಮಕ್ಕಳಿಗೆ ಶೇ 10 ರಷ್ಟು ಫೀಜ್ ರಿಯಾಯತಿಯಲ್ಲಿ ಮೌಲ್ಯವರ್ಧಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣ ನೀಡಲಿದೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಹ್ಮಯ್ಯ ನಾಯ್ಡು ತಿಳಿಸಿದ್ದಾರೆ.
ಅವರು ಇಂದು ನಗರದ ಪೋಲೋ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಇಂಟಿಗ್ರೇಟೆಡ್ ಸ್ಪೋರ್ಟ್ಸ ಅಕಾಡೆಮಿ ಟೆನ್ ವಿಕ್ ಸಂಸ್ಥೆ ಮತ್ತು ಶಿಕ್ಷಣ ತಜ್ಞ ಗುರುರಾಜ ಕರ್ಜಿಗಿ ಅವರ ಅಕಾಡೆಮಿ ಫರ್ ಕ್ರಿಯೇಟಿವ್ ಟೀಚಿಂಗ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿ ಬಿ ಎಸ್ ಇ ಪಠ್ಯದೊಂದಿಗೆ ಶಾಲೆ ಆರಂಭಿಸಿದೆ.ಶಾಲೆಯು 8 ಎಕರೆ ಆವರಣದಲ್ಲಿ ಆರಂಭಗೊಂಡಿದ್ದು ಪಕ್ಕದ 12 ಎಕರೆಯನ್ನು ಸಹ ಭೋಗಕ್ಕೆ ಪಡೆದಿದೆ.
ಇಲ್ಲಿ ಶಿಕ್ಷಣದ ಜೊತೆಗೆ ವಿಶೇಷವಾಗಿ ಕ್ರೀಡೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ. ಅನಿಲ್ ಕುಂಬ್ಳೆ ಅವರ ಸಂಸ್ಥೆಯಿಂದ ಕ್ರಿಕೆಟ್, ಈಜು, ಫುಟ್ ಬಾಲ್, ಬ್ಯಾಡ್ ಮಿಂಟನ್, ಕುದರೆ ಸವಾರಿ ಮೊದಲಾದ ಕ್ರೀಡೆಗಳನ್ನು ತರಬೇತಿ ನೀಡಲಿದ್ದಾರೆ. ತಮಿಳುನಾಡಿನ ತಂಜಾವೂರಿನ ಸಂಸ್ಥೆಯಿಂದ ಪಾರಂಪರಿಕ ಅತ್ಮ ರಕ್ಷಣೆಯ ಕಲೆಗಳನ್ನು ಕಲಿಸಲಿದೆ. ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣ ನೀಡುವುದಾಗಿದೆ.
ಶಾಲೆಯಲ್ಲಿನ ಮಕ್ಕಳಿಗೆ ನಮ್ಮ ಸಂಸ್ಥೆಯ 35 ಎಕರೆ ಪ್ರದೇಶದಲ್ಲಿ ಬೆಳೆಯುವ ಸಾವಯವ ತರಕಾರಿ, ಹಣ್ಣು, ಧಾನ್ಯಗಳಿಂದಲೇ ಊಟದ ವ್ಯವಸ್ಥೆ ಮಾಡಲಿದೆಂದು ತಿಳಿಸಿದರು. ಶಾಲೆಯ ಪ್ರವೇಶಕ್ಕೆ ಪೋಷಕರು ಶಿಕ್ಷಣ ಪಡೆದಿರಬೇಕು ಎಂಬ ಯಾವುದೇ ನಿಯಮ ಇಲ್ಲ ಎಂದರು.ಈ ತಿಂಗಳ 14ರಂದು ಶಾಲೆಯ ಮೊದಲನೇ ವಾರ್ಷಿಕೋತ್ಸವ ಸಂಜೆ 5 ಕ್ಕೆ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು. ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಿಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಬ್ರಹ್ಮಯ್ಯ ನಾಯ್ಡು ತಿಳಿಸಿದರು. ಈ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸುನೀಲ್ ಕುಮಾರ್ ಮತ್ತು ವಿವೇಕ್ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 