ಸ್ವಚ್ಛತಾ ಜಾಗೃತಿಗಾಗಿ ಶ್ರಮದಾನ ಕಾರ್ಯ: ತಾಪಂ ನರಸಪ್ಪ

ಕಾರಟಗಿ 29: ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಚಿಲುಮೆ 2ಅಭಿಯಾನದಡಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್‌. ನರಸಪ್ಪ ಅವರು ಹೇಳಿದರು.  


ತಾಲೂಕಿನ ನಂದಿಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಚಿಲುಮೆ 2 ಅಭಿಯಾನದಡಿ ಶನಿವಾರ ಆಯೋಜಿಸಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ವಾರವೂ ಒಂದೊಂದು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ತಾಲೂಕಿನ ಶಾಲೆ, ವಸತಿ ನಿಲಯ, ಆಸ್ಪತ್ರೆ, ಜಲಮೂಲಗಳಲ್ಲಿ ಶ್ರಮಧಾನ ಮಾಡಲಾಗುತ್ತಿದೆ ಎಂದರು. ಸುತ್ತಲಿನ ವಾತಾವರಣ ಸ್ವಚ್ಚತೆಯಿಂದ ಕಾಪಾಡಿಕೊಂಡರೆ ಯಾವುದೇ ರೋಗಗಳು ಬರುವುದಿಲ್ಲ. ಪ್ರತಿಯೊಬ್ಬರೂ ಮನೆ ಸುತ್ತಲೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದರು. ಗ್ರಾಮೀಣ ಭಾಗದ ಬಡವರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ ದುಬಾರಿಯಾಗಿದೆ.  ಹೀಗಾಗಿ ಇಂತಹ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 


ತಾಪಂ ಸಹಾಯಕ ನಿರ್ದೇಶಕರಾದ (ಪ.ರಾ.) ವನಜಾ ಡಿ., ವಿವಿಧ ಗ್ರಾ.ಪಂ.ಗಳ ಪಿಡಿಓಗಳಾದ ಭಾಗ್ಯೇಶ್ವರಿ, ಸಲ್ಮಾ ಬೇಗಂ, ಕನಕಪ್ಪ, ಡಾ. ವೆಂಕಟೇಶ, ಗುರುದೇವಮ್ಮ ಜಿಲಾನಿ ಪಾಷಾ, ಸಾಯಿನಾಥ, ನಾಗರಾಜ, ಹನುಮಂತಪ್ಪ, ಮಹೆಬೂಬ್, ಗ್ರಾಪಂ ಅಧ್ಯಕ್ಷರಾದ ಎಚ್‌.ಬಿ.ನಂದಿನಿ, ಸದಸ್ಯರಾದ ಕಾಳಿಂಗಪ್ಪ, ಹನುಮೇಶ, ಎಂಐಎಸ್ ಸಂಯೋಜಕರಾದ ಚನ್ಮಬಸಪ್ಪ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಟಿಎಇ ರವಿರಾಜ ಹೂಲಿ, ಗ್ರಾಪಂ ಸಿಬ್ಬಂದಿಗಳಾದ ಅಮರೇಗೌಡ, ಶಾಂತಪ್ಪ, ಕರಿಮ್, ಆರೋಗ್ಯ ಇಲಾಖೆ ಅಧಿಕಾರಿಗಳು, ತಾಪಂ ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.