ಶಾರ್ಟ್ ಸರ್ಕ್ಯೂಟ್: ಕಬ್ಬು ಬೆಳೆ ಭಸ್ಮ
Short circuit: Sugarcane crop burnt to ashes
ಇಂಡಿ 29: ತಾಲೂಕಿನ ತಡವಲಗಾ ಗ್ರಾಮದ ರೈತನಾದ ಶ್ರೀಶೈಲ ಮಳಸಿದ್ದಪ್ಪ ವಾಡಿ ಸರ್ವೇ ನಂಬರ್ 336 ಪೈಕಿ ನಾಲ್ಕು ಎಕರೆ ಜಮೀನು ರೈತನಿಗೆ ಸೇರಿದ ಕಬ್ಬಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಸುಮಾರು ಆರು ಲಕ್ಷ ರೂ. ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀಶೈಲ ಮಳಸಿದ್ದಪ್ಪ ವಾಡಿ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಜಮೀನಿನಲ್ಲಿ ಬೆಳೆದ 6 ಲಕ್ಷ ರೂ. ಮೌಲ್ಯದ 200 ಟನ್ ನಷ್ಟು ಕಬ್ಬು ಸುಟ್ಟಿದೆ.ಈ ಸುದ್ದಿ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿದ ರೈತನಿಗೆ ಇಂಡಿ ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಇರುವುದು ಒಂದೇ ಒಂದು ಅಗ್ನಿಶಾಮಕ ಗಾಡಿ, ಆ ಗಾಡಿ ಅಹಿರಸಂಗ ಗ್ರಾಮದಲ್ಲಿ ಅಗ್ನಿ ನಂದಿಸಲು ಹೋಗಿದೆ ಹಾಗೂ ಇನ್ನೊಂದು ಕೆಟ್ಟು ನಿಂತಿದೆ ಎಂದು ಹೇಳಿದರು.
ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ಬಂದು ಪರೀಶೀಲನೆ ಮಾಡಿದರು. ನಂತರ ಮಾತನಾಡಿದ ಹೆಸ್ಕಾಂ ವಲಯ ಅಧಿಕಾರಿ ಬಾಬಾನಗರ ಅವರು ಈ ಹೊಲದಲ್ಲಿ ಎಲ್ ಟಿ ಲೈನ್ ಹಾದು ಹೋಗಿದ್ದು ಅದು ಕಟ್ ಆಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆ ಕಬ್ಬು ಸುಟ್ಟು ಹೋಗಿದೆ ಎಂದು ಹೇಳಿದರು.
ಈ ಸುದ್ದಿ ತಿಳಿದು ತಡವಲಗಾ ಆಡಳಿತ ಅಧಿಕಾರಿ ಮಂಜುನಾಥ ಗುರುಬಟ್ಟಿ ಭೆೇಟಿ ನೀಡಿ ಪರೀಶೀಲನೆ ಮಾಡಿ ಪಂಚನಾಮೆ ಮಾಡಿದರು. ಆದರೆ ಹೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿಯಿಂದ ನನ್ನ ಕಬ್ಬು ಕಳೆದುಕೊಂಡೆ ಎಂದು ನೊಂದ ರೈತನ ಗೋಳು ಹೇಳತೀರದಾಗಿತ್ತು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 