ಟ್ರಯಲ್ಸ್ ನಡೆಸದಿರಲು ಶೂಟಿಂಗ್ ಸಂಸ್ಥೆ ನಿರ್ಧಾರ
ಪುಣೆ, ಏ 18,ಟೋಕಿಯೊ
ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷಕ್ಕೆ ಮುಂದೂಡಿಕೆಯಾಗಿದೆ. ಆದರೆ ಒಲಿಂಪಿಕ್ಸ್ ಗೆ
ದೇಶದ ಶೂಟರ್ ಗಳನ್ನು ಪ್ರಕಟಿಸಲು ಮತ್ತಷ್ಟು ಸಮಯ ಕಾಯದಿರಲು ಭಾರತೀಯ ರಾಷ್ಟ್ರೀಯ ರೈಫಲ್
ಸಂಸ್ಥೆ (ಎನ್ಆರ್ ಎಐ) ತೀರ್ಮಾನಿಸಿದೆ.ಕಳೆದ ಫೆಬ್ರವರಿವರೆಗೆ ನಡೆದ ಆಯ್ಕೆ
ಟ್ರಯಲ್ಸ್ ಗಳ ಆಧಾರದ ಮೇರೆಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎನ್ ಆರ್ ಎಐ
ಅಧ್ಯಕ್ಷ ರಣಿಂದರ್ ಸಿಂಗ್ ಹೇಳಿದ್ದಾರೆ. ಜತೆಗೆ ಇಡೀ ಒಂದು ವರ್ಷ ಕಾಲವಕಾಶವಿದ್ದರೂ
ಯಾವುದೇ ಆಯ್ಕೆ ಟ್ರಯಲ್ಸ್ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ಆಯ್ಕೆ
ಟ್ರಯಲ್ಸ್ ನಡೆಸುವುದರಿಂದ ಈಗಿರುವುದಕ್ಕಿಂತ ಉತ್ತಮವಾದ ಏನನ್ನೂ ಪಡೆಯಲಾಗದು ಎಂದು
ನಾನು ಭಾವಿಸಿದ್ದೇನೆ. ನಾವು ಜಾರಿಗೆ ತಂದ ನಿಯಮಗಳನ್ನು ಗೌರವಿಸುತ್ತೇವೆ ಮತ್ತು
ಬದ್ಧರಾಗಿರುತ್ತೇವೆ, ಎಂದು ರಣಿಂದರ್ ಸಿಂಗ್ ಹೇಳಿದ್ದಾರೆ.ಪ್ರತಿ ವಿಭಾಗದಲ್ಲಿ
ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿರುವವರು ತಂಡದಲ್ಲಿ ಸ್ಥಾನ ಪಡೆಯಲು ಲೆಕ್ಕ
ಹಾಕುತ್ತಾರೆ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಅವಕಾಶಗಳಿರುತ್ತವೆ ಎಂದು ಅವರು
ಹೇಳಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 