ಶಾಸಕ ಸಿ.ಎಸ್ ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಶಿವನಗೌಡ ಆಗ್ರಹ
Shivanagouda demands a ministerial post for MLA C.S. Nadagouda
ಮುದ್ದೇಬಿಹಾಳ 06 : ಆರು ಬಾರಿ ಮುದ್ದೇಬಿಹಾಳ ಮತಕ್ಷೇತ್ರದಿಂದ ಶಾಸಕರಾಗಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಬೆಳವಣಿಗೆಗೆ ಶಾಸಕ ಸಿ.ಎಸ್ ನಾಡಗೌಡರ ಪಾತ್ರ ಅಪಾರವಾದದ್ದು, ಜಿಲ್ಲೆಯಲ್ಲಿಯೇ ಹಿರಿಯ ಶಾಸಕರಾದ ನಾಡಗೌಡರಿಗೆ ಮುಂಬರುವ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕೆಂದು ಕೊಣ್ಣೂರ ಗ್ರಾ.ಪಂ ಮಾಜಿ ಸದಸ್ಯ ಶಿವನಗೌಡ ತಾಳಿಕೋಟಿ ಆಗ್ರಹಿಸಿದರು.ಮುದ್ದೇಬಿಹಾಳ ಕೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್.ನಾಡಗೌಡರು ಪಂಚಾಯಿತಿ ಮಟ್ಟದಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅಲ್ಲಿಂದೀಚೆಗೆ 6 ಬಾರಿ ಶಾಸಕರಾಗಿ ಆಯ್ಕೆಯಾದ ನಾಡಗೌಡರಗೆ ಸಂಪುಟದಲ್ಲಿ ಸ್ಥಾನಮಾನ ನೀಡಬೇಕೆಂದು ಅವರು ಒತ್ತಾಯಿಸಿದರು. ಮುದ್ದೇಬಿಹಾಳ ಮತಕ್ಷೇತ್ರ ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. ಈ ಮೊದಲು ಕ್ಷೇತ್ರ ದೇಶಮುಖ ಮನೆತನದ ಭದ್ರಕೊಟೆಯಾಗಿತ್ತು.
ಇಂತಹ ಕ್ಷೇತ್ರವನ್ನು ನಾಡಗೌಡರು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಂಡು ಆರು ಬಾರಿಗೆ ಶಾಸಕರಾಗಿ ಆಯ್ಕೆಯಾದ ನಾಡಗೌಡರನ್ನು ಸಚಿವ ಸ್ಥಾನ ನೀಡಿದರೆ ಅವರಿಗೆ ಕಾಂಗ್ರೆಸ್ ಪಕ್ಷ ಗೌರವಕೊಟ್ಟಂತೆ ಆಗುತ್ತದೆ ಎಂದರು.ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡರು, ಸುಮಾರು 40 ವರ್ಷಗಳ ಕಾಲ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬೆಳವಣಿಗೆಯಲ್ಲಿ ನಾಡಗೌಡರ ಪಾತ್ರ ದೊಡ್ಡದು. ಕಾಂಗ್ರೆಸ್ ಪಕ್ಷಕ್ಕೆ ಕಳೆದ 40 ವರ್ಷಗಳಿಂದ ನಾಡಗೌಡರು ಶ್ರಮಿಸಿದ್ದಾರೆ. ನಾಡಗೌಡರು ಅವರು ಆರು ಶಾಸಕರಾಗಿ ಹಾಗೂ ಕರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅತೀ ಹೆಚ್ಚು ಆದಾಯ ತಂದಿದ್ದಾರೆ. ಶಾಸಕರಿಗೆ ತಮಗೆ ನೀಡಿರುವ ಯಾವುದೇ ಕೆಲಸವನ್ನು ಅತ್ಯಂತ ಸಮಪರ್ಕವಾಗಿ ನಿಭಾಯಿಸುವ ಜವಾಬ್ದಾರಿ ಅವರಲ್ಲಿದೆ. ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿದ ಕ್ರಿಯಾಶೀಲ ಸಂಘಟನಾತಕ ವ್ಯಕ್ತಿತ್ವ ಹೊಂದಿರುವ ನಾಡಗೌಡರನ್ನು ಸಂಪುಟಕ್ಕೆ ತೆಗೆದುಕೊಂಡರೆ 2028 ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ, ಬಾಗಲಕೋಟ ಜಿಲ್ಲೆಯ ವ್ಯಾಪ್ತಿಯ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬರಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಶಿವನಗೌಡ ತಾಳಿಕೋಟಿ ಹೇಳಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 