ಸಾವಳಗಿಯಲ್ಲಿ ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವ
Shivalingeshwara Palanquin Procession in Savalagi
ಲೋಕದರ್ಶನ ವರದಿ
ಆಲಮೇಲ 07: ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದಲ್ಲಿ ಆರಾಧ್ಯ ದೈವ ಸಾವಳಗಿ ಶಿವಲಿಂಗೇಶ್ವರ ದೇವಾಲಯದಲ್ಲಿ 24 ಗಂಟೆಗಳ ಸಪ್ತಾಹ ಭಜನೆ ಹಾಗೂ ಓಂ ನಾಮಸ್ಮರಣೆ ನಡೆಯಿತು. ನಂತರ ಶಿವಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು. ವಿವಿಧ ವಾದ್ಯವೈಭವಗಳೊಂದಿಗೆ ಮೆರವಣಿಗೆ ಸಾಗಿದ್ದು, ಗುರು ಸಂಸ್ಥಾನ ಹಿರೇಮಠದ ದೇವರ ದರ್ಶನ ಪಡೆದು ಗ್ರಾಮದಲ್ಲಿ ಸಂಚರಿಸಲಾಯಿತು. ಭಕ್ತರು ದೇವರಿಗೆ ನೈವೇದ್ಯ ಅರ್ಿಸಿ ಭಕ್ತಿಭಾವ ಮೆರೆದರು. ಮೂಲಸ್ಥಳಕ್ಕೆ ಆಗಮಿಸಿದ ಬಳಿಕ ಅರ್ಚಕ ಚೆನ್ನಯ್ಯ ಸ್ವಾಮೀಜಿಯವರು ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಶಂಖನಾದ ಮೊಳಗಿಸಿದರು. ಬಳಿಕ ಸರತಿ ಸಾಲಿನಲ್ಲಿ ಭಕ್ತರು ದೇವರ ದರ್ಶನ ಪಡೆದರು. ನಂತರ ಅನ್ನ ಸಂತರೆ್ಣ ನಡೆಯಿತು. ಈ ಸಂದರ್ಭದಲ್ಲಿ ಪುಂಡಲೀಕ ಜೋಶಿ ಅವರ ಕಲಾತಂಡ ಸಂಗೀತ ಸೇವೆ ಸಲ್ಲಿಸಿತು. ಸಮಿತಿಯ ಹಿರಿಯರಾದ ಶಂಕರ ಹಳಿಮನಿ ಹಾಗೂ ಪಂಚಮಸಾಲಿ ಸಮಾಜದ ಅಧ್ಯಕ್ಷ ನಾನಗೌಡ ಅಫಜಲಪುರ ಅವರು ಗಣ್ಯರು ಮತ್ತು ಕಲಾವಿದರನ್ನು ಸತ್ಕರಿಸಿ ಗೌರವಿಸಿದರು. ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ಎಲ್ಲ ಸದಸ್ಯರು ಭಕ್ತಿಯಿಂದ ಸೇವೆ ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 